ನಾಸಿಕ್ ಟಿಸಿಎಸ್ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಅನೇಕ ಜಿಲ್ಲೆಗಳ ಬಹುರಾಷ್ಟ್ರೀಯ ಕಂಪನಿಗಳಲ್ಲಿ 'ಕಾರ್ಪೊರೇಟ್ ಜಿಹಾದ್', 'ಹಿಂದೂ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ' ಮತ್ತು 'ಜಿಹಾದಿ ಭಯೋತ್ಪಾದನೆ' ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ!

ಬೆಂಗಳೂರು – ಮಹಾರಾಷ್ಟ್ರದ ನಾಸಿಕ್ ಟಿಸಿಎಸ್ ಐ ಟಿ ಕಂಪನಿಯಲ್ಲಿ ಬಹಿರಂಗಗೊಂಡಿರುವ ಘಟನೆ ಕೇವಲ ಮಹಿಳಾ ಹಿಂಸೆ ಪ್ರಕರಣವಲ್ಲ; ಇದು ಆಳವಾದ ವಿಷಕಾರಿ ಜಿಹಾದಿ ಮನೋಭಾವ ಮತ್ತು ಸಂಘಟಿತ ಅಪರಾಧದ ಒಂದು ಭಾಗವಾಗಿದೆ ಎಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಆಯೋಜಿಸಲಾದ ಆಂದೋಲನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ್ ಗೌಡ ಕಳವಳ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಶ್ರೀರಾಮ ಸೇನೆಯ ಸುಂದ್ರೇಶ್ ನರ್ಗಲ್,ಶ್ರೀನಿವಾಸ್ ಗುರೂಜಿ, ರಾಷ್ಟ್ರೀಯ ಪರಿಷತ್ ನ ವಿಕ್ರಮ್ ಶೆಟ್ಟಿ, ರಣರಾಗಿಣಿ ಶಾಖೆಯ ಸೌ. ಭವ್ಯ ಗೌಡ, ದುರ್ಗಾವಾಹಿನಿ ಸೌ. ಜ್ಯೋತಿ, ವಿಶ್ವ ಹಿಂದೂ ಪರಿಷತ್, ರಾಷ್ಟ್ರರಕ್ಷಣಾ ಪಡೆಯ ಕಾರ್ಯಕರ್ತರು ಹಾಗೂ ಸಮಸ್ತ ಹಿಂದೂ ಸಂಘಟನೆಗಳ ಪ್ರಮುಖರು ಸೇರಿದಂತೆ 300ಕ್ಕೂ ಅಧಿಕ ಧರ್ಮಾಭಿಮಾನಿ ಉಪಸ್ಥಿತರಿದ್ದರು.
MNC ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಹಿಂದೂ ಮಹಿಳಾ ನೌಕರರ ದೂರಿನ ಪ್ರಕಾರ, ಕಳೆದ ನಾಲ್ಕು ವರ್ಷಗಳಿಂದ ಉದ್ದೇಶಪೂರ್ವಕವಾಗಿ ಹಿಂದೂ ಮಹಿಳೆಯರನ್ನು ಗುರಿಯಾಗಿಸಿ, ಅವರ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ, ಮತಾಂತರಕ್ಕೆ ಒತ್ತಾಯ, ಗೋಮಾಂಸ ಸೇವಿಸಲು ಬಲವಂತ ಹಾಗೂ ನಮಾಜ್ ಮಾಡುವಂತಹ ಇಸ್ಲಾಮಿಕ್ ಧಾರ್ಮಿಕ ಚಟುವಟಿಕೆಗಳಿಗೆ ಬಲಾತ್ಕಾರವಾಗಿ ಒತ್ತಾಯಿಸುವ ಘಟನೆಗಳು ನಡೆದಿದೆ. ಕಂಪನಿಯ ಉನ್ನತ ಹುದ್ದೆಗಳಲ್ಲಿ ಇರುವ ಕೆಲವು ಮುಸ್ಲಿಂ ಟೀಮ್ ಲೀಡರ್ ಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಈ ಮಹಿಳಾ ನೌಕರರ ಮೇಲೆ ಇಸ್ಲಾಂಗೆ ಮತಾಂತರ ಮಾಡಲು ಒತ್ತಡ ಹೇರಿದ್ದಾರೆ. ಮಹಿಳೆಯರು ದೂರು ನೀಡಲು ಪ್ರಯತ್ನಿಸಿದಾಗ, ಅವರಿಗೆ ಉದ್ಯೋಗದಿಂದ ತೆಗೆದುಹಾಕುವ ಬೆದರಿಕೆ ನೀಡಲಾಗಿದೆ ಅಥವಾ ಇನ್ನಷ್ಟು ಹಿಂಸೆಗೊಳಪಡಿಸಲಾಗಿದೆ. ಕಂಪನಿ ಆಡಳಿತವು ಈ ದೂರುಗಳನ್ನು ನಿರ್ಲಕ್ಷಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದು ಕೇವಲ ವೈಯಕ್ತಿಕ ಅಪರಾಧವಲ್ಲ; ಕಾರ್ಯಸ್ಥಳದಲ್ಲಿ ‘ಇಸ್ಲಾಮಿಕ್ ಭಯೋತ್ಪಾದನೆ’ ಸೃಷ್ಟಿಸುವ ಸಂಘಟಿತ ಪ್ರಯತ್ನವಾಗಿದೆ.
ಸುದ್ದಿಗಳ ಪ್ರಕಾರ, ಈ ಪ್ರಕರಣದಲ್ಲಿ 9 ಎಫ್‌ಐಆರ್‌ಗಳು ದಾಖಲಾಗಿದ್ದು, 7 ಆರೋಪಿಗಳನ್ನು ಬಂಧಿಸಲಾಗಿದೆ; ವಿಶೇಷ ತನಿಖಾ ದಳ (SIT) ರಚಿಸಲಾಗಿದೆ ಮತ್ತು ಕಂಪನಿಯ ಇತರ ಶಾಖೆಗಳಲ್ಲಿಯೂ ತನಿಖೆ ನಡೆಯುತ್ತಿದೆ. ಈ ಗಂಭೀರ ವಿಷಯವನ್ನು ಗಮನದಲ್ಲಿಟ್ಟುಕೊಂಡು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ತನ್ನ ಅಧಿಕೃತ ನಿಲುವು ಮತ್ತು
ಬೇಡಿಕೆಗಳನ್ನು ಕೆಳಕಂಡಂತೆ ಮಂಡಿಸುತ್ತದೆ
೧. ವಸ್ತುನಿಷ್ಠ ಹಿನ್ನೆಲೆ ಮತ್ತು ಗಂಭೀರತೆ
ಈ ಕಂಪನಿಯಲ್ಲಿ 7 ಆರೋಪಿಗಳು ಬಂಧಿತರಾಗಿದ್ದರೆ, ಇತರ ನಗರಗಳ ಶಾಖೆಗಳಲ್ಲಿ ಎಷ್ಟು ಮಂದಿ ಇರಬಹುದು? ಇದು ಕೇವಲ ನಾಸಿಕ್ ನಗರಕ್ಕೆ ಸೀಮಿತವಲ್ಲ; ಬೆಂಗಳೂರು ಸೇರಿದಂತೆ ರಾಜ್ಯದ ಹಾಗೂ ದೇಶದ ಇತರ ಭಾಗಗಳಲ್ಲಿಯೂ ವ್ಯಾಪಿಸಿರುವ ದೊಡ್ಡ ‘ಕಾರ್ಪೊರೇಟ್ ಜಿಹಾದ್ ಸಂಚು’ ಆಗಿರಬಹುದು. ಇದರ ಹಿಂದೆ ಇರುವ ‘ಲವ್ ಜಿಹಾದ್’, ‘ಇಸ್ಲಾಮಿಕ್ ಭಯೋತ್ಪಾದನೆ’ ಮತ್ತು ಮತಾಂತರ ಜಾಲ ಕುರಿತು ಸಮಗ್ರ ತನಿಖೆ ಅಗತ್ಯವಾಗಿದೆ.
೨. ಕಾನೂನು ವಿಧಿಗಳ ಉಲ್ಲಂಘನೆ
ಈ ಘಟನೆಗಳಿಂದ ಭಾರತೀಯ ಕಾನೂನಿನ ಅನೇಕ ಮಹತ್ವದ ವಿಧಿಗಳು ಉಲ್ಲಂಘನೆಯಾಗಿವೆ
ಅ. ಕಾರ್ಯಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಅಧಿನಿಯಮ, 2013: ಈ ಕಾನೂನಿನ ಸ್ಪಷ್ಟ ಉಲ್ಲಂಘನೆ ನಡೆದಿದೆ. ಆಂತರಿಕ ದೂರು ಸಮಿತಿ (ICC) ಇದ್ದರೂ ನ್ಯಾಯ ಸಿಗದಿರುವುದಕ್ಕೆ ತನಿಖೆ ಅಗತ್ಯ.
ಆ. ಭಾರತೀಯ ನ್ಯಾಯ ಸಂಹಿತೆ: ಕಿರುಕುಳ, ಅತ್ಯಾಚಾರ, ಬೆದರಿಕೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು.
ಇ. ಧಾರ್ಮಿಕ ಸ್ವಾತಂತ್ರ್ಯ (ಅನುಚ್ಛೇದ 25): ಯಾರನ್ನಾದರೂ ಅವರ ಇಚ್ಛೆಗೆ ವಿರುದ್ಧವಾಗಿ ಧಾರ್ಮಿಕ ಆಚರಣೆಗಳಿಗೆ ಬಲವಂತ ಮಾಡುವುದು ಸಂವಿಧಾನಾತ್ಮಕ ಹಕ್ಕಿನ ಉಲ್ಲಂಘನೆ.
೩. ‘ಕಾರ್ಪೊರೇಟ್ ಜಿಹಾದ್’ ಸಾಧ್ಯತೆ
ಸಂಘಟಿತವಾಗಿ ಹಿಂದೂ ಮಹಿಳೆಯರನ್ನು ಗುರಿಯಾಗಿಸಿ, ಅವರನ್ನು ಮತಾಂತರ ಅಥವಾ ಇಸ್ಲಾಮಿಕ್ ಆಚರಣೆಗಳಿಗೆ ಒತ್ತಾಯಿಸಿರುವುದು ‘ಕಾರ್ಪೊರೇಟ್ ಜಿಹಾದ್’ ಎನ್ನುವ ಅನುಮಾನಕ್ಕೆ ಕಾರಣವಾಗಿದೆ. ಇದು ದೃಷ್ಟಿಯಿಂದ ಗಂಭೀರ ವಿಷಯವಾಗಿದೆ. ಭದ್ರತಾ
೪. ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಪ್ರಮುಖ ಬೇಡಿಕೆಗಳು
೧. ಈ ಪ್ರಕರಣವನ್ನು ರಾಜ್ಯ ಕ್ರಿಮಿನಲ್ ತನಿಖಾ ವಿಭಾಗದ ಅನುಭವೀ ಅಧಿಕಾರಿಗಳಿಂದ ವಿಶೇಷ ತನಿಖಾ ದಳದ ಮೂಲಕ ಕಾಲಮಿತಿಯಲ್ಲಿ ತನಿಖೆ ಮಾಡಬೇಕು.
೨. ಮುಖ್ಯ ಆರೋಪಿಗಳ ಜೊತೆಗೆ ಅವರಿಗೆ ರಕ್ಷಣೆ ನೀಡಿದ ಕಂಪನಿ ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಿಸಿ ಬಂಧಿಸಬೇಕು.
೩. ಇಂತಹ ಘಟನೆಗಳು ನಡೆದ ಕಂಪನಿಗಳ ವ್ಯವಹಾರ ಪರವಾನಗಿಯನ್ನು ರದ್ದು ಮಾಡಿ ಮುಚ್ಚಬೇಕು.
೪. ICC ಕಾರ್ಯವೈಖರಿಯ ಮೇಲೆ ಉನ್ನತ ಮಟ್ಟದ ತನಿಖೆ ನಡೆಸಬೇಕು.
೫. CCTV, ಇಮೇಲ್ ಹಾಗೂ ಡಿಜಿಟಲ್ ದಾಖಲೆಗಳನ್ನು ತಕ್ಷಣ ವಶಪಡಿಸಿಕೊಳ್ಳಬೇಕು.
೬. ಪೀಡಿತ ಮಹಿಳೆಯರಿಗೆ ಕಾನೂನು ಸಹಾಯ, ಸಲಹೆ ಮತ್ತು ಭದ್ರತೆ ಒದಗಿಸಬೇಕು.
೭. ದೂರುದಾರರ ಗುರುತು ರಹಸ್ಯವಾಗಿರಬೇಕು ಮತ್ತು ಉದ್ಯೋಗ ಭದ್ರತೆ ಖಚಿತಪಡಿಸಬೇಕು.
೮. ಕರ್ನಾಟಕ ರಾಜ್ಯದ ಎಲ್ಲಾ ಐಟಿ ಮತ್ತು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಭದ್ರತೆ ಮತ್ತು ಧಾರ್ಮಿಕ ಭೇದಭಾವ ವಿರೋಧಿ ಪರಿಶೀಲನೆ ನಡೆಸಬೇಕು.
೯. ನೈಟ್ ಶಿಫ್ಟ್ ಕಂಪನಿಗಳಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ಮತ್ತು CCTV ಕಡ್ಡಾಯ ಮಾಡಬೇಕು.
೧೦. ಬಲವಂತದ ಧರ್ಮಾಂತರ ಅಥವಾ ಧಾರ್ಮಿಕ ಒತ್ತಡದ ಮೇಲೆ ಕಠಿಣ ಶಿಕ್ಷೆ ವಿಧಿಸಬೇಕು.
೧೧. ತನಿಖೆಯನ್ನು ಕೇವಲ ಲೈಂಗಿಕ ಕಿರುಕುಳಕ್ಕೆ ಸೀಮಿತಗೊಳಿಸದೆ, ಸಂಘಟಿತ ಅಪರಾಧದ ದೃಷ್ಟಿಯಿಂದಲೂ ಪರಿಶೀಲಿಸಬೇಕು.
೧೨. ನೇಮಕಾತಿ ಪ್ರಕ್ರಿಯೆಯ ಪರಿಶೀಲನೆ ನಡೆಸಬೇಕು.
೧೩. ICC ಅನ್ನು ನಿರ್ಲಕ್ಷಿಸಿದ ಕಂಪನಿಗಳ CEO ಮತ್ತು ನಿರ್ದೇಶಕರ ವಿರುದ್ಧ ಕ್ರಿಮಿನಲ್ ನಿರ್ಲಕ್ಷ್ಯ ಪ್ರಕರಣ ದಾಖಲಿಸಬೇಕು.
೧೪. ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂ ಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಳ್ಳಬೇಕು ಮತ್ತು ಹೊಸ ಮಾರ್ಗಸೂಚಿಗಳನ್ನು ಹೊರಡಿಸಬೇಕು.
೧೫. ಮಹಿಳಾ ನೌಕರರಿಗಾಗಿ ತಿಂಗಳಿಗೆ ಒಮ್ಮೆ ಮಹಿಳಾ ಪೊಲೀಸ್ ಅಧಿಕಾರಿಗಳಿಂದ ಸಲಹಾ ಸಭೆ ನಡೆಸಬೇಕು.
೧೬. ಮಹಿಳಾ ದೌರ್ಜನ್ಯ ಮತ್ತು ಧಾರ್ಮಿಕ ಒತ್ತಡಗಳ ಕುರಿತು ರಾಷ್ಟ್ರೀಯ ಮಟ್ಟದ ಸಹಾಯವಾಣಿ ಆರಂಭಿಸಬೇಕು. ಅನಾಮಧೇಯ ದೂರುಗಳನ್ನೂ ಗಂಭೀರವಾಗಿ ಪರಿಗಣಿಸಬೇಕು.
೧೭. ಜಿಮ್ ಗಳಲ್ಲಿ ಮಹಿಳಾ ಭದ್ರತೆಗಾಗಿ ಮಹಿಳಾ ತರಬೇತುದಾರರನ್ನೇ ನಿಯೋಜಿಸಬೇಕು.
ಭಾರತವು ಋಷಿ-ಮುನಿಗಳ ಪುಣ್ಯಭೂಮಿ. ಇಲ್ಲಿ ‘ಕಾರ್ಪೊರೇಟ್’ ಹೆಸರಿನಲ್ಲಿ ಹಿಂದೂ ಮಹಿಳೆಯರ ಮೇಲೆ ಹಿಂಸೆ ನಡೆಯುವುದನ್ನು ಸಹಿಸಲಾಗುವುದಿಲ್ಲ. ಆಡಳಿತ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಇತರ ಸಂಘಟನೆಗಳೊಂದಿಗೆ ಸೇರಿ ತೀವ್ರ ಹೋರಾಟ ನಡೆಸಲಿದೆ.
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!