ಇರಾನ್ 42 ಸಾವಿರ ನಿರಪರಾಧಿಗಳನ್ನು ಕೊಂದಿದೆ ಎಂದು ಯಾರಾದರೂ ಪೋಪ್‌ ಗೆ ತಿಳಿಸಿ !

ಶಾಂತಿಗಾಗಿ ಕರೆ ನೀಡಿದ 14 ನೇ ಪೋಪ್ ಲಿಯೋಯವರ ವಿರುದ್ಧ ಟ್ರಂಪ್ ಮತ್ತೊಮ್ಮೆ ಟೀಕೆ !

ವಾಷಿಂಗ್ಟನ (ಅಮೆರಿಕಾ) – ಇರಾನ್‌ ನಲ್ಲಿ 42 ಸಾವಿರಕ್ಕೂ ಹೆಚ್ಚು ನಿರಪರಾಧಿ ಮತ್ತು ನಿಶಸ್ತ್ರ ಪ್ರತಿಭಟನಾಕಾರರನ್ನು ಕೊಲ್ಲಲಾಗಿದೆ ಎಂದು ಯಾರಾದರೂ ಪೋಪ್‌ ಗೆ ಹೇಳಬೇಕು. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರು ಮತ್ತೊಮ್ಮೆ ಪೋಪ್ ಲಿಯೋ ಹದಿನಾಲ್ಕನೆಯವರನ್ನು ಟೀಕಿಸಿದ್ದಾರೆ. ಇರಾನ್ ವಿಷಯದಲ್ಲಿ ಸಂವಾದ ಮತ್ತು ಶಾಂತಿಗಾಗಿ ಪೋಪ್ ಲಿಯೋ ಅವರು ಕರೆ ನೀಡಿದ ನಂತರ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಯಾವುದೇ ವಿವಾದಕ್ಕೆ ಸಿಲುಕುವುದಿಲ್ಲ ! – 14 ನೇ ಪೋಪ್ ಲಿಯೋ

ಪೋಪ್ ಅವರು ಪ್ರತಿಕ್ರಿಯಿಸುತ್ತಾ, ನನಗೆ ರಾಜಕೀಯದಲ್ಲಿ ಭಾಗವಹಿಸಲು ಅಥವಾ ಟ್ರಂಪ್ ಅವರೊಂದಿಗೆ ಯಾವುದೇ ವಿವಾದಕ್ಕೆ ಸಿಲುಕಲು ಬಯಸುವುದಿಲ್ಲ. ಜಗತ್ತಿನಲ್ಲಿ ಶಾಂತಿಯನ್ನು ಪ್ರತಿಪಾದಿಸುವುದು ಮತ್ತು ಯುದ್ಧವನ್ನು ಅಂತ್ಯಗೊಳಿಸುವುದು ಮಾತ್ರ ನನ್ನ ಏಕೈಕ ಗುರಿಯಾಗಿದೆ, ಎಂದು ಹೇಳಿದರು. (ಶಾಂತಿಯ ಮಾತುಗಳಿಂದ ಯುದ್ಧಗಳು ನಿಲ್ಲುವುದಿಲ್ಲ ಎಂಬುದನ್ನು ಜಗತ್ತು ನೋಡುತ್ತಿದೆ! – ಸಂಪಾದಕರು)

ಸಂಪಾದಕೀಯ ನಿಲುವು

  • ಟ್ರಂಪ್ ಅವರು ನಿರಂತರವಾಗಿ ಕ್ಯಾಥೋಲಿಕ್ ಕ್ರೈಸ್ತರ ಸರ್ವೋಚ್ಚ ಧರ್ಮಗುರುಗಳನ್ನು ಟೀಕಿಸುತ್ತಿದ್ದರೂ, ಯಾವುದೇ ಕ್ರೈಸ್ತ ರಾಷ್ಟ್ರವು ಇದನ್ನು ವಿರೋಧಿಸುತ್ತಿಲ್ಲ ಎನ್ನುವುದನ್ನು ಗಮನಿಸಿ !
  • ಸಾವಿರಾರು ಬಲೂಚಿಗಳು, ಸಿಂಧಿಗಳು ಮತ್ತು ಹಿಂದೂಗಳನ್ನು ಕೊಂದ ಪಾಕಿಸ್ತಾನವನ್ನು ಬೆಂಬಲಿಸುವ ಟ್ರಂಪ್‌ ಗೆ ಆ ಸಾವುಗಳು ಕಾಣಿಸುತ್ತಿಲ್ಲವೇ?