ನೇಹಾ ಹಿರೇಂಠ ಅವಳ ತಂದೆಯ ಆಘಾತಕಾರಿ ಹೇಳಿಕೆ

ಹುಬ್ಬಳ್ಳಿ – ನಗರದ ‘ಬಿವಿಬಿ ಕಾಲೇಜಿನ’ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಪ್ರಕರಣ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಆರೋಪಿ ಫಯಾಜ್ ನಿಂದ ನಡೆದ ನೇಹಾ ಹತ್ಯೆಯು ‘ಲವ್ ಜಿಹಾದ್’ ಶಂಕೆ ವ್ಯಕ್ತವಾಗಲು ಕಾರಣವಾಗಿತ್ತು. ಈ ಪ್ರಕರಣವನ್ನು ‘ಲವ್ ಜಿಹಾದ್’ ದೃಷ್ಟಿಕೋನದಿಂದ ತನಿಖೆ ನಡೆಸುವಂತೆ ನೇಹಾ ತಂದೆ ನಿರಂಜನ್ ಹಿರೇಮಠ್ ಒತ್ತಾಯಿಸಿದ್ದರು. ಈಗ ಈ ಪ್ರಕರಣ ಮತ್ತೆ ಚರ್ಚೆಗೆ ಬರಲು ಕಾರಣವೆಂದರೆ, ಹುಬ್ಬಳ್ಳಿಯ ‘ಜಿಮ್ ಟ್ರೈನರ್’ (ವ್ಯಾಯಾಮ ತರಬೇತುದಾರ) ಸಮೀರ್ ಮುಲ್ಲಾ ಹಿಂದೂ ಹುಡುಗಿಯರನ್ನು ಪ್ರೀತಿಯ ನಾಟಕವಾಡಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾತನಾಡಿದ ನಿರಂಜನ್ ಹಿರೇಮಠ್, ‘ನನ್ನ ಮಗಳು ನೇಹಾ ಹಿರೇಮಠಳನ್ನು ಕೊಂದ ಫಯಾಜ್ ಅದೇ ಜಿಮ್‌ನಲ್ಲಿ ಟ್ರೈನರ್ ಆಗಿದ್ದನು. ಇದರಿಂದ ನನ್ನ ಮಗಳ ಹತ್ಯೆಗೂ ಸಮೀರ್ ಮುಲ್ಲಾನಿಗೂ ಸಂಬಂಧವಿದೆ ಎಂಬುದು ಸ್ಪಷ್ಟವಾಗುತ್ತದೆ’ ಎಂದಿದ್ದಾರೆ. ಈ ದೃಷ್ಟಿಕೋನದಿಂದ ಈ ಪ್ರಕರಣದ ತನಿಖೆ ನಡೆಸಬೇಕು ಎಂದು ನಿರಂಜನ್ ಹಿರೇಮಠ್ ಆಗ್ರಹಿಸಿದ್ದಾರೆ.
ನೇಹಾ ಹಿರೇಮಠ್ ಪ್ರಕರಣವೇನು?
೧೮ ಏಪ್ರಿಲ್ ೨೦೨೪ ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ೨೩ ವರ್ಷದ ಯುವತಿ ನೇಹಾ ಹಿರೇಮಠ್ ಅವರನ್ನು ಫಯಾಜ್ ಖೊಂಡುನಾಯಕ್ ಹಾಡಹಗಲೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದನು. ನೇಹಾ ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಅವರ ಪುತ್ರಿಯಾಗಿದ್ದರು.
ಆತ ನೇಹಾಗೆ ಪ್ರೀತಿಸಲು ಹೇಳುತ್ತಿದ್ದನು, ಆದರೆ ನೇಹಾ ಅದನ್ನು ನಿರಾಕರಿಸಿದ್ದಳು. ಈ ನಿರಾಕರಣೆಯ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಆತ ಈ ಹೆಜ್ಜೆ ಇಟ್ಟಿದ್ದಾನೆ ಎಂಬುದು ಬಹಿರಂಗವಾಗಿತ್ತು. ಫಯಾಜ್ ನೇಹಾಗೆ ವಿವಾಹದ ಪ್ರಸ್ತಾವನೆ ಇಟ್ಟಿದ್ದನು; ಆದರೆ ಆಕೆ ನಿರಾಕರಿಸಿದ ಕಾರಣ ಆಕೆಯನ್ನು ಹತ್ಯೆ ಮಾಡಲಾಗಿತ್ತು.
ಹುಬ್ಬಳ್ಳಿಯಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣ ಬೆಳಕಿಗೆ!
ಸಮೀರ್ ಮುಲ್ಲಾ ಹಿಂದೂ ಹುಡುಗಿಯರನ್ನು ‘ಲವ್ ಜಿಹಾದ್’ ಜಾಲದಲ್ಲಿ ಸಿಲುಕಿಸಿರುವ ಪ್ರಕರಣ ನಡೆಯುತ್ತಿರುವಾಗಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ‘ಲವ್ ಜಿಹಾದ್’ ಪ್ರಕರಣ ಬೆಳಕಿಗೆ ಬಂದಿದೆ. ಮುಫೀಸ್ ಮಿಯನ್ನಾವರ್ ಎಂಬ ಮುಸ್ಲಿಂ ವ್ಯಕ್ತಿ ಹಿಂದೂ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತ ಯುವತಿ ಪೊಲೀಸರ ಬಳಿ ದೂರು (ಎಫ್‌ಐಆರ್) ದಾಖಲಿಸಿದ್ದಾಳೆ. ಆರೋಪಿ ಬೇರೊಂದು ಜಿಮ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಮುಫೀಸ್ ಮಿಯನ್ನಾವರ್ ತನ್ನ ಗುರುತನ್ನು ಮರೆಮಾಚಿ, ಪ್ರೀತಿಯ ಜಾಲದಲ್ಲಿ ಸಿಲುಕಿಸಿ, ಮದುವೆಯ ಆಮಿಷವೊಡ್ಡಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಈ ಬಗ್ಗೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ