‘ಗಜ್ವಾ-ಎ-ಹಿಂದ್’ಗಾಗಿ ಬಾಂಬ್ ತಯಾರಿಸುವ ಸಂಚು ಬಯಲು
ಮುಸ್ಲಿಂ ಯುವಕರನ್ನು ‘ಖಿಲಾಫತ್’ಗಾಗಿ ಕಟ್ಟರ್ ಪಂಥೀಯರನ್ನಾಗಿ ಮಾಡುವ ಪ್ರಯತ್ನ
(ಗಜ್ವಾ-ಎ-ಹಿಂದ್: ಭಾರತವನ್ನು ಇಸ್ಲಾಮೀಕರಣಗೊಳಿಸಲು ನಡೆಸುವ ಯುದ್ಧ)
(ಖಿಲಾಫತ್: ಖಲೀಫನ (ಧರ್ಮಾಧಿಕಾರಿ) ಧಾರ್ಮಿಕ ಮತ್ತು ರಾಜಕೀಯ ಅಧಿಕಾರ)

ನವದೆಹಲಿ – ದೆಹಲಿ ಪೊಲೀಸರು ಬಿಹಾರ, ಒಡಿಶಾ ಮತ್ತು ಮಹಾರಾಷ್ಟ್ರದಿಂದ ನಾಲ್ವರು ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಮೊಸೈಬ್ ಅಹ್ಮದ್, ಮಹಮ್ಮದ್ ಹಮ್ಮಾದ್, ಶೇಖ್ ಅಮೀರ್ ಮತ್ತು ಮಹಮ್ಮದ್ ಸೊಹೈಲ್ ಬಂಧಿತ ಆರೋಪಿಗಳಾಗಿದ್ದಾರೆ. ‘ಖುರಾಸಾನ್’ನಿಂದ (ಈಶಾನ್ಯ ಇರಾನ್, ಅಫ್ಘಾನಿಸ್ತಾನ, ಪಾಕಿಸ್ತಾನ, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಪ್ರದೇಶಗಳು) ಕಪ್ಪು ಬಾವುಟ ಹೊಂದಿರುವ ಸೈನ್ಯವೊಂದು ಎದ್ದು ಬರಲಿದ್ದು, ಅದು ಭಾರತೀಯ ಉಪಖಂಡದಾದ್ಯಂತ ‘ಖಿಲಾಫತ್’ ಸ್ಥಾಪಿಸಲಿದೆ ಎಂದು ಈ ಭಯೋತ್ಪಾದಕರು ನಂಬಿದ್ದರು. ಬಂಧಿತ ಆರೋಪಿಗಳು ಈ ಸೈನ್ಯಕ್ಕೆ ಸೇರಿ ‘ಗಜ್ವಾ-ಎ-ಹಿಂದ್’ನಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸುತ್ತಿದ್ದರು.
Delhi Police arrest 4 terrorists from 3 states involved in making bombs for “Ghazwa-e-Hind”, and radicalising Muslim youth for establishing a Caliphate.
Instead of housing such individuals in prison at public expense, the Government should ensure their cases are heard in… pic.twitter.com/abc3kwWt2j
— Sanatan Prabhat (@SanatanPrabhat) April 19, 2026
ಈ ಭಯೋತ್ಪಾದಕರು ಇತರ ಮುಸ್ಲಿಂ ಯುವಕರನ್ನು ಕಟ್ಟರ್ ಪಂಥೀಯರನ್ನಾಗಿ ಮಾಡುವ ಕೆಲಸವನ್ನೂ ಸಹ ಮಾಡುತ್ತಿದ್ದರು. ಒಬ್ಬ ಭಯೋತ್ಪಾದಕನಿಂದ ಬಾಂಬ್ ತಯಾರಿಸಲು ಬೇಕಾದ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಭಯೋತ್ಪಾದಕರು ಸಾಮಾಜಿಕ ಜಾಲತಾಣಗಳ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು. ಖಿಲಾಫತ್ ಸ್ಥಾಪಿಸಲು ಜಿಹಾದ್ ಮೂಲಕ ಇತರ ಮುಸ್ಲಿಂ ಯುವಕರನ್ನು ಪ್ರಚೋದಿಸಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಅಲ್ಲದೇ ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಸಂಗ್ರಹಿಸಿ ‘ರಿಮೋಟ್ ಕಂಟ್ರೋಲ್’ ಮೂಲಕ ಸ್ಫೋಟಿಸಬಹುದಾದ ಬಾಂಬ್‌ಗಳನ್ನು ತಯಾರಿಸುವ ಸಂಚು ರೂಪಿಸುತ್ತಿದ್ದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!