ದೇವತೆಯ ಮೂರ್ತಿಯನ್ನು ಸ್ಪರ್ಶಿಸಲು ನಿಷೇಧವಿದ್ದರೆ ಸಂವಿಧಾನ ಸಹಾಯ ಮಾಡುತ್ತದೆಯೇ? – ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆ

ಶಬರಿಮಲೆ ದೇವಾಲಯದಲ್ಲಿ ೧೦ ರಿಂದ ೫೦ ವಯೋಮಾನದ ಮಹಿಳೆಯರ ಪ್ರವೇಶದ ಪ್ರಕರಣ

ನವದೆಹಲಿ – ಓರ್ವ ಶ್ರದ್ಧಾವಂತ ಭಕ್ತನಿಗೆ ದೇವತೆಯನ್ನು ಸ್ಪರ್ಶಿಸಲು ನಿಷೇಧಿಸಿದರೆ, ಅಂತಹ ಸಮಯದಲ್ಲಿ ಆತನ ರಕ್ಷಣೆಗಾಗಿ ಸಂವಿಧಾನವು ಮುಂದೆ ಬರುತ್ತದೆಯೇ?, ಎಂಬ ಪ್ರಶ್ನೆಯನ್ನು ಸರ್ವೋಚ್ಚ ನ್ಯಾಯಾಲಯವು ಶಬರಿಮಲೆ ದೇವಸ್ಥಾನದಲ್ಲಿ ೧೦ ರಿಂದ ೫೦ ವಯೋಮಾನದ ಮಹಿಳೆಯರ ಪ್ರವೇಶದ ಪ್ರಕರಣದ ಮೇಲಿನ ವಿಚಾರಣೆಯ ಸಮಯದಲ್ಲಿ ಕೇಳಿದೆ.

ಈ ಪ್ರಕರಣದಲ್ಲಿ ದೇವಸ್ಥಾನದ ಪ್ರಮುಖ ಅರ್ಚಕರ ಪರವಾಗಿ ಹೇಳಲಾಗಿದ್ದು, ಪೂಜಾ ಪದ್ಧತಿ ಮತ್ತು ಧಾರ್ಮಿಕ ವಿಧಿಗಳು ಧರ್ಮದ ಅವಿಭಾಜ್ಯ ಅಂಗಗಳಾಗಿದ್ದು ಅವುಗಳನ್ನು ಧಾರ್ಮಿಕ ಹಕ್ಕುಗಳೆಂದು ಪರಿಗಣಿಸಬೇಕು. ಭಕ್ತನು ದೇವಸ್ಥಾನಕ್ಕೆ ಬಂದಾಗ, ಅವನು ದೇವತೆಯ ಸ್ವರೂಪ ಮತ್ತು ಅದಕ್ಕೆ ಸಂಬಂಧಿಸಿದ ಪರಂಪರೆಯನ್ನು ಸ್ವೀಕರಿಸುವುದು ಅವಶ್ಯಕವಾಗಿರುತ್ತದೆ.

ಸಂಪಾದಕೀಯ ನಿಲುವು

  • ಮಸೀದಿಯಲ್ಲಿ ಮಹಿಳೆಯರ ಪ್ರವೇಶಕ್ಕಾಗಿ ಸಂವಿಧಾನವು ಮುಂದಾಗುತ್ತಿಲ್ಲ ಎಂದಾದರೆ, ದೇವಸ್ಥಾನದಲ್ಲಿ ಮೂರ್ತಿಯ ಸ್ಪರ್ಶಕ್ಕಾಗಿ ಅದು ಹೇಗೆ ಮುಂದಾಗಬಹುದು?, ಎಂಬ ಪ್ರಶ್ನೆ ಹಿಂದೂ ಜನತೆಯ ಮನಸ್ಸಿನಲ್ಲಿ ಉದ್ಭವಿಸಬಹುದು!
  • ಹಿಂದೂಗಳ ದೇವಸ್ಥಾನಗಳಲ್ಲಿ ಪ್ರವೇಶದ ಸಂದರ್ಭದಲ್ಲಿ ಮತ್ತು ಮೂರ್ತಿಯನ್ನು ಸ್ಪರ್ಶಿಸುವ ಸಂದರ್ಭದಲ್ಲಿ ಪರಂಪರೆ ಹಾಗೂ ಶಾಸ್ತ್ರವಿರುವುದರಿಂದ ಅದನ್ನು ಪಾಲಿಸುವುದು ಅವಶ್ಯಕವಾಗಿದೆ!