ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ದೈವೀ ವಾಣಿಯಿಂದ ಭಕ್ತಿಸತ್ಸಂಗದಲ್ಲಿ ಹರಿದುಬಂದ ಅಮೃತಬಿಂದು !

ಸತ್ಸಂಗ, ಶಾಸ್ತ್ರ, ಗುರು ಅಥವಾ ಗುರುಗಳ ಸಮಷ್ಟಿ ರೂಪದಿಂದ ಸಿಗುವ ಮಾರ್ಗದರ್ಶನವನ್ನು ಏಕಾಗ್ರತೆಯಿಂದ ಕೇಳಿಸಿಕೊಳ್ಳದಿದ್ದರೆ ನಮಗೆ ಅದರ ಅರ್ಥ ಸ್ಪಷ್ಟವಾಗುವುದಿಲ್ಲ. ಪರಿಣಾಮವಾಗಿ ನಮ್ಮ ಸಾಧನೆಯ ಮಾರ್ಗವೂ ತಪ್ಪಬಹುದು. ಅದಕ್ಕಾಗಿ ಸಾಧನೆಯಲ್ಲಿ ಹೇಳಿದ್ದನ್ನು ಕೇಳುವವೃತ್ತಿ ಎಂಬ ಗುಣದ ಅವಶ್ಯಕತೆ ಇದೆ.

೧. ಸಂತ ತುಳಸೀದಾಸರು ಹೇಳಿರುವ ಸತ್ಸಂಗದ ಮಹತ್ವ
ಸಂತ ತುಳಸೀದಾಸರು ಹೀಗೆ ಹೇಳಿದ್ದಾರೆ : ‘ಏಕ ಘಡಿ ಆಧೀ ಘಡಿ, ಆಧೀ ಕೀ ಪುನಿ ಆಧ | ತುಲಸೀ ಸಂಗತ ಸಾಧೂ ಕೀ, ಹರೇ ಕೋಟಿ ಅಪರಾಧ |’ ಅಂದರೆ ‘ಒಂದು ಘಳಿಗೆ ಅಥವಾ ಅದರ ಅರ್ಧದಷ್ಟು ಸಮಯ, ಅಂದರೆ ಕೇವಲ ೫-೬ ನಿಮಿಷಗಳ ಕಾಲ ನಮಗೆ ಸಂತರ ಸಹವಾಸ ಅಥವಾ ಸತ್ಸಂಗ ಲಭಿಸಿದರೂ, ನಮ್ಮ ಅನಂತ ಅಪರಾಧಗಳು ನಾಶವಾಗುತ್ತವೆ.’
೨. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಅನೇಕ ವರ್ಷಗಳಿಂದ ಸಾಧಕರಿಗೆ ಸತ್ಸಂಗದ ವಿವಿಧ ಮಾಧ್ಯಮಗಳನ್ನು ನೀಡಿದ್ದಾರೆ. ಈ ಎಲ್ಲಾ ಸತ್ಸಂಗಗಳು ಸಾಧಕರ ಉದ್ಧಾರಕ್ಕಾಗಿಯೇ ಇವೆ. ಗುರುಕೃಪಾಯೋಗಾನುಸಾರ ಅಷ್ಟಾಂಗ ಸಾಧನೆಯ ಅಷ್ಟದಳ-ಕಮಲದಲ್ಲಿ ‘ಸತ್ಸಂಗ’ವು ಒಂದು ಸುಂದರವಾದ ದಳವಾಗಿದೆ. ಸತ್ಸಂಗಗಳಿಂದ ನಮ್ಮ ಎಷ್ಟೋ ಪಾಪಗಳು ಮತ್ತು ಪ್ರಾರಬ್ಧಗಳು ನಾಶವಾಗುತ್ತವೆ. ಆದ್ದರಿಂದ, ಸತ್ಸಂಗದ ವಿಷಯದಲ್ಲಿ ಮನಸ್ಸಿನಲ್ಲಿರುವ ಅಡೆತಡೆಗಳನ್ನು ದೂರ ಮಾಡಿ, ಸತ್ಸಂಗಗಳ ಲಾಭವನ್ನು ಮನಃಪೂರ್ವಕವಾಗಿ ಪಡೆಯಲು ತಳಮಳದಿಂದ ಪ್ರಯತ್ನಿಸಬೇಕು. ಸತ್ಸಂಗದಲ್ಲಿ ಹೇಳಲಾಗುವ ಅಂಶಗಳನ್ನು ಏಕಾಗ್ರತೆಯಿಂದ ಕೇಳಿ ಹೃದಯದಲ್ಲಿ ಬಿಂಬಿಸಿಕೊಳ್ಳಿ.
೩. ಸತ್ಸಂಗಗಳಿಂದ ಭಗವಂತನ ದೈವೀ ವಾಣಿಯು ಕಾರ್ಯ ನಿರತವಾಗಿರುತ್ತದೆ. ಹೊರನೋಟಕ್ಕೆ ಮಾಧ್ಯಮಗಳು ಬೇರೆ ಬೇರೆಯಾಗಿ ಕಂಡರೂ, ಅವರ ವಾಣಿಯ ಮೂಲಕ ಭಗವಂತನ ಮತ್ತು ಗುರುದೇವರ ವಾಣಿಯೇ ಕೆಲಸ ಮಾಡುತ್ತಿರುತ್ತದೆ. ಆ ವಾಣಿಯಲ್ಲಿರುವ ದೈವೀ ಶಕ್ತಿಯು ಶಬ್ದಾತೀತವಾಗಿರುತ್ತದೆ. ಆ ‘ವಾಣಿಯ ಚೈತನ್ಯ’ವು ಹೃದಯದಲ್ಲಿ ಇಳಿಯುತ್ತದೆ. ಯಾರಲ್ಲಿ ಕೇಳಿಸಿಕೊಳ್ಳುವ ತಳಮಳವಿದೆಯೋ, ಅವರಿಗಾಗಿ ಭಗವಂತನ ದೈವೀ ವಾಣಿಯು ಚೈತನ್ಯದೊಂದಿಗೆ ಪ್ರವಹಿಸಿ, ಆ ಚೈತನ್ಯದ ಸ್ಪರ್ಶವು ಅಂತಃಕರಣಕ್ಕೆ ಆಗುತ್ತದೆ. ಆದ್ದರಿಂದ ಸಾಧಕರಲ್ಲಿ ಸತ್ಸಂಗದ ಅಂಶಗಳನ್ನು ಮನಃಪೂರ್ವಕವಾಗಿ ಕೇಳಲು ‘ಶುದ್ಧ ಗ್ರಹಣಶಕ್ತಿ’ ಇರಬೇಕು.
೪. ಸತ್ಸಂಗಗಳಲ್ಲಿ ಕೇವಲ ಶಬ್ದಗಳಿಂದಲ್ಲ, ಬದಲಾಗಿ ಶಬ್ದಗಳ ಆಚೆಗಿನ ಚೈತನ್ಯದ ಲಾಭವು ನಮಗೆ ಆಗುತ್ತಿರುತ್ತದೆ. ಆ ದಿವ್ಯ ಶಕ್ತಿಯು ನಮ್ಮ ಅಂತರ್ಮನದಲ್ಲಿ ಪ್ರವಹಿಸುತ್ತದೆ. ನಮಗೆ ಸತ್ಸಂಗದ ಪ್ರತಿಯೊಂದು ಶಬ್ದವನ್ನು ಹೃದಯದಿಂದ ಕೇಳಿ, ಆ ಶಬ್ದಗಳ ಆಚೆಗಿನ ಚೈತನ್ಯ ಅನುಭವಿಸಲು ಸಾಧ್ಯವಾಗಬೇಕು. ಅದರಿಂದ ನಮಗೆ ಸ್ಥೂಲ ಮತ್ತು ಸೂಕ್ಷ್ಮ ಎರಡೂ ಸ್ತರಗಳಲ್ಲಿ ಲಾಭವಾಗುತ್ತದೆ. ಇದಕ್ಕಾಗಿಯೇ ಭಗವಂತನ ಕೃಪೆಯಿಂದ ಲಭಿಸುತ್ತಿರುವ ಎಲ್ಲಾ ಸತ್ಸಂಗಗಳಿಗೆ ನಿಯಮಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ಉಪಸ್ಥಿತರಿರುವುದರ ಜೊತೆಗೆ, ಅದರಲ್ಲಿನ ಎಲ್ಲಾ ಅಂಶಗಳನ್ನು ಮನಃಪೂರ್ವಕವಾಗಿ ಕೇಳಬೇಕು. ಆ ಅಂಶಗಳನ್ನು ಬರೆದಿಟ್ಟುಕೊಂಡು ಅವುಗಳ ಬಗ್ಗೆ ಮನನ ಮತ್ತು ಚಿಂತನೆ ಮಾಡಬೇಕು. ಇದರಿಂದ ಖಂಡಿತವಾಗಿಯೂ ನಮ್ಮ ಪರಮ ಕಲ್ಯಾಣವಾಗುವುದು.
೫. ಶ್ರವಣದ ನಿಜವಾದ ಅರ್ಥ
ಯಾವುದೇ ಸತ್ಸಂಗದಲ್ಲಿ ಅನೇಕ ಜನರು ವಿಷಯವನ್ನು ಕೇಳುತ್ತಿರುತ್ತಾರೆ. ಆದರೆ ಅವರಲ್ಲಿ ಕೆಲವರಿಗೆ ಮಾತ್ರ ಶ್ರವಣದ ನಿಜವಾದ ಲಾಭವಾಗುತ್ತದೆ. ಶ್ರವಣವನ್ನು ಎಲ್ಲರೂ ಒಂದೇ ರೀತಿ ಮಾಡುತ್ತಾರೆ; ಆದರೆ ಪ್ರತಿಯೊಬ್ಬರೂ ಅದರ ಮನನ (ಚಿಂತನ) ಮಾಡುವುದಿಲ್ಲ. ಆದ್ದರಿಂದ ಎಲ್ಲರಿಗೂ ಸಮಾನ ಫಲ ಸಿಗುವುದಿಲ್ಲ. ಏಕಾಗ್ರತೆಯಿಂದ ಮಾಡದಿರುವ ಶ್ರವಣ, ಸಂಶಯಾತ್ಮಕ ಮನಸ್ಸಿನಿಂದ ಮಾಡಿದ ಶ್ರವಣ ಮತ್ತು ಮನಸ್ಸು ಅತ್ತಿತ್ತ ಅಲೆಯುತ್ತಿರುವಾಗ ಮಾಡಿದ ಶ್ರವಣವು ಯಾವುದೇ ಫಲವನ್ನು ನೀಡುವುದಿಲ್ಲ. ಗುರುಗಳ ವಚನಗಳಲ್ಲಿ ವಿಶ್ವಾಸವಿಟ್ಟು, ಅಂತಃಕರಣದಲ್ಲಿ ನಮ್ರತೆಯನ್ನು ಇಟ್ಟುಕೊಂಡು, ಮನಸ್ಸಿನ ವಿಕಾರ ಮತ್ತು ವಿಚಾರಗಳನ್ನು ಜಯಿಸಿ ಏಕಾಗ್ರಚಿತ್ತದಿಂದ ಶ್ರವಣ ಮಾಡಿದರೆ ಮಾತ್ರ ಶ್ರವಣದ ಫಲ ಸಿಗುತ್ತದೆ.
ಸಾಧಕರೇ, ಗುರುಕೃಪೆಯಿಂದ ನಮಗೆ ಲಭಿಸುತ್ತಿರುವ ಸತ್ಸಂಗಗಳಲ್ಲಿ ಯಾವ ಅಂಶಗಳನ್ನು ಹೇಳಲಾಗುತ್ತದೆಯೋ, ಅವುಗಳನ್ನು ‘ಗುರುವಚನ’ವೆಂದು ನಂಬಿ ನಿಷ್ಠೆಯಿಂದ ಕೇಳಿ. ಆ ಗುರುವಚನಗಳ ಮೇಲೆ ಶ್ರದ್ಧೆಯಿಟ್ಟು, ಮನಸ್ಸಿನ ವಿಕಾರ ಮತ್ತು ವಿಚಾರಗಳನ್ನು ಮೆಟ್ಟಿ ನಿಂತು ಏಕಾಗ್ರತೆಯಿಂದ ಆಲಿಸಿ. ಈ ನರದೇಹದ ಉದ್ಧಾರಕ್ಕಾಗಿ ಶ್ರೀಗುರುಕೃಪೆಯಿಂದ ಲಭಿಸುತ್ತಿರುವ ಸತ್ಸಂಗಗಳ ಲಾಭ ಮಾಡಿಕೊಳ್ಳಿ !
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೨೮.೨.೨೦೨೬)
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು