ಗುರುಕಾರ್ಯದ ಧ್ಯಾಸವಿರುವ ಮತ್ತು ಪರಾತ್ಪರ ಗುರು ಡಾ. ಆಠವಲೆ ಅವರ ಬಗ್ಗೆ ಭಾವವಿರುವ ಪೂ. ಸಾಂತಪ್ಪ ಗೌಡ !

‘೧೮.೧೧.೨೦೨೪ ರಂದು ಸಂತಪದವಿಯಲ್ಲಿ ವಿರಾಜಮಾನರಾದ ಸನಾತನದ ೧೨೯ ನೇ(ಸಮಷ್ಟಿ) ಸಂತ ಪೂ. ಸಾಂತಪ್ಪ ಗೌಡ ಇವರ ೮೩ ನೆಯ ವರ್ಷದ ಹುಟ್ಟುಹಬ್ಬವು ಏಪ್ರಿಲ್‌ ೨೦ ರಂದು ಇದೆ. ಆ ನಿಮಿತ್ತ ಸನಾತನ ಪರಿವಾರದಿಂದ ಅವರ ಚರಣಗಳಲ್ಲಿ ನಮಸ್ಕಾರಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಶ್ರೀ. ಜನಾರ್ದನ ಗೌಡ ಮತ್ತು ಸೌ. ಪಾರ್ವತಿ ಜನಾರ್ದನ ಗೌಡ ಅವರು ಸನಾತನದ ೧೨೯ ನೇ (ಸಮಷ್ಟಿ) ಸಂತ ಪೂ. ಸಾಂತಪ್ಪ ಗೌಡ (ವಯಸ್ಸು ೮೩ ವರ್ಷ) ಅವರ ಕುರಿತು ಅದ್ಭುತವಾದ ಲೇಖನವನ್ನು ಬರೆದಿದ್ದಾರೆ. ಸನಾತನದ ಇತರ ಎಲ್ಲಾ ಸಂತರ ಬಗ್ಗೆಯೂ ಸಾಧಕರು ಇಂತಹ ಲೇಖನಗಳನ್ನು ಬರೆದು ಕಳುಹಿಸಬೇಕು, ಇದರಿಂದ ಎಲ್ಲಾ ಸಂತರ ಮಾಹಿತಿಯು ಎಲ್ಲರಿಗೂ ತಿಳಿಯುತ್ತದೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (೨.೭.೨೦೨೫)

೧. ಮಿತಭಾಷಿ : ಪೂ. ಸಾಂತಪ್ಪಮಾಮಾ ಸಾಧಕ ರೊಂದಿಗೆ ಮೃದುವಾಗಿ ಆತ್ಮೀಯತೆಯಿಂದ ಮತ್ತು ಮಿತವಾಗಿ ಮಾತನಾಡುವುದರಿಂದ ಸಾಧಕರಿಗೆ ಆನಂದ ಸಿಗುತ್ತದೆ.

೨. ಸಮಯಪಾಲನೆ : ಸತ್ಸಂಗ ಅಥವಾ ಇತರ ಕಾರ್ಯಕ್ರಮ ಗಳಿಗೆ ಮತ್ತು ಸೇವೆಗಾಗಿ ಅವರು ಬಸ್ಸಿನಲ್ಲಿ ಬಹಳ ದೂರ ಪ್ರಯಾಣಿಸ ಬೇಕಾಗುತ್ತದೆ. ಅವರ ಮನೆಯಿಂದ ಬಸ್‌ ನಿಲ್ದಾಣ ದೂರವಿದೆ ಮತ್ತು ಬಸ್ಸುಗಳ ಸಂಖ್ಯೆಯೂ ಕಡಿಮೆ ಇದೆ, ಆದರೂ ಅವರು ಸಮಯಕ್ಕೆ ಸರಿಯಾಗಿ ಬರುತ್ತಾರೆ. ಈಗ ವಯೋಸಹಜ ಶಾರೀರಿಕ ತೊಂದರೆಯಿಂದ ಅವರ ಮಗ ಅವರನ್ನು ಕರೆದೊಯ್ಯುತ್ತಾರೆ.

೩. ಪೂ. ಮಾಮಾ ಅವರು ತಮ್ಮ ಅನಾರೋಗ್ಯ ಪೀಡಿತ. ಪತ್ನಿಯ ಸೇವೆಯನ್ನು ಗುರುಸೇವೆಯೆಂದೇ ಮಾಡಿದ್ದರು.

೪. ಇತರರಿಗೆ ಸಹಾಯ ಮಾಡುವುದು : ಅವರು ಮಹಾ ವಿದ್ಯಾಲಯವೊಂದರಲ್ಲಿ ನೌಕರಿ ಮಾಡುತ್ತಿದ್ದರು. ಆಗ ನಮ್ಮ ಸಂಬಂಧಿಗೆ ಮಹಾವಿದ್ಯಾಲಯದ ಪ್ರವೇಶಾತಿಯಲ್ಲಿ ದಾಖಲೆಗಳ ವಿಷಯದಲ್ಲಿ ತೊಂದರೆಯಾದಾಗ ಪೂ. ಮಾಮಾ ಅವರುನಿರಪೇಕ್ಷವಾಗಿ ಸಹಾಯ ಮಾಡಿದರು.

೫. ಸಾಧಕರಿಗೆ ಆಧಾರ ನೀಡುವುದು : ಪೂ. ಮಾಮಾ ಪ್ರತಿಯೊಬ್ಬ ಸಾಧಕನ ಕಾಳಜಿ ವಹಿಸುತ್ತಾರೆ. ಸಾಧಕರಿಗೆ ಸಮಸ್ಯೆಯಿದ್ದರೆ, ಪೂ. ಮಾಮಾ ಅವರೇ ಸ್ವತಃ ಕರೆ ಮಾಡಿ ವಿಚಾರಿಸಿ ಸಹಾಯ ಮಾಡುತ್ತಾರೆ. ಎಲ್ಲಾ ಸಾಧಕರಿಗೆ ಪೂ. ಮಾಮಾ ಆಧಾರವಾಗಿದ್ದಾರೆ. ಅವರು ಸಾಧಕರಿಗಷ್ಟೇ ಅಲ್ಲ, ತಮ್ಮ ಸಂಪರ್ಕದ ಸಮಾಜದವರಿಗೂ ನಿರಪೇಕ್ಷವಾಗಿ ಸಹಾಯ ಮಾಡುತ್ತಾರೆ.

೬. ಸಮಷ್ಟಿ ಸೇವೆಯ ತಳಮಳ : ಅ. ಪೂ. ಮಾಮಾ ಅವರಿಗೆ ಈ ಹಿಂದೆ ಗುರುಪೂರ್ಣಿಮೆ, ಸತ್ಸಂಗ ಮತ್ತು ಇತರ ಕಾರ್ಯಕ್ರಮಗಳ ಸಮಯದಲ್ಲಿ ವಾಸ್ತುಶುದ್ಧಿ ಮಾಡುವ ಸೇವೆ ಇದ್ದಾಗ ಸೇವೆಗೆ ಬೇಕಾದ ಸಾಹಿತ್ಯವನ್ನು ಅವರೇ ತರುತ್ತಿದ್ದರು.

ಆ. ವರದಿಗಳ ತಯಾರಿ, ಸೇವೆಯ ಅಂಶಗಳನ್ನು ದಾಖಲಿಸುವುದು, ‘ಸನಾತನ ಪ್ರಭಾತ’ ಪತ್ರಿಕೆಯ ಚಂದಾದಾರರ ಅರ್ಜಿ ತುಂಬಿಸುವಿಕೆ, ಇಂತಹ ಸೇವೆಗಳನ್ನು ಅಚ್ಚುಕಟ್ಟಾಗಿ, ಆಯೋಜನಾಬದ್ಧ, ಪರಿಪೂರ್ಣ ಮತ್ತು ಭಾವಪೂರ್ಣ ಮಾಡುತ್ತಾರೆ.

೭. ಅಹಂಶೂನ್ಯತೆ : ಪೂ. ಮಾಮಾ ಅವರು ತಿಳುವಳಿಕೆ ಯುಳ್ಳವರು ಮತ್ತು ಅನುಭವಿಯಾಗಿದ್ದು, ಅವರ ನಡವಳಿಕೆಯು ಅಹಂಶೂನ್ಯವಾಗಿದೆ. ಅವರು ಎಲ್ಲಾ ವಯೋಮಾನದ ಸಾಧಕರೊಂದಿಗೆ ಸಮಾನವಾಗಿ ಸದಾ ಗೌರವ ಮತ್ತು ಪ್ರೀತಿ ಯಿಂದ ಮಾತನಾಡುತ್ತಾರೆ. ಕಿರಿಯರ ಮಾತುಗಳನ್ನೂ ಮನಸ್ಸಿಟ್ಟು ಕೇಳುತ್ತಾರೆ. ಅವರು ಅಧಿಕಾರವಾಣಿಯಿಂದ ಮಾತನಾಡುವುದಿಲ್ಲ. ತಮ್ಮ ತಪ್ಪನ್ನು ಒಪ್ಪಿ ಕ್ಷಮೆ ಯಾಚಿಸುತ್ತಾರೆ.

 ೮. ಗುರುಭಾವ : ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರನ್ನು ಬ್ರಹ್ಮೋತ್ಸವದ ಸಮಯದಲ್ಲಿ ಪೂ. ಮಾಮಾ ಒಮ್ಮೆ ನೋಡಿದ್ದರು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಛಾಯಾಚಿತ್ರಗಳಲ್ಲಿ ಗುರುಗಳ ಅಸ್ತಿತ್ವವನ್ನು ಅನುಭವಿಸುತ್ತಾರೆ.

ಆ. ಪೂ. ಮಾಮಾ ಅವರಿಗೆ ರಾಮನಾಥಿ (ಗೋವಾ) ಸನಾತನ ಆಶ್ರಮದಿಂದ ಪ್ರಸಾದ ಸಿಕ್ಕಾಗ ‘ಗುರುಗಳೇ ಪ್ರಸಾದ ನೀಡಿದ್ದಾರೆ’ ಎಂದು ಅನಿಸುತ್ತದೆ.

ನಮಗೆ ಪೂ. ಮಾಮಾರಲ್ಲಿರುವ ‘ಪ್ರೇಮಭಾವ, ನಮ್ರತೆ, ಇತರರ ವಿಚಾರ, ಸ್ವಯಂಶಿಸ್ತು, ತತ್ಪರತೆ, ಆಜ್ಞಾಪಾಲನೆ, ಶ್ರದ್ಧೆ’ ಮುಂತಾದ ಗುಣಗಳ ದರ್ಶನವಾಯಿತು. ‘ಹೇ ಗುರುದೇವ, ನೀವೇ ನಮಗೆ ಸಂತರ ಸತ್ಸಂಗವನ್ನು ನೀಡಿದ್ದೀರಿ’, ಅದಕ್ಕಾಗಿ ನಾವು ನಿಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.

– ಶ್ರೀ. ಜನಾರ್ದನ ಗೌಡ ಮತ್ತು ಸೌ. ಪಾರ್ವತಿ ಜನಾರ್ದನ ಗೌಡ, ಕರಾಯ, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.