ವಾರಕರಿ-ವಿರೋಧಿ ವಿಚಾರಗಳನ್ನು ಮಂಡಿಸುವವರಿಗೆ ನಗರ ನಕ್ಸಲ್-ವಾದದೊಂದಿಗೆ ಸಂಬಂಧವಿದೆ ಎಂಬ ಆರೋಪ!

ಮುಂಬಯಿ – ವಾರಕರಿ ಸಂಪ್ರದಾಯದ ಕುರಿತು ಶರದ್ ಪವಾರ್ ಅವರು ಬರೆದಿರುವ ಲೇಖನ ಸಂಪೂರ್ಣ ತಪ್ಪಾಗಿದೆ. ಶರದ್ ಪವಾರ್ ಅವರು ಇಂತಹ ಲೇಖನ ಬರೆದಿರುವುದು ನನಗೆ ದುಃಖ ತಂದಿದೆ. ಶರದ್ ಪವಾರ್ ಅವರ ಮೂಲ ಸ್ವಭಾವ ಜಾತ್ಯತೀತವಾಗಿದೆ. ಅವರು ಧರ್ಮವನ್ನು ನಂಬುವುದಿಲ್ಲ ಎಂದು ಅವರೇ ಅನೇಕ ಬಾರಿ ಒಪ್ಪಿಕೊಂಡಿದ್ದಾರೆ. ಹಾಗಾಗಿ ವಾರಕರಿ ಸಂಪ್ರದಾಯದ ಬಗ್ಗೆ ಅವರ ಬಳಿ ಸರಿಯಾದ ಮಾಹಿತಿ ಇರಲಿಕ್ಕಿಲ್ಲ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿಕೆ ನೀಡಿದ್ದಾರೆ.
ಅವರು,
1. ವಾರಕರಿ ಸಂಪ್ರದಾಯದೊಳಗೆ ಕೆಲವು ಜನರು ನುಸುಳಿ, ವಾರಕರಿ ವಿಚಾರಗಳಿಗೆ ವಿರುದ್ಧವಾದ ವಿಚಾರಗಳನ್ನು ಮಂಡಿಸಲು ಪ್ರಯತ್ನಿಸುತ್ತಿದ್ದರು. ಅಂತಹವರನ್ನು ವಾರಕರಿ ಸಂಪ್ರದಾಯವು ಹೊರಹಾಕಿದೆ. ವಾರಕರಿ ಸಂಪ್ರದಾಯವು ತಿರಸ್ಕರಿಸಿದ ಜನರಿಗೂ ಮತ್ತು ನಗರ ನಕ್ಸಲ್-ವಾದಕ್ಕೂ ಸಂಬಂಧವಿರುವುದು ನಮಗೆ ಕಂಡುಬಂದಿದೆ. ಆ ಕುರಿತಾದ ದಾಖಲೆಗಳೂ ನನ್ನ ಬಳಿಯಿವೆ.
2. ವಾರಕರಿ ಸಂಪ್ರದಾಯವು ಸಾವಿರಾರು ವರ್ಷಗಳ ಸಮೃದ್ಧ ಪರಂಪರೆಯನ್ನು ಹೊಂದಿದೆ. ವಾರಕರಿ ವಿಚಾರವು ಶ್ರದ್ಧೆ ಮತ್ತು ಭ್ರಾತೃತ್ವದ ವಿಚಾರವಾಗಿದೆ. ಭಾಗವತ ಧರ್ಮದ ಪತಾಕೆಯನ್ನು ಹಿಡಿದು ‘ಪ್ರತಿಯೊಬ್ಬ ವ್ಯಕ್ತಿಯ ಮನಸ್ಸು ಶುದ್ಧವಾಗಬೇಕು’ ಎಂದು ಆಲೋಚಿಸುವ, ಹಾಗೆಯೇ ಪರಿಸರದೊಂದಿಗೆ ಸಾಮರಸ್ಯವನ್ನು ಸಾಧಿಸುವಂತಹ ವಿಚಾರವಿದು.
3. ವಾರಕರಿ ವಿಚಾರಗಳಿಗೆ ವಿರುದ್ಧವಾಗಿ ಹೋಗಿ, ವಾರಕರಿ ಸಂಪ್ರದಾಯದಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲು ಯತ್ನಿಸುತ್ತಿರುವ ಅಂತಹ ಜನರ ಪಟ್ಟಿಯನ್ನು ನಾನು ಅವರಿಗೆ ಕಳುಹಿಸಿಕೊಡುತ್ತೇನೆ.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ