ಮಗನನ್ನು ಮತಾಂತರಕ್ಕಾಗಿ ಸೊಸೆ ದಾರಿ ತಪ್ಪಿಸಿದ್ದಾಳೆಂದು ಕುಟುಂಬದವರ ಆರೋಪ
ಆಗ್ರಾದಲ್ಲಿ ನಡೆದ ಮತಾಂತರ

ಹಾಥರಸ (ಉತ್ತರಪ್ರದೇಶ) – ಮತಾಂತರದ ಸಂಶಯದ ಮೇರೆಗೆ ಸ್ವಂತ ಮಗ ಮತ್ತು ಸೊಸೆಗೆ ಚಪ್ಪಲಿಗಳ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಂದೆ ಮತ್ತು ಸಹೋದರ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ. (ಈ ಮೂವರನ್ನು ವಶಕ್ಕೆ ಪಡೆಯುವುದರ ಜೊತೆಗೆ ಮಗ ಮತ್ತು ಸೊಸೆಯನ್ನು ಮತಾಂತರ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು! – ಸಂಪಾದಕರು) ಯುವಕನ ತಾಯಿ ಈ ಬಗ್ಗೆ ಮಾತನಾಡಿ, “ತನ್ನ ಸೊಸೆಯು ಮಗನನ್ನು ಮತಾಂತರಕ್ಕಾಗಿ ದಾರಿ ತಪ್ಪಿಸಿದ್ದಾಳೆ. ಸೊಸೆಯು ಕ್ರೈಸ್ತ ಸಮುದಾಯಕ್ಕೆ ಸೇರಿದವಳಾಗಿದ್ದು, ಆಕೆ ಕ್ರೈಸ್ತ ಕಾರ್ಯಕ್ರಮಗಳಿಗೆ ಹೋಗುತ್ತಿದ್ದಳು. ಸೊಸೆಯ ತವರು ಮನೆಯವರು ಮೊದಲೇ ಮಗನನ್ನು ಮತಾಂತರ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಮಗನು ಮಂದಿರಕ್ಕೆ ಹೋಗುವುದನ್ನು ಬಿಟ್ಟಿದ್ದ, ಸಮಾಜದೊಂದಿಗೂ ಸಂಪರ್ಕ ಕಡಿದುಕೊಂಡಿದ್ದ!
ಕುಟುಂಬದ ಸದಸ್ಯರು ತಿಳಿಸಿರುವಂತೆ, ಮಗನು ದೀರ್ಘಕಾಲ ಆಗ್ರಾದಲ್ಲಿ ವಾಸವಾಗಿದ್ದನು. ಅಲ್ಲಿಯೇ ಆತನ ಮತಾಂತರ ಮಾಡಲಾಗಿತ್ತು. ಮಗ ಮತ್ತು ಸೊಸೆ ಗ್ರಾಮಕ್ಕೆ ಮರಳಿದಾಗ ಅವರ ವರ್ತನೆಯು ಸಂಪೂರ್ಣವಾಗಿ ಬದಲಾಗಿತ್ತು. ಅವರು ದೇವಸ್ಥಾನಕ್ಕೆ ಹೋಗುತ್ತಿರಲಿಲ್ಲ ಅಥವಾ ಯಾರಿಂದಲೂ ಪ್ರಸಾದವನ್ನು ಸ್ವೀಕರಿಸುತ್ತಿರಲಿಲ್ಲ. ಶುಭಾಶಯ ಕೋರುವಾಗ ಯಾವುದೇ ದೇವರ ಹೆಸರನ್ನು ತೆಗೆದುಕೊಳ್ಳುತ್ತಿರಲಿಲ್ಲ. ಅವರು ಕುಟುಂಬ ಮತ್ತು ಸಮಾಜದ ಜನರೊಂದಿಗೆ ಸಂಪರ್ಕ ಕಡಿದುಕೊಳ್ಳಲು ಪ್ರಾರಂಭಿಸಿದ್ದರು. (‘ಮತಾಂತರಗೊಂಡವರು ತಮ್ಮ ಮೂಲ ಧರ್ಮದ ಬಗ್ಗೆ ಹೆಚ್ಚು ದ್ವೇಷವಿಟ್ಟುಕೊಳ್ಳುತ್ತಾರೆ’ ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ! – ಸಂಪಾದಕರು)
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!