(‘ವಿಶು’ ಹಬ್ಬ ಎಂದರೆ ಮಲಯಾಳಿ ಬಾಂಧವರ ಹೊಸ ವರ್ಷ) (ಚಿಕನ್ ಮಂದಿ ಎಂದರೆ ರಸಭರಿತ ಕೋಳಿ ಮಾಂಸ ಮತ್ತು ಅನ್ನದ ಮಿಶ್ರಣ)

(ಈ ಮೇಲೆ ಪ್ರಕಟಿಸಿರುವ ಚಿತ್ರ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನೈಜ ಸ್ಥಿತಿ ತಿಳಿಸುಉವದಾಗಿದೆ – ಸಂಪಾದಕರು)
ಕೊಚ್ಚಿ (ಕೇರಳ) – ಕೇರಳದ ಆಲಪ್ಪುಳ ಜಿಲ್ಲೆಯ ಚೇರ್ತಲಾದಲ್ಲಿ ‘ವಿಶು’ ಹಬ್ಬದ ಶುಭಾಶಯ ಕೋರುವ ಫಲಕದಲ್ಲಿ ಶ್ರೀಕೃಷ್ಣನ ಚಿತ್ರದ ಮುಂದೆ ‘ಚಿಕನ್ ಮಂದಿ’ಯ (ರಸಭರಿತ ಕೋಳಿ ಮಾಂಸ ಮತ್ತು ಅನ್ನದ ಮಿಶ್ರಣ) ತಟ್ಟೆಯನ್ನು ತೋರಿಸಿದ ಆರೋಪದ ಮೇಲೆ ಪೊಲೀಸರು ರೆಸ್ಟೋರೆಂಟ್ ನ ಮುಸ್ಲಿಂ ಮಾಲೀಕನನ್ನು ಬಂಧಿಸಿದ್ದಾರೆ. ಮಲಯಾಳಿ ಬಾಂಧವರ ಹೊಸ ವರ್ಷವಾದ ‘ವಿಶು’ ನಿಮಿತ್ತ ಚೇರ್ತಲಾದ ಮನೋರಮಾ ಚೌಕದ ಬಳಿ ಇರುವ ‘ಮೆಹರ್ ಮಂದಿ ಅಂಡ್ ಗ್ರಿಲ್ಸ್’ ಎಂಬ ರೆಸ್ಟೋರೆಂಟ್ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಫಲಕವನ್ನು ಪ್ರಸಾರ ಮಾಡಲಾಗಿತ್ತು. ಈ ಫಲಕದಲ್ಲಿ ಶ್ರೀಕೃಷ್ಣನ ಚಿತ್ರದ ಮುಂದೆ ಚಿಕನ್ ಮತ್ತು ಮಂದಿ (ಅನ್ನ) ಇರುವ ತಟ್ಟೆಯನ್ನು ತೋರಿಸಲಾಗಿತ್ತು. ಈ ಚಿತ್ರದಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು. ನ್ಯಾಯವಾದಿ ಎಂ.ವಿ. ಬಿಜು ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ರೆಸ್ಟೋರೆಂಟ್ ಮಾಲೀಕ ಅರ್ಷದ್ ವಿರುದ್ಧ ಮೊಕದ್ದಮೆ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ ರೆಸ್ಟೋರೆಂಟ್ ಹೊರಗೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.
ಈ ವಿಷಯದ ಕುರಿತು ವಿವಾದ ಹೆಚ್ಚಾದ ನಂತರ ರೆಸ್ಟೋರೆಂಟ್ ನ ವ್ಯವಸ್ಥಾಪಕ ಪಾಲುದಾರ ಶಮೀಮ್ ಇನ್ ಸ್ಟಾಗ್ರಾಮ್ ನಲ್ಲಿ ಬೇಷರತ್ ಕ್ಷಮೆಯಾಚಿಸಿದ್ದಾರೆ. ಕೇರಳದ ಪ್ರಖ್ಯಾತ ಮುಸ್ಲಿಂ ಮುಖಂಡ ಉಸ್ತಾದ್ ಅನ್ಸಾರಿ ಸುಹ್ರಿ ಅವರು ಫೇಸ್‌ಬುಕ್ ವಿಡಿಯೋ ಮೂಲಕ ಈ ಘಟನೆಯನ್ನು ಖಂಡಿಸಿದ್ದಾರೆ. ‘ನೀವು ವಿಶು ಹಬ್ಬದ ಶುಭಾಶಯಗಳನ್ನು ತಿಳಿಸಲೇಬೇಕು ಎಂದೇನಿಲ್ಲ; ಆದರೆ ಶುಭಾಶಯಗಳ ಹೆಸರಿನಲ್ಲಿ ಕೋಮು ದ್ವೇಷವನ್ನು ಹರಡಬೇಡಿ. ಇಂತಹ ಕೃತ್ಯಗಳಿಂದ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗುತ್ತದೆ. ಕೆಲವು ತಪ್ಪುಗಳು ಮನುಷ್ಯನಿಗೆ ಜೀವಕ್ಕೆ ಎರವಾಗಬಹುದು,’ ಎಂದು ಅವರು ಎಚ್ಚರಿಸಿದ್ದಾರೆ.
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ