ಕಾಶ್ಮೀರ ಗಡಿಯ ಸಮೀಪ ೭೦ ಭಯೋತ್ಪಾದಕ 'ಲಾಂಚ್ ಪ್ಯಾಡ್'ಗಳು ಸಕ್ರಿಯ
(ಲಾಂಚ್ ಪ್ಯಾಡ್ ಎಂದರೆ ತರಬೇತಿ ಪಡೆದ ಭಯೋತ್ಪಾದಕರನ್ನು ಭಾರತಕ್ಕೆ ನುಸುಳಿಸಲು ಒಂದೆಡೆ ಸೇರಿಸುವ ಸ್ಥಳ)

ನವದೆಹಲಿ – ಗುಪ್ತಚರ ವರದಿಗಳ ಪ್ರಕಾರ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. (ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್) ಮತ್ತು ಅಲ್ಲಿನ ಸೇನೆಯು ನಿಯಂತ್ರಣ ರೇಖೆ ಹಾಗೂ ಅಂತರಾಷ್ಟ್ರೀಯ ಗಡಿಯಲ್ಲಿ ಸುಮಾರು ೭೦ ಭಯೋತ್ಪಾದಕ ‘ಲಾಂಚ್ ಪ್ಯಾಡ್’ಗಳನ್ನು ಮತ್ತೆ ಸಕ್ರಿಯಗೊಳಿಸಿವೆ. ಈ ಸ್ಥಳಗಳಲ್ಲಿ ಸುಮಾರು ೮೦೦ ಭಯೋತ್ಪಾದಕರು ಭಾರತಕ್ಕೆ ನುಸುಳಲು ಸಿದ್ಧರಾಗಿದ್ದು, ಇದರಿಂದ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆಯಿದೆ.
ಪಾಕಿಸ್ತಾನದ ಸೇನಾ ಸಂಸ್ಥೆಗಳಲ್ಲಿ ‘ಹಮಾಸ್’ ಜನರಿಗೆ ತರಬೇತಿ ನೀಡಲಾಗುತ್ತಿದೆ! – ಪಾಕಿಸ್ತಾನಿ ಸಂಸದನ ದಾವೆ
ಮತ್ತೊಂದೆಡೆ, ಪಾಕಿಸ್ತಾನದ ಸಂಸದ ಮುಶಾಹಿದ್ ಹುಸೇನ್ ಸೈಯದ್ ಅವರು ಪಾಕಿಸ್ತಾನದ ಸೇನಾ ಸಂಸ್ಥೆಗಳಲ್ಲಿ ‘ಹಮಾಸ್’ಗೆ ಸಂಬಂಧಿಸಿದ ಜನರಿಗೆ ತರಬೇತಿ ನೀಡಲಾಗುತ್ತಿದೆ ಎಂದು ದಾವೆ ಮಾಡಿದ್ದಾರೆ. ವಿಶೇಷವಾಗಿ ‘ಪಾಕಿಸ್ತಾನ್ ನೇವಿ ವಾರ್ ಕಾಲೇಜ್’ ಅನ್ನು ಉಲ್ಲೇಖಿಸಿದ ಅವರು, ಅಲ್ಲಿ ಹಮಾಸ್‌ನ ಜನರನ್ನು ಭೇಟಿಯಾಗಿರುವುದಾಗಿ ತಿಳಿಸಿದ್ದಾರೆ.
ಗುಪ್ತಚರ ಮೂಲಗಳ ಮಾಹಿತಿಯ ಪ್ರಕಾರ, ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ಈ ಬಾರಿ ಭಾರತಕ್ಕೆ ನುಸುಳಲು ಹೊಸ ಕಾರ್ಯತಂತ್ರವನ್ನು ರೂಪಿಸಿವೆ. ಈ ಯೋಜನೆಯಡಿ ಭಯೋತ್ಪಾದಕರನ್ನು ಸಣ್ಣ ಗುಂಪುಗಳಾಗಿ ವಿಂಗಡಿಸಿ ಜಮ್ಮು-ಕಾಶ್ಮೀರದ ವಿವಿಧ ಭಾಗಗಳಿಂದ ಏಕಕಾಲದಲ್ಲಿ ಭಾರತಕ್ಕೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ. ಪ್ರತಿ ಗುಂಪಿನಲ್ಲಿ ಸುಮಾರು ೧೦ ರಿಂದ ೧೫ ತರಬೇತಿ ಪಡೆದ ಮತ್ತು ಶಸ್ತ್ರಸಜ್ಜಿತ ಉಗ್ರರಿರಬಹುದು. ಏಕಕಾಲದಲ್ಲಿ ಹಲವು ಕಡೆಗಳಲ್ಲಿ ಚಟುವಟಿಕೆಗಳನ್ನು ಹೆಚ್ಚಿಸುವ ಮೂಲಕ ಭಾರತೀಯ ಭದ್ರತಾ ಪಡೆಗಳ ಮೇಲೆ ಒತ್ತಡ ಹೇರುವುದು ಈ ಕಾರ್ಯತಂತ್ರದ ಉದ್ದೇಶವಾಗಿದೆ. ಹಮಾಸ್‌ಗೆ ಸಂಬಂಧಿಸಿದ ಘಟಕಗಳಿಗೆ ತರಬೇತಿ ನೀಡಿರುವುದನ್ನು ಪಾಕಿಸ್ತಾನ ಮೊದಲ ಬಾರಿಗೆ ಸಾರ್ವಜನಿಕವಾಗಿ ಒಪ್ಪಿಕೊಂಡಂತಾಗಿದೆ.
‘ಆಪರೇಷನ್ ಸಿಂದೂರ್’ ನಂತರ ಬಂದ್ ಆಗಿದ್ದವು ‘ಲಾಂಚ್ ಪ್ಯಾಡ್’ಗಳು !
ಮಾರ್ಚ್ ೨೦೨೬ರ ‘ಅಮೆರಿಕನ್ ಕಾಂಗ್ರೆಸ್ ರಿಸರ್ಚ್ ಸರ್ವಿಸ್’ ವರದಿಯಲ್ಲಿಯೂ ಪಾಕಿಸ್ತಾನವನ್ನು ‘ಭಾರತ ವಿರೋಧಿ ಭಯೋತ್ಪಾದಕ ಸಂಘಟನೆಗಳ ಕೇಂದ್ರ’ ಎಂದು ಉಲ್ಲೇಖಿಸಲಾಗಿದೆ. ಈ ಅವಧಿಯು ಮೇ ೨೦೨೫ರ ‘ಆಪರೇಷನ್ ಸಿಂದೂರ್’ ನಂತರದ್ದಾಗಿದೆ. ಇದರಲ್ಲಿ ಏಪ್ರಿಲ್ ೨೨, ೨೦೨೫ ರಂದು ನಡೆದ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ೯ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಲಾಗಿತ್ತು. ಆ ಕಾರ್ಯಾಚರಣೆಯ ನಂತರ ಕೆಲವು ಕಾಲ ‘ಲಾಂಚ್ ಪ್ಯಾಡ್’ಗಳನ್ನು ತೆಗೆದುಹಾಕಲಾಗಿತ್ತು ಅಥವಾ ಒಳಭಾಗಕ್ಕೆ ಸ್ಥಳಾಂತರಿಸಲಾಗಿತ್ತು; ಆದರೆ ೨೦೨೫ರ ಕೊನೆಯಲ್ಲಿ ಮತ್ತು ೨೦೨೬ರ ಆರಂಭದಲ್ಲಿ ಅವುಗಳನ್ನು ಮತ್ತೆ ಸಕ್ರಿಯಗೊಳಿಸಲಾಗಿದೆ.
ಗಲ್ಫ್ ರಾಷ್ಟ್ರಗಳ ಪರಿಸ್ಥಿತಿಯ ದುರ್ಬಳಕೆಗೆ ಯತ್ನ!
ಮೂಲಗಳ ಪ್ರಕಾರ, ಗಲ್ಫ್ ಪ್ರದೇಶದಲ್ಲಿನ ಸಂಘರ್ಷದ ಪರಿಸ್ಥಿತಿಯ ಲಾಭ ಪಡೆಯುವುದು ಪಾಕಿಸ್ತಾನದ ಉದ್ದೇಶವಾಗಿದೆ. ‘ಆಪರೇಷನ್ ಸಿಂದೂರ್’ ನಂತರದ ವೈಫಲ್ಯದಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಬಲವಾದ ಕ್ರಮ ಕೈಗೊಳ್ಳುವಂತೆ ಭಯೋತ್ಪಾದಕ ಸಂಘಟನೆಗಳಿಂದ ಐ.ಎಸ್.ಐ. ಮೇಲೆ ಒತ್ತಡ ಹೆಚ್ಚಾಗಿದೆ. ಇದರಿಂದಾಗಿ ಭಯೋತ್ಪಾದಕರ ಸಂಖ್ಯೆ ಹೆಚ್ಚಾಗಿದೆ ಎಂದು ನಂಬಲಾಗಿದೆ. ಕಳೆದ ಕೆಲವು ತಿಂಗಳಲ್ಲಿ ಕಾಶ್ಮೀರದ ಉರಿ, ನೌಶೇರಾ, ರಾಜೌರಿ ಮತ್ತು ಸುಂದರಬನಿಯಲ್ಲಿ ಭಯೋತ್ಪಾದಕರ ನುಸುಳುವಿಕೆಯ ಹಲವು ಪ್ರಯತ್ನಗಳನ್ನು ಭದ್ರತಾ ಪಡೆಗಳು ಹತ್ತಿಕ್ಕಿವೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !