ಉತ್ತರಾಖಂಡದಲ್ಲಿ ‘ಸೌರಭ್ ಚಿಕನ್ ಬಿರಿಯಾನಿ’ ಅಂಗಡಿ ನಡೆಸುತ್ತಿದ್ದವನ ಹೆಸರು ರಶೀದ್ ಎಂದು ಪತ್ತೆ!

ಹಿಂದೂಗಳು ‘ಹಲಾಲ್’ (ಇಸ್ಲಾಮಿಕ್ ಪದ್ಧತಿಯಂತೆ ಪ್ರಾಣಿ ಹತ್ಯೆ ಮಾಡಿ ತಯಾರಿಸಿದ) ಮಾಂಸವನ್ನು ತಿನ್ನಬೇಕಾಗಿ ಬಂದಿದ್ದಕ್ಕೆ ಆಕ್ರೋಶ

ಡೆಹ್ರಾಡೂನ್ (ಉತ್ತರಾಖಂಡ) – ರಾಜ್ಯದಲ್ಲಿ ಮತ್ತೊಮ್ಮೆ ಅಂಗಡಿಯ ಹೆಸರಿನ ವಿಚಾರವಾಗಿ ಹೊಸ ವಿವಾದ ಉಂಟಾಗಿದೆ. ರುದ್ರಾಪುರದ ಯುವಕನೊಬ್ಬ ಜೊಮ್ಯಾಟೊ (Zomato) ಆ್ಯಪ್ ಮೂಲಕ ‘ಸೌರಭ್ ಚಿಕನ್ ಬಿರಿಯಾನಿ’ ಹೆಸರಿನ ಅಂಗಡಿಯಿಂದ ಬಿರಿಯಾನಿ ಆರ್ಡರ್ ಮಾಡಿದ್ದನು. ಆರ್ಡರ್ ಮಾಡಿದ ನಂತರ ಯುವಕನಿಗೆ ಅನುಮಾನ ಬಂದು ವಿಚಾರಣೆ ನಡೆಸಿದನು. ಆ್ಯಪ್‌ನಲ್ಲಿ ‘ಸೌರಭ್ ಚಿಕನ್ ಬಿರಿಯಾನಿ’ ಹೆಸರಿನಲ್ಲಿ ಕಾಣುತ್ತಿದ್ದ ಅಂಗಡಿಯನ್ನು ವಾಸ್ತವದಲ್ಲಿ ರಶೀದ್ ಎಂಬ ವ್ಯಕ್ತಿ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಆಕ್ಷೇಪ ವ್ಯಕ್ತಪಡಿಸಿದರು. ನಂತರ ಹಿಂದೂ ಸಂಘಟನೆಗಳ ಪ್ರಮುಖರು ಭಾಜಪ ಶಾಸಕ ಶಿವ ಅರೋರಾ ಅವರ ನೇತೃತ್ವದಲ್ಲಿ ಪೊಲೀಸರನ್ನು ಭೇಟಿ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

೧. ಬಿರಿಯಾನಿ ಆರ್ಡರ್ ಮಾಡಿದ ಯುವಕನು ‘ಸೌರಭ್ ಚಿಕನ್ ಬಿರಿಯಾನಿ’ ಅಂಗಡಿಯ ವಿಳಾಸವನ್ನು ಹುಡುಕಿದನು. ಆಗ ತ್ರಿಶೂಲ್ ಚೌಕ್ ಪರಿಸರದಲ್ಲಿ ಯಾವುದೇ ಹಿಂದೂಗಳ ಅಂಗಡಿ ಇಲ್ಲದಿರುವುದು ಅವನ ಗಮನಕ್ಕೆ ಬಂದಿತು.

೨. ನಂತರ ಅವನು ತನ್ನ ಸ್ನೇಹಿತರನ್ನು ಕರೆಸಿಕೊಂಡನು. ಕೆಲವು ಯುವಕರೊಂದಿಗೆ ತ್ರಿಶೂಲ್ ಚೌಕ್‌ಗೆ ತೆರಳಿ ಜೊಮ್ಯಾಟೊ ಡೆಲಿವರಿ ಮಾಡುವ ವ್ಯಕ್ತಿಗಾಗಿ ಕಾಯತೊಡಗಿದನು. ಡೆಲಿವರಿ ಸಿಬ್ಬಂದಿ ಬಿರಿಯಾನಿ ಪಡೆಯಲು ಅಂಗಡಿಗೆ ತಲುಪುತ್ತಿದ್ದಂತೆ ಯುವಕರು ಪ್ರತಿರೋಧ ಒಡ್ಡಿದರು.

೩. ಈ ಅಂಗಡಿಯನ್ನು ರಶೀದ್ ಎಂಬ ವ್ಯಕ್ತಿ ನಡೆಸುತ್ತಿದ್ದಾನೆ. ಅಂಗಡಿಯವನು ಜೊಮ್ಯಾಟೊದಲ್ಲಿ ‘ಸೌರಭ್’ ಹೆಸರಿನಲ್ಲಿ ನೋಂದಣಿ ಮಾಡಿಕೊಂಡು ಜನರ ದಾರಿ ತಪ್ಪಿಸುತ್ತಿದ್ದಾನೆ ಎಂದು ಯುವಕರು ಆರೋಪಿಸಿದ್ದಾರೆ.

೪. ಆ್ಯಪ್‌ನಲ್ಲಿ ‘ಸೌರಭ್’ ಎಂಬ ಹೆಸರಿರುವುದರಿಂದ ಹಿಂದೂ ಸಮಾಜದ ಜನರಿಗೆ ಮೋಸವಾಗುತ್ತಿದೆ ಮತ್ತು ಅವರಿಗೆ ತಿಳಿಯದಂತೆ ಹಲಾಲ್ ಮಾಂಸವನ್ನು ತಿನ್ನಬೇಕಾಗಿ ಬರುತ್ತಿದೆ. ಹೀಗೆ ಮಾಡುವುದು ಅವರ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಪಾದಕೀಯ ನಿಲುವು

  • ಅಂಗಡಿಗಳಿಗೆ ಹಿಂದೂ ಹೆಸರುಗಳನ್ನು ಇಟ್ಟು ಹಿಂದೂಗಳ ದಾರಿ ತಪ್ಪಿಸುವ ಮತ್ತು ಹಿಂದೂ ಧರ್ಮದ ವಿರುದ್ಧವಾಗಿದ್ದರೂ ಅವರಿಗೆ ‘ಹಲಾಲ್’ ಮಾಂಸವನ್ನು ಉಣಬಡಿಸುವ ಮತಾಂಧ ಮುಸಲ್ಮಾನರು!
  • ಮುಸಲ್ಮಾನರಿಗೆ ಇತರ ಸಮಯದಲ್ಲಿ ಹಿಂದೂಗಳು ‘ಕಾಫಿರ್’ (ಇಸ್ಲಾಂ ವಿರೋಧಿ) ಆಗಿರುತ್ತಾರೆ; ಆದರೆ ಹಣ ಸಂಪಾದಿಸಲು ಹಿಂದೂ ಹೆಸರನ್ನು ಇಟ್ಟುಕೊಂಡು ಅಂಗಡಿ ನಡೆಸುವುದು ಮತ್ತು ಹಿಂದೂ ಗ್ರಾಹಕರಿಂದ ಹಣ ಪಡೆಯುವುದು ಅವರಿಗೆ ನಡೆಯುತ್ತದೆ. ಇದರಿಂದ ಅವರ ಇಬ್ಬಂದಿ ನೀತಿ ಎದ್ದು ಕಾಣುತ್ತದೆ!