ಆಯೋಜನಾಬದ್ಧ ಮತ್ತು ಪರಿಪೂರ್ಣ ಸೇವೆ ಮಾಡುವ ಶಿವಮೊಗ್ಗದ ಚಿ. ಪವನ ಕುಮಾರ ಶಿಂದೆ ಮತ್ತು ಮುಂದಾಳತ್ವ ವಹಿಸಿ ಭಾವದ ಸ್ತರದಲ್ಲಿ ಸೇವೆ ಮಾಡುವ ಮಂಗಳೂರು ಸೇವಾಕೇಂದ್ರದ ಚಿ.ಸೌ.ಕಾಂ. ಶಶಾಂಕಾ ಹಿರೇಮಠ

ಶ್ರೀ. ಪವನ ಕುಮಾರ ಶಿಂದೆ ಇವರ ಬಗ್ಗೆ ಶಿವಮೊಗ್ಗದ ಸಾಧಕರಿಗೆ ಅರಿವಾದ ಗುಣವೈಶಿಷ್ಟ್ಯಗಳು

ಶ್ರೀ. ಪವನ ಕುಮಾರ ಶಿಂದೆ

೧. ಸೌ. ಬನಶಂಕರಿ ಸಂಪೇಮನೆ

೧ ಅ. ಸಹಾಯ ಮಾಡುವ ವೃತ್ತಿ : ‘ಶ್ರೀ. ಪವನ ಇವರಿಗೆ ಯಾವುದೇ ಸಮಯದಲ್ಲಿ ಸೇವೆಯ ಬಗ್ಗೆ ಹೇಳಿದಾಗ ಅವರಿಗೆ ಅಡಚಣೆ ಇದ್ದರೂ ‘ನನಗೆ ಹೇಳಿ ಪ್ರಯತ್ನಿಸುತ್ತೇನೆ’ ಎನ್ನುತ್ತಾರೆ.

೧ ಆ. ಆಯೋಜನಾಬದ್ಧ ಸೇವೆ : ಅಣ್ಣ ಸೇವೆಯ ಸಂದರ್ಭದಲ್ಲಿ ಅವರಲ್ಲಿ ಪರಿಶೀಲನಾ ಪಟ್ಟಿ (ಚೆಕ್ ಲಿಸ್ಟ್) ಯಾವಾಗಲೂ ಸಿದ್ಧವಿರುತ್ತದೆ. ಹಾಗಾಗಿ ಅವರ ಸೇವೆ ತಪ್ಪಿಲ್ಲದೇ ಆಗುತ್ತದೆ.

೨. ಕು. ಭವ್ಯ ನಾಯ್ಕ್.

೨ ಅ. ಪ್ರೇಮಭಾವ : ‘ಅಣ್ಣನವರ ಮನಸ್ಸಿನಲ್ಲಿ ಸಾಧಕರ ಬಗ್ಗೆ ಪ್ರೇಮಭಾವ ಇದೆ. ಸಾಧಕರು ರಾತ್ರಿ ತಡವಾಗಿ ಬರಲಿದ್ದಾಗ ಅವರನ್ನು ಸೇವಾಕೇಂದ್ರಕ್ಕೆ ಕರೆತರಲು ಅಣ್ಣನವರು ಮುಂಚಿತವಾಗಿ ಹೋಗುತ್ತಾರೆ. ಒಂದು ವೇಳೆ ಅವರಿಗೆ ಸಾಧಕರನ್ನು ಕರೆ ತರಲು ಅಡಚಣೆ ಇದ್ದರೆ ಅವರು ಬೇರೆ ಸಾಧಕರ ಆಯೋಜನೆ ಮಾಡುತ್ತಾರೆ. ‘ಆ ಸಾಧಕರು ಸಮಯಕ್ಕೆ ತಲುಪಿದ್ದಾರಲ್ಲ’ ಎಂಬುದರ ಬಗ್ಗೆಯೂ ಅಣ್ಣನವರು ಖಚಿತಪಡಿಸಿಕೊಳ್ಳುತ್ತಾರೆ.

೨ ಆ. ಪರಿಪೂರ್ಣ ಸೇವೆ : ಅವರಿಗೆ ಯಾವುದಾದರೂ ಸೇವೆ ಹೇಳಿದಾಗ ಅವರಿಗೆ ಆಗ ಬಿಡುವು ಇಲ್ಲದಿದ್ದರೂ ಅವರು ಅಯೋಜನೆ ಮಾಡಿ ಸೇವೆ ಪೂರ್ಣ ಮಾಡುತ್ತಾರೆ. ಅವರು ತಾಂತ್ರಿಕ (ಟೆಕ್ನಿಕಲ್) ಸೇವೆಯನ್ನು ಸುಲಲಿತವಾಗಿ ಆಗಲು ಸಹಾಯ ಮಾಡುತ್ತಾರೆ.

೨ ಇ. ಕೇಳುವ ವೃತ್ತಿ : ಮೊದಲು ಇವರಿಂದ ಕೆಲವು ತಪ್ಪು ಅಗುತ್ತಿತ್ತು. ಆದರೆ  ಈಗ ಸೇವೆಯಲ್ಲಿ ಕೇಳಿ ಮಾಡಲು ಪ್ರಯತ್ನ ಮಾಡುತ್ತಾರೆ.


ವಧು-ವರರಿಬ್ಬರಿಗೂ ಉಪಯುಕ್ತವಾಗುವ ಒಗಟು

ಚಪ್ಪರದ ಬಾಗಿಲಿಗೆ ಮಾವಿನೆಲೆಯ ತೋರಣ |

… ಅವರ ಹೆಸರು ಹೇಳುವೆ ವಿವಾಹದ ನಿಮಿತ್ತ ||

ಹಿಂದುತ್ವವೇ ಶ್ವಾಸ ಹಿಂದೂ ರಾಷ್ಟ್ರವೇ ಧ್ಯಾಸ |

…. ಳೊಂದಿಗೆ ಸಾಗಲಿ ಸಂಸಾರಸಾಧನೆ ಪ್ರವಾಸ  ||


ಚಿ. ಕುಂ. ಸೌ. ಶಶಾಂಕಾ ಹಿರೇಮಠ ಅವರ ಬಗ್ಗೆ ಅವರ ಸಂಬಂಧಿಕರು ಮತ್ತು ಸಾಧಕರಿಗೆ ಕಂಡುಬಂದ ಗುಣವೈಶಿಷ್ಟ್ಯಗಳು

ಚಿ.ಕುಂ.ಸೌ. ಶಶಾಂಕಾಳ

೧. ಶ್ರೀ. ನಂದೀಶ ಹಿರೇಮಠ (ಚಿ.ಕುಂ.ಸೌ. ಶಶಾಂಕಾಳ ತಮ್ಮ), ಮಂಗಳೂರು ಸೇವಾಕೇಂದ್ರ

. ‘ಶಶಾಂಕಾಅಕ್ಕ ೮-೯ ವರ್ಷದವಳಿದ್ದಾಗಿನಿಂದಲೇ ಮನೆಯ ಎಲ್ಲಾ ಕೆಲಸಗಳನ್ನು ಮತ್ತು ಅಡುಗೆಯನ್ನು ಬಹಳ ಉತ್ತಮವಾಗಿ ಮಾಡುತ್ತಿದ್ದಳು. ಅವಳು ಶಾಲೆಯಿಂದ ಬಂದ ನಂತರ ಸುಸ್ತಾಗಿದ್ದರೂ ಮನೆಕೆಲಸಗಳನ್ನು ಮಾಡುತ್ತಿದ್ದಳು. ನಾಮಜಪ ಮುಗಿದನಂತರವೇ ಓದಲು ಕುಳಿತುಕೊಳ್ಳುತ್ತಿದ್ದಳು. ಚಿಕ್ಕ ವಯಸ್ಸಿನಲ್ಲೇ ಮನೆಗೆಲಸ, ಶಾಲೆಗೆ ಹೋಗುವುದು ಮತ್ತು ಅಭ್ಯಾಸ ಮಾಡುವುದು ಇವೆಲ್ಲವನ್ನೂ ಅವಳು ಅಚ್ಚುಕಟ್ಟಾಗಿ ನಿಭಾಯಿಸಿದ್ದಾಳೆ.’

. ನಂತರ ಅವಳು ಸಾಧನೆಗಾಗಿ ಮಂಗಳೂರು ಸೇವಾಕೇಂದ್ರಕ್ಕೆ ಬಂದಳು. ಅವಳು ಸೇವಾಕೇಂದ್ರದ ಅಡುಗೆ ಮನೆಯ ಸೇವೆಗಳ ಜವಾಬ್ದಾರಿಯನ್ನು ಸ್ವೀಕರಿಸಿದಳು. ಅನೇಕ ಸಾಧಕರಿಗಾಗಿ ಅಡುಗೆ ಮಾಡುವ ಸೇವೆಯನ್ನು ಅವಳು ಬಹಳ ಆನಂದದಿಂದ ಮಾಡುತ್ತಾಳೆ. ಸೇವಾಕೇಂದ್ರದಲ್ಲಿ ಎಷ್ಟು ಜನ ಸಾಧಕರಿದ್ದರೂ, ಅವಳು ಗಾಬರಿಯಾಗದೆ ಅತ್ಯಂತ ಶಿಸ್ತುಬದ್ಧವಾಗಿ ಸೇವೆ ಮಾಡುತ್ತಾಳೆ.’

೨. ಕು. ಪ್ರಿಯಾಂಕಾ ಹಿರೇಮಠ (ಚಿ.ಕುಂ. ಸೌ. ಶಶಾಂಕಾಳ ತಂಗಿ), ಮಂಗಳೂರು ಸೇವಾಕೇಂದ್ರ

ಅ. ‘ಶಶಾಂಕಾಅಕ್ಕ ಪ್ರತಿಯೊಂದು ಸೇವೆಯನ್ನು ಭಾವದ ಸ್ತರದಲ್ಲಿ ಮಾಡುತ್ತಾಳೆ ಮತ್ತು ನಾಮಜಪ ಮಾಡುತ್ತಲೇ ಅಡುಗೆ ಮಾಡುತ್ತಾಳೆ.’

ಆ. ಅವಳಿಗೆ ಎಷ್ಟೇ ಶಾರೀರಿಕ ತೊಂದರೆಗಳಿದ್ದರೂ ಅವಳು ಗುರುಸೇವೆಗೆ ಹೆಚ್ಚಿನ ಮಹತ್ವ ನೀಡುತ್ತಾಳೆ.’

೩. ಕು. ಪ್ರಭಾವತಿ ಹೇರೂರು (ಸಾಧಕಿ), ಮಂಗಳೂರು ಸೇವಾಕೇಂದ್ರ

ಅ. ‘ಶಶಾಂಕಾ ವಯಸ್ಸಿನಲ್ಲಿ ಚಿಕ್ಕವಳಿದ್ದರೂ ತಾನೇ ಮುಂದಾಳತ್ವ ವಹಿಸಿ ಸೇವೆ ಮಾಡುತ್ತಾಳೆ.’

. ಅವಳು ‘ಸೇವಾಕೇಂದ್ರ ಪ್ರತಿಯೊಂದು ವಸ್ತುವು ಗುರುಗಳ ದ್ದಾಗಿದೆ’ ಎಂಬ ಭಾವದಿಂದ ಅತ್ಯಂತ ಜಾಗರೂಕತೆಯಿಂದ ಬಳಸುತ್ತಾಳೆ. ‘ಯಾವುದಾದರೂ ವಸ್ತು ವ್ಯರ್ಥವಾದರೆ ಗುರು ಧನಕ್ಕೆ ಹಾನಿಯಾದಂತೆ’ ಎಂದು ಅವಳಿಗೆ ಅನಿಸುತ್ತದೆ.’

೪. ಶ್ರೀಮತಿ ಸಂಗೀತಾ ಪ್ರಭು (ಸಾಧಕಿ), ಮಂಗಳೂರು ಸೇವಾಕೇಂದ್ರ

ಅ. ‘ಶಶಾಂಕಾ ಅಡುಗೆ ಮಾಡಿದ ನಂತರ ಶೀತಕಪಾಟು ಮತ್ತು ಅಡುಗೆ ಮನೆಯ ಕಟ್ಟೆಯನ್ನು ಸ್ವಚ್ಛವಾಗಿ ಇಡುತ್ತಾಳೆ.’

೫. ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೩, ವಯಸ್ಸು ೬೦ ವರ್ಷ), ಮಂಗಳೂರು

೫ ಅ. ಸಾಧನಾ ಜೀವನದೊಂದಿಗೆ ಬೇಗನೆ ಒಂದಾಗುವುದು :‘ಚಿಕ್ಕ ವಯಸ್ಸಿನಲ್ಲಿ ಹೆಣ್ಣುಮಕ್ಕಳಿಗೆ ಮಾಯೆಯ ಆಕರ್ಷಣೆ ಹೆಚ್ಚಿರುತ್ತದೆ. ಆದರೆ ಶಶಾಂಕಾಳ ತಂದೆ-ತಾಯಿ ಅವಳಿಗೆ ನೀಡಿದ ಉತ್ತಮ ಸಂಸ್ಕಾರ ಮತ್ತು ಅವಳ ಆಜ್ಞಾಧಾರಕ ವೃತ್ತಿಯಿಂದ ಅವಳು ಬಹಳ ಬೇಗನೆ ಸೇವಾಕೇಂದ್ರಕ್ಕೆ ಹೊಂದಿಕೊಂಡಳು. ಅವಳು ಕೆಲವೇ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಾತಾವರಣಕ್ಕೆ ಹೊಂದಿಕೊಂಡಳು. ಇಲ್ಲಿನ ಅಡುಗೆ ಪದ್ಧತಿಗಳನ್ನು ಕಲಿತುಕೊಂಡು ಈಗ ಎಲ್ಲಾ ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸುತ್ತಾಳೆ. ಅವಳು ಸಂತರ ಅಡುಗೆ ಮತ್ತು ಪಥ್ಯದ ಊಟ, ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಯೋಗ್ಯ ರೀತಿಯಲ್ಲಿ ಪೂರ್ಣಗೊಳಿಸುತ್ತಾಳೆ.’

೫ ಆ. ಆತ್ಮೀಯತೆ : ಅವಳಿಗೆ ಸೇವೆಯಿಂದ ಸಮಯ ಸಿಕ್ಕಾಗ ಇತರ ಸಾಧಕರೊಂದಿಗೆ ಸಂವಾದ ನಡೆಸುತ್ತಾಳೆ.

೫ ಇ. ತತ್ತ್ವನಿಷ್ಠೆ : ಅಳು ತನ್ನ ತಂಗಿ ಕು. ಪ್ರಿಯಾಂಕಾ ಮತ್ತು ತಮ್ಮ ಶ್ರೀ. ನಂದೀಶ ಇವರೊಂದಿಗೆ ಅವಳು ಸಾಧಕರಂತೆಯೇ ನಡೆದುಕೊಳ್ಳುತ್ತಾಳೆ. ಅವರ ತಪ್ಪುಗಳನ್ನು ಮುಕ್ತವಾಗಿ ಮತ್ತು ತತ್ತ್ವನಿಷ್ಠೆಯಿಂದ ಹೇಳುತ್ತಾಳೆ.’

೫ ಈ. ಮಾಯೆಯಲ್ಲಿ ಸಿಲುಕದಿರುವುದು : ಅವಳು ಹಬ್ಬ-ಹರಿದಿನಗಳು ಅಥವಾ ಕೌಟುಂಬಿಕ ಕಾರ್ಯಕ್ರಮಗಳ ನಿಮಿತ್ತ ಮನೆಗೆ ಹೋದರೆ ಅಲ್ಲಿ ಹೆಚ್ಚು ದಿನ ಉಳಿಯುವುದಿಲ್ಲ. ಅಲ್ಲಿನ ಕಾರ್ಯಕ್ರಮ ಮುಗಿದ ತಕ್ಷಣವೇ ಸೇವಾಕೇಂದ್ರಕ್ಕೆ ಹಿಂತಿರುಗುತ್ತಾಳೆ.’

೫ ಉ. ಸೇವಾಭಾವ

೧. ಅವಳು ಸಂತರಿಗಾಗಿ ಪ್ರೀತಿಯಿಂದ ಮತ್ತು ಕಾಳಜಿಯಿಂದ ಅಡುಗೆ ಮಾಡುತ್ತಾಳೆ. ಸಂತರು ಬರುವ ಸಮಯ, ಅವರಿಗೆ ಬೇಕಾದ ವಸ್ತುಗಳು  ಇವುಗಳತ್ತ ಅವಳ ಸೂಕ್ಷ್ಮ ಗಮನವಿರುತ್ತದೆ.

೨. ಮದುವೆಯ ನಂತರ ‘ಗಂಡನ ಮನೆಯಿಂದ ಯಾವ ಸೇವೆ ಮಾಡಲಿ ?’ ಎಂದು ಯೋಚಿಸಿ, ಕೇವಲ ಒಂದು ತಿಂಗಳಿನಲ್ಲಿ ಜಾಹೀರಾತುಗಳ ವಿನ್ಯಾಸ ಮಾಡುವುದನ್ನು ಕಲಿತುಕೊಂಡಿದ್ದಾಳೆ.

೩. ಅವಳಿಗೆ ಸುಸ್ತಾದರೂ ಅವಳು ಇತರರಿಗೆ ಅದನ್ನು ತಿಳಿಯ ಗೊಡುವುದಿಲ್ಲ. ಸ್ವಲ್ಪ ಸಮಯ ವಿಶ್ರಾಂತಿ ಪಡೆದು ಮತ್ತೆ ಸೇವೆಯಲ್ಲಿ ಮಗ್ನಳಾಗುತ್ತಾಳೆ.

(ಲೇಖನದ ಎಲ್ಲಾ ಅಂಶಗಳ ದಿನಾಂಕ: ೨೫.೩.೨೦೨೬)