ಗುರುಕೃಪೆಯಿಂದ ಭಾವಪೂರ್ಣವಾಗಿ ನಡೆದ ಪೂ. ಭಾರ್ಗವರಾಮ ಪ್ರಭು (೯ ವರ್ಷ) ಇವರ ಉಪನಯನ ಮಹೋತ್ಸವ !

ವೈಶಾಖ ಶುಕ್ಲ ದಶಮಿಯಂದು ಅಂದರೆ ಏಪ್ರಿಲ್ ೨೬ ರಂದು ಸನಾತನದ ಮೊದಲ ಬಾಲಕಸಂತ ಪೂ. ಭಾರ್ಗವರಾಮ ಪ್ರಭು ಇವರ ೯ ನೆಯ ಹುಟ್ಟುಹಬ್ಬದ ನಿಮಿತ್ತ ಸನಾತನ ಪರಿವಾರದ ವತಿಯಿಂದ ಇವರ ಚರಣಗಳಲ್ಲಿ ಕೃತಜ್ಞತಾಪೂರ್ವಕ ನಮಸ್ಕಾರಗಳು !

‘೫.೨.೨೦೨೬ ರಂದು ಮಂಗಳೂರಿನಲ್ಲಿ ನನ್ನ ಮೊಮ್ಮಗ ಪೂ. ಭಾರ್ಗವರಾಮ ಪ್ರಭು (೯ ವರ್ಷ) ಇವರ ಉಪನಯನ ಮಹೋತ್ಸವವು ನೆರವೇರಿತು. ಆ ಸಮಯದಲ್ಲಿ ನನಗೆ ಅರಿವಾದ ವಿಷಯಗಳು ಮತ್ತು ಬಂದ ಅನುಭೂತಿಗಳನ್ನು ಮುಂದೆ ನೀಡಲಾಗಿದೆ.

ಉಪನಯನ ಸಮಯದಲ್ಲಿ ಪೂ. ಭಾರ್ಗವರಾಮ ಇವರ ಭಾವಮುದ್ರೆ

೧. ಕುಲದೇವರಿಗೆ ಆಮಂತ್ರಣ ನೀಡಲು ಗೋವಾಕ್ಕೆ ಹೋಗುವಾಗ ದಾರಿಯಲ್ಲಿ ವಾಹನದ ಭೀಕರ ಅಪಘಾತ ಸಂಭವಿಸಿದರೂ ಯಾರಿಗೂ ಗಾಯವಾಗದಿರುವುದು

ದಕ್ಷಿಣ ಭಾರತದಲ್ಲಿ ಯಾವುದೇ ಕಾರ್ಯಕ್ರಮವು ನಿಶ್ಚಯವಾದ ನಂತರ ಮೊದಲು ಕುಲದೇವತೆಗೆ ಆಮಂತ್ರಣ ನೀಡುವ ಪದ್ಧತಿಯಿದೆ. ಗೋವಾದ ಜಾಂಬಾವಲಿಯಲ್ಲಿರುವ ‘ದಾಮೋದರ’ ಇವರು ನಮ್ಮ ಕುಲದೇವರು. ಅವರಿಗೆ ಕಾರ್ಯಕ್ರಮದ ಆಮಂತ್ರಣ ನೀಡಲು ನಾವು ಮಂಗಳೂರಿನಿಂದ ಗೋವಾಕ್ಕೆ ಹೊರಟಿದ್ದೆವು. ದಾರಿಯಲ್ಲಿ ೨೩.೯.೨೦೨೫ ರಂದು ನಮ್ಮ ವಾಹನಕ್ಕೆ ಭೀಕರ ಅಪಘಾತವಾಯಿತು; ಆದರೆ ಗುರುಕೃಪೆಯಿಂದ ನಮ್ಮಲ್ಲಿ ಯಾರಿಗೂ ಸಣ್ಣ ಗಾಯವೂ ಆಗಲಿಲ್ಲ.

ಪೂ. ಭಾರ್ಗವರಾಮ

೨. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಮಾರ್ಗದರ್ಶನದಂತೆ ಅಪಘಾತಕ್ಕೆ ಹೆದರದೆ ಪುನಃ ಗೋವಾಕ್ಕೆ ಹೋಗಿ ಕುಲದೇವರಿಗೆ ಆಮಂತ್ರಣ ನೀಡುವುದು

ಅಪಘಾತದ ನಂತರ ನಾವು ಮಂಗಳೂರಿಗೆ ಮರಳಿದೆವು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಒಮ್ಮೆ, “ಕೆಟ್ಟ ಶಕ್ತಿಗಳು ನಮ್ಮ ಕಾರ್ಯದಲ್ಲಿ ಅಡೆತಡೆಗಳನ್ನು ತರುತ್ತವೆ; ಆದರೆ ನಾವು ಅವುಗಳಿಗೆ ಹೆದರಿ ಪ್ರಯತ್ನವನ್ನು ಬಿಡಬಾರದು”, ಎಂದು ಹೇಳಿದ್ದರು ಅದರಂತೆ ೪-೫ ದಿನಗಳ ನಂತರ ನಾವು ಮತ್ತೆ ಗೋವಾಕ್ಕೆ ಹೋಗಿ ಕುಲದೇವರಿಗೆ ಆಮಂತ್ರಣ ನೀಡಿ ಬಂದೆವು. ಅದರ ನಂತರ ಎಲ್ಲವೂ ಸರಾಗವಾಗಿ ನೆರವೇರಿತು.

೩. ದೇವದ ಆಶ್ರಮಕ್ಕೆ ಹೋಗುವ ಅವಕಾಶ ಸಿಗುವುದು ಮತ್ತು ಶುಭಕಾರ್ಯಕ್ಕೆ ಅಲ್ಲಿನ ಸಂತರ ಆಶೀರ್ವಾದವು ದೊರೆತು ಅಂತಃಕರಣವು ಆನಂದದಿಂದ ತುಂಬಿ ಬರುವುದು

ನನ್ನ ಸೊಸೆ ಸೌ. ಭವಾನಿ (ಪೂ. ಭಾರ್ಗವರಾಮರ ತಾಯಿ) ಇವರ ಅಜ್ಜನವರಿಗೆ ಆಮಂತ್ರಣ ನೀಡಲು ನಾವು ಮುಂಬಯಿಯಲ್ಲಿರುವ ಅವರ ಮನೆಗೆ ಹೋಗಿದ್ದೆವು. ಮುಂಬಯಿಗೆ ಹೋದಾಗ ನಮಗೆ ದೇವದ (ಪನವೇಲ) ನ ಆಶ್ರಮಕ್ಕೆ ಹೋಗುವ ಅವಕಾಶ ದೊರೆಯಿತು. ಆ ಸಮಯದಲ್ಲಿ ನಮಗೆ ಅಲ್ಲಿನ ಸಂತರ ದರ್ಶನವಾಯಿತು. ಅವರಿಂದ ಶುಭಕಾರ್ಯಕ್ಕೆ ಆಶೀರ್ವಾದ ಮತ್ತು ಪ್ರಸಾದ ಲಭಿಸಿತು. ಸದ್ಗುರು ರಾಜೇಂದ್ರ ಶಿಂದೆ ಇವರು ಸ್ವತಃ ನಮಗೆ ಇಡೀ ಆಶ್ರಮವನ್ನು ತೋರಿಸಿದರು. ಅಲ್ಲಿನ ಅನೇಕ ಸಂತರ ಪ್ರೀತಿಯ ವರ್ತನೆಯಿಂದ ನಮ್ಮ ಅಂತಃಕರಣ ಆನಂದದಿಂದ ತುಂಬಿ ಬಂದಿತ್ತು.

ಶ್ರೀಮತಿ ಅಶ್ವಿನಿ ಪ್ರಭು

೪. ಕಾರ್ಯಕ್ರಮದ ನಂತರ ಉಪಸ್ಥಿತರಿಗೆ ಸಾತ್ತ್ವಿಕ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡುವುದು

ನಮ್ಮ ಸಮಾಜದಲ್ಲಿ ಕಾರ್ಯಕ್ರಮದ ನಂತರ ಬಂದವರಿಗೆ ಸಿಹಿತಿಂಡಿಯ ಪೆಟ್ಟಿಗೆಯನ್ನು ನೀಡುವ ಪದ್ಧತಿಯಿದೆ. ನಾವು ‘ಸನಾತನ ಸಂಸ್ಥೆ’ಯ ಉಡುಗೊರೆ ಪೆಟ್ಟಿಗೆಯನ್ನು ನೀಡಲು ನಿರ್ಧರಿಸಿದೆವು. ‘ನಾಮಸ್ಮರಣೆ’ ಎಲ್ಲರಿಗೂ ತಲುಪಲಿ’ ಎಂಬ ಉದ್ದೇಶದಿಂದ ನಾವು ಆ ಪೆಟ್ಟಿಗೆಯಲ್ಲಿ ‘ನಾಮಜಪ ಮಾಡುವುದು ಹೇಗೆ ?’ ಎಂಬ ಕಿರುಗ್ರಂಥ, ಸಣ್ಣ ಜಪಮಾಲೆ, ಸಾತ್ತ್ವಿಕ ಊದುಬತ್ತಿ ಮತ್ತು ಸಾಬೂನು ಈ ವಸ್ತುಗಳನ್ನು ಇರಿಸಿದ್ದೆವು.

೫. ಸಂತರ ಕೃಪೆಯ ಅನುಭವ !

ಅ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ‘ಈ ಸಮಾರಂಭವು ನಿರ್ವಿಘ್ನವಾಗಿ ನೆರವೇರುತ್ತದೆ !’ ಎಂದು ಹೇಳಿ ಆಶೀರ್ವದಿಸಿದ್ದರು.

ಆ. ಕಾರ್ಯಕ್ರಮದ ದಿನ ಬೆಳಗ್ಗೆ ಪೂ. ಕರ್ವೆಮಾಮ (ಪೂ. ವಿನಾಯಕ ರಘುನಾಥ ಕರ್ವೆ, ಸನಾತನದ ೨೩ ನೇ ಸಂತರು, ವಯಸ್ಸು ೮೩ ವರ್ಷಗಳು) ಇವರು ಕಾರ್ಯಕ್ರಮವು ನಿರ್ವಿಘ್ನವಾಗಿ ನೆರವೇರಲೆಂದು ಭಾವಪೂರ್ಣ ಪ್ರಾರ್ಥನೆ ಮಾಡಿದರು. ಅದರಿಂದ ಎಲ್ಲರ ಭಾವಜಾಗೃತವಾಯಿತು.

೬. ಸಭಾಂಗಣವು ಎಂದಿಗಿಂತ ಹೆಚ್ಚು ಪ್ರಕಾಶಮಾನವಾಗಿದೆ ಮತ್ತು ವಿಶಾಲವಾಗಿದೆ ಎಂದೆನಿಸುವುದು

ಸಭಾಂಗಣದ ವೇದಿಕೆಯ ಹಿಂಭಾಗದಲ್ಲಿ (Backdrop)ಗುರು-ಶಿಷ್ಯರ ಬೋಧಚಿಹ್ನೆ ಮತ್ತು ನವಿಲುಗರಿಯ ಚಿತ್ರವನ್ನು ಹಾಕಿದ ನಂತರ ವಾತಾವರಣವು ಅತ್ಯಂತ ಸಾತ್ತ್ವಿಕವಾಯಿತು. ‘ಸಭಾಂಗಣವು ಎಂದಿಗಿಂತ ಹೆಚ್ಚು ಪ್ರಕಾಶಮಾನವಾಗಿ ಮತ್ತು ವಿಶಾಲವಾಗಿ ಕಾಣಿಸುತ್ತಿತ್ತು’ ಎಂದು ಅನೇಕರು ತಿಳಿಸಿದರು.

೭. ವಟುವನ್ನು (ಪೂ. ಭಾರ್ಗವರಾಮರನ್ನು) ನೋಡಿ ‘ನಾವು ಬಾಲ ಶಂಕರಾಚಾರ್ಯರನ್ನು ನೋಡುತ್ತಿದ್ದೇವೆ’ ಎಂದು ಅರಿವಾಗುತ್ತಿತ್ತು’, ಎಂದು ಅಲ್ಲಿ ಉಪಸ್ಥಿತರಿದ್ದ ಜನರು ಹೇಳುತ್ತಿದ್ದರು.

೮. ಕಾರ್ಯಕ್ರಮದ ಸಮಯದಲ್ಲಿ ಪೂ. ಭಾರ್ಗವರಾಮರ ಪ್ರಬುದ್ಧ ವರ್ತನೆ

ಸಂಪೂರ್ಣ ಕಾರ್ಯಕ್ರಮದಲ್ಲಿ ಪೂ. ಭಾರ್ಗವರಾಮರು ಅತ್ಯಂತ ಶಾಂತವಾಗಿದ್ದರು. ಅವರು ಯಾವುದೇ ಹಠ ಮಾಡಲಿಲ್ಲ. ಹಿಂದಿನ ರಾತ್ರಿ ತಡವಾಗಿ ಮಲಗಿದ್ದರೂ ಅವರು ಬೆಳಗ್ಗೆ ಬೇಗನೆ ಸಿದ್ಧರಾದರು. ತಮಗೆ ಹಸಿವು ಅಥವಾ ಬಾಯಾರಿಕೆಯಾಗುತ್ತಿದೆ ಎಂದು ಅವರು ಒಮ್ಮೆಯೂ ಹೇಳಲಿಲ್ಲ. ಪುರೋಹಿತರು ನೀಡಿದ ಎಲ್ಲಾ ಸೂಚನೆಗಳನ್ನು ಅವರು ಚಾಚೂ ತಪ್ಪದೆ ಪಾಲಿಸಿದರು. ಅವರು ಬಹಳ ಗಂಭೀರ ಮತ್ತು ಸ್ಥಿರವಾಗಿದ್ದರು. ಆದರೆ ಮನೆಗೆ ಬಂದ ನಂತರ ಅವರ ತುಂಟಾಟ ಮತ್ತೆ ಆರಂಭವಾಯಿತು.

೯. ಕಾರ್ಯಕ್ರಮಕ್ಕೆ ಐದು ಸಂತರ ಉಪಸ್ಥಿತಿ ಲಭಿಸಿದ್ದರಿಂದ ಎಲ್ಲ ಸಾಧಕರಿಗೆ ಆನಂದವಾಗುವುದು

ಕಾರ್ಯಕ್ರಮದಲ್ಲಿ ಪೂ. (ಶ್ರೀಮತಿ) ರಾಧಾ ಪ್ರಭು (ಪೂ. ಭಾರ್ಗವರಾಮರ ಮುತ್ತಜ್ಜಿ, ಸನಾತನದ ೪೪ ನೇ ಸಂತರು, ೮೮ ವರ್ಷಗಳು), ಪೂ. ಕರ್ವೆಮಾಮಾ (ಪೂ. ವಿನಾಯಕ ರಘುನಾಥ ಕರ್ವೆ, ಸನಾತನದ ೨೩ ನೇ ಸಂತರು, ೮೩ ವರ್ಷಗಳು), ಪೂ. (ಸೌ.) ಶಶಿಕಲಾ ಕಿಣಿ (ಸನಾತನದ ೧೩೧ ನೇ ಸಂತರು, ೭೯ ವರ್ಷಗಳು), ಪೂ. ರಮಾನಂದ ಗೌಡ (ಸನಾತನದ ೭೫ ನೇ ಸಂತರು, ವಯಸ್ಸು ೪೯ ವರ್ಷಗಳು) ಮತ್ತು ಪೂ. ವಾಮನ ಅನಿರುದ್ಧ ರಾಜಂದೇಕರ (ಸನಾತನದ ಎರಡನೇ ಬಾಲಕಸಂತರು, ವಯಸ್ಸು ೭ ವರ್ಷ) ಈ ಐದು ಸಂತರ ಉಪಸ್ಥಿತಿ ಲಭಿಸಿತು. ಅದರಿಂದ ಎಲ್ಲಾ ಸಾಧಕರಿಗೆ ಬಹಳ ಆನಂದವಾಯಿತು.’

ಶ್ರೀಮತಿ ಅಶ್ವಿನಿ ಪ್ರಭು (ಪೂ. ಭಾರ್ಗವರಾಮರ ಅಜ್ಜಿ (ತಂದೆಯ ತಾಯಿ)), ಆಧ್ಯಾತ್ಮಿಕ ಮಟ್ಟ ಶೇ. ೬೩, ವಯಸ್ಸು ೬೦ ವರ್ಷಗಳು), ಮಂಗಳೂರು (೬.೩.೨೦೨೬)