ತಂತ್ರಜ್ಞಾನ ಸಂಸ್ಥೆಯ ಮಾಜಿ ಉದ್ಯೋಗಿಯಿಂದ ಜಿಹಾದಿಗಳ ಕಾರ್ಯವೈಖರಿ ಬಹಿರಂಗ!

ನವ ದೆಹಲಿ – ದೇಶಾದ್ಯಂತದ ತಂತ್ರಜ್ಞಾನ ಸಂಸ್ಥೆಗಳಲ್ಲಿ (Tech Companies) ಕೆಲಸ ಮಾಡುವ ಹಿಂದೂ ಹುಡುಗಿಯರೇ ಜಿಹಾದಿಗಳ ಗುರಿಯಾಗಿದ್ದಾರೆ ಎಂದು ಹೇಳಲಾಗಿದೆ. ಮಹಾರಾಷ್ಟ್ರ ಪೊಲೀಸರು ನಾಸಿಕ್‌ನ ಸಂಸ್ಥೆಯೊಂದರಿಂದ ಬಂಧಿಸಿದ 6 ಮುಸಲ್ಮಾನ್ ತಂಡದ ಮುಖ್ಯಸ್ಥರು (Team Leads) ಕೇವಲ ಮಂಜುಗಡ್ಡೆಯ ತುದಿಯಷ್ಟೇ (Tip of the iceberg), ಇನ್ನು ಹೂತಿಟ್ಟಿರುವ ವಿಷಯಗಳು ಭೀಕರವಾಗಿವೆ ಎಂಬ ಆಘಾತಕಾರಿ ಮಾಹಿತಿಯನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿದ ಮಾಜಿ ಉದ್ಯೋಗಿಯೊಬ್ಬರು ‘ಆಪ್ ಇಂಡಿಯಾ’ ಸುದ್ಧಿಜಾಲತಾಣಕ್ಕೆ ನೀಡಿದ್ದಾರೆ.
ಮಹಾರಾಷ್ಟ್ರದ ನಾಸಿಕ್‌ನಲ್ಲಿ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ. ‘ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್’ (TCS) ಕಚೇರಿಯ ಉನ್ನತ ಹುದ್ದೆಯಲ್ಲಿರುವ ಮತಾಂಧ ಮುಸಲ್ಮಾನರು ಹಿಂದೂ ಮಹಿಳಾ ಮತ್ತು ಪುರುಷ ಉದ್ಯೋಗಿಗಳನ್ನು ಹೇಗೆ ಗುರಿಯಾಗಿಸಿಕೊಂಡು ಇಸ್ಲಾಮಿಕ್ ಜಿಹಾದ್‌ಗೆ ಎಳೆದರು ಎಂಬ ಬಗ್ಗೆ ಮಾಹಿತಿಗಳು ಹೊರಬರುತ್ತಿವೆ. ಇದರೊಂದಿಗೆ ತಂತ್ರಜ್ಞಾನ ಸಂಸ್ಥೆಗಳ ಕಾರ್ಯವೈಖರಿಯ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.
TCS Nashik Scandal Raises Alarming Questions on Workplace Safety!
Hindu girls working in technology firms across the country are the new targets of Jihadis
A former employee of a technology firm revealed the Modus Operandi of the Jihadis
At present, Hindus are not safe in any… pic.twitter.com/Z8dJTKdU2i
— Sanatan Prabhat (@SanatanPrabhat) April 19, 2026
ಮತಾಂಧ ಜಿಹಾದಿಗಳ ಕಾರ್ಯವೈಖರಿ!
ಈ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿ ಅಲ್ಲಿನ ಪರಿಸ್ಥಿತಿಯನ್ನು ಹತ್ತಿರದಿಂದ ಕಂಡ ಮಾಜಿ ಉದ್ಯೋಗಿಯೊಬ್ಬರು ಹೇಳಿದ್ದೆಂದರೆ:
1. ಈ ಕ್ಷೇತ್ರದಲ್ಲಿ ಕೆಲಸ ಪಡೆಯಲು ಉನ್ನತ ಪದವಿಯ ಅಗತ್ಯವಿರುವುದಿಲ್ಲ. ಸ್ವಲ್ಪಮಟ್ಟಿಗೆ ಇಂಗ್ಲಿಷ್ ಬರುತ್ತಿದ್ದರೂ ಸಹ 20 ರಿಂದ 30 ಸಾವಿರ ರೂಪಾಯಿ ಸಂಬಳದ ಕೆಲಸ ಸಿಗಬಹುದು. ಇಲ್ಲಿ ಎರಡು ರೀತಿಯ ಜನರು ಕೆಲಸ ಮಾಡುತ್ತಾರೆ – ಮೊದಲನೆಯವರು, ಹೆಚ್ಚು ವಿದ್ಯಾವಂತರಲ್ಲದ ಮತ್ತು ಒಂದೇ ಸ್ಥಳದಲ್ಲಿ ದೀರ್ಘಕಾಲ ಕೆಲಸ ಮಾಡುವ ಇಚ್ಛೆ ಉಳ್ಳವರು. ಎರಡನೆಯವರು, ಕಾಲೇಜು ಓದುತ್ತಿರುವ ಹಿಂದೂ ಯುವಕ-ಯುವತಿಯರು, ಇವರು ತಮ್ಮ ಜೀವನೋಪಾಯಕ್ಕಾಗಿ ರಾತ್ರಿ ಪಾಳಿಯಲ್ಲಿ (Night Shift) ಕೆಲಸ ಮಾಡುತ್ತಾರೆ.
2. ನನ್ನ ಕಾಲೇಜು ದಿನಗಳಲ್ಲಿ ಸ್ವಂತ ಖರ್ಚುಗಳನ್ನು ನಿಭಾಯಿಸಲು ನಾನು ಕೂಡ ಒಂದು ತಂತ್ರಜ್ಞಾನ ಸಂಸ್ಥೆಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದ್ದೇನೆ. ಯಾವಾಗ ಒಬ್ಬ ಮುಸಲ್ಮಾನ್ ವ್ಯಕ್ತಿ ತಂಡದ ಮುಖ್ಯಸ್ಥ (Group Leader), ತರಬೇತುದಾರ (Trainer) ಅಥವಾ ಎಚ್.ಆರ್. (HR) ನಂತಹ ಉನ್ನತ ಹುದ್ದೆಗೇರುತ್ತಾನೋ, ಆಗ ಅವನು ಅಲ್ಲಿನ ಸಂಪೂರ್ಣ ವ್ಯವಸ್ಥೆಯನ್ನೇ ಬದಲಿಸುತ್ತಾನೆ. ಅವರು ಮುಸಲ್ಮಾನ್ ಯುವಕರನ್ನು ಸಂದರ್ಶನಗಳಲ್ಲಿ ಸುಲಭವಾಗಿ ತೇರ್ಗಡೆಗೊಳಿಸಿ ವ್ಯವಸ್ಥೆಯೊಳಗೆ ಸೇರಿಸಿಕೊಳ್ಳುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ.
3. ಹಿಂದೂ ಯುವಕರು ಸಾಮಾನ್ಯವಾಗಿ 2-3 ವರ್ಷಗಳಲ್ಲಿ ತಮ್ಮ ಮುಂದಿನ ಶಿಕ್ಷಣವನ್ನು ಪೂರ್ಣಗೊಳಿಸಿ ಇತರ ಕ್ಷೇತ್ರಗಳಿಗೆ ಹೋಗುತ್ತಾರೆ. ಆದರೆ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಮುಸಲ್ಮಾನ್ ಯುವಕರು ವರ್ಷಾನುಗಟ್ಟಲೆ ಒಂದೇ ಕಡೆ ಇರುತ್ತಾರೆ; ಏಕೆಂದರೆ ಅವರಿಗೆ ಮುಂದೆ ಶಿಕ್ಷಣ ಪಡೆಯುವ ಅಗತ್ಯವಿರುವುದಿಲ್ಲ. ಪರಿಣಾಮವಾಗಿ ಅವರು ಸಂಸ್ಥೆಯ ತರಬೇತಿ ವಿಭಾಗದಿಂದ ಹಿಡಿದು ವ್ಯವಸ್ಥಾಪಕ ಮಂಡಳಿಯವರೆಗೆ (Management) ಎಲ್ಲಾ ಪ್ರಮುಖ ಹುದ್ದೆಗಳನ್ನು ಅಲಂಕರಿಸುತ್ತಾರೆ. ಒಮ್ಮೆ ಅವರಿಗೆ ಅಧಿಕಾರ ಸಿಕ್ಕಿತೆಂದರೆ ಅವರ ಅಸಲಿ ಆಟ ಶುರುವಾಗುತ್ತದೆ. ಆಗ ಅವರ ಮುಖ್ಯ ಗುರಿ ಸಂಸ್ಥೆಗೆ ಹೊಸದಾಗಿ ಸೇರ್ಪಡೆಗೊಂಡ ಹಿಂದೂ ಹುಡುಗಿಯರಾಗಿರುತ್ತಾರೆ.
ನಾಸಿಕ್ ಟಿಸಿಎಸ್ ಪ್ರಕರಣದ ತನಿಖೆ ನಡೆಸುವಾಗ ಪೊಲೀಸರಿಗೆ ತಿಳಿದುಬಂದಿದ್ದೇನೆಂದರೆ, ಮುಸಲ್ಮಾನ್ ಉದ್ಯೋಗಿಗಳು ಕಚೇರಿಯಲ್ಲಿಯೇ ಒಂದು ರಹಸ್ಯ ಮುಸಲ್ಮಾನ್ ‘ವಾಟ್ಸಾಪ್’ ಗುಂಪನ್ನು ರಚಿಸಿದ್ದರು. ಈ ಗುಂಪಿನಲ್ಲಿ ಹಿಂದೂ ಹುಡುಗಿಯರ ಫೋಟೋಗಳನ್ನು ಕಳುಹಿಸಲಾಗುತ್ತಿತ್ತು ಮತ್ತು ‘ಇಂದು ಯಾರ ಸರದಿ?’, ‘ಯಾವ ಹುಡುಗಿ ದುರ್ಬಲವಾಗಿದ್ದಾಳೆ ಮತ್ತು ಸುಲಭವಾಗಿ ಬಲೆಗೆ ಬೀಳುತ್ತಾಳೆ?’, ‘ಯಾರನ್ನು ಹೇಗೆ ಬ್ಲ್ಯಾಕ್‌ಮೇಲ್ ಮಾಡಬೇಕು?’ ಎಂಬಂತಹ ಚರ್ಚೆಗಳು ಈ ಗುಂಪಿನಲ್ಲಿ ನಡೆಯುತ್ತಿದ್ದವು. |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ