|

ನವದೆಹಲಿ – ಜಗತ್ತಿನ ಗಮನವು ಅಮೇರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದತ್ತ ನೆಟ್ಟಿರುವಾಗ, ಭಾರತವು ಮಾತ್ರ ಮೌನವಾಗಿ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಿದೆ. ಭಾರತವು ಏಪ್ರಿಲ್ 6 ರಂದು ಜಗತ್ತಿನ ಬೆರಳೆಣಿಕೆಯಷ್ಟು ದೇಶಗಳಲ್ಲಿ ಮಾತ್ರ ಇರುವಂತಹ ಅಪರೂಪದ ಅಣು ತಂತ್ರಜ್ಞಾನ ಸಾಮರ್ಥ್ಯವನ್ನು ಸಾಧಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಮಾಹಿತಿಯನ್ನು ದೇಶವಾಸಿಗಳಿಗೆ ನೀಡಿದ್ದಾರೆ. ಭಾರತದ ಮೊದಲ ಸ್ವದೇಶಿ ‘ಪ್ರೊಟೊಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್’ ತಮಿಳುನಾಡಿನ ಕಲ್ಪಕ್ಕಮ್ ನಲ್ಲಿ ಯಶಸ್ವಿಯಾಗಿ ಕಾರ್ಯಾನ್ವಿತಗೊಂಡಿದೆ. ಇದು ಭಾರತದ ಅಣುಶಕ್ತಿ ಪಯಣದಲ್ಲಿನ ಒಂದು ಪ್ರಮುಖ ಮತ್ತು ಐತಿಹಾಸಿಕ ಮೈಲಿಗಲ್ಲಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ಇದರಲ್ಲಿ 200ಕ್ಕೂ ಹೆಚ್ಚು ಭಾರತೀಯ ಸಂಸ್ಥೆಗಳ ಕೊಡುಗೆಯಿದೆ ಹಾಗೂ ಸಣ್ಣ ಕೈಗಾರಿಕೆಗಳ ಮಹತ್ವದ ಸಹಭಾಗವಿದೆ.
Today, India takes a defining step in its civil nuclear journey, advancing the second stage of its nuclear programme.
The indigenously designed and built Prototype Fast Breeder Reactor at Kalpakkam has attained criticality.
This advanced reactor, capable of producing more fuel…
— Narendra Modi (@narendramodi) April 6, 2026
ಈ ಸ್ವದೇಶಿ ರಿಯಾಕ್ಟರ್ ಕಾರ್ಯಾರಂಭ ಮಾಡಿರುವುದು ಭಾರತೀಯ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ಕೌಶಲ್ಯದ ಸಂಕೇತವಾಗಿದೆ. ಥೋರಿಯಂ ನಿಕ್ಷೇಪಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಇದೊಂದು ನಿರ್ಣಾಯಕ ಹೆಜ್ಜೆಯಾಗಿದೆ. ಇದು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ ಎಂದು ಪ್ರಧಾನಿ ಮೋದಿಯವರು ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿದ್ದಾರೆ.
India achieves rare nuclear technological capability
India’s first indigenously developed Prototype Fast Breeder Reactor has been commissioned in Kalpakkam
“A moment of pride for the entire nation!” – Prime Minister Narendra Modi#NuclearPower pic.twitter.com/nKLySIMdEu
— Sanatan Prabhat (@SanatanPrabhat) April 7, 2026
ಅಣುಶಕ್ತಿ ಕಾರ್ಯಕ್ರಮದ ಮುಂದಿನ ಹಂತದ ಆರಂಭ !ವಿಜ್ಞಾನಿಗಳ ಅನುಸಾರ, ಈ ಯಶಸ್ಸು ಭಾರತದ ಮೂರು ಹಂತಗಳ ಅಣುಶಕ್ತಿ ಕಾರ್ಯಕ್ರಮದ ಎರಡನೇ ಹಂತದ ಆರಂಭವಾಗಿದೆ. ಮುಂದಿನ ಹಂತದಲ್ಲಿ ಭಾರತವು ತನ್ನ ಬೃಹತ್ ಥೋರಿಯಂ ನಿಕ್ಷೇಪಗಳನ್ನು ಬಳಸಿಕೊಂಡು ಅಗ್ಗದ ಮತ್ತು ಶುದ್ಧ ಶಕ್ತಿಯನ್ನು ಉತ್ಪಾದಿಸಬಹುದು. ಇದರಿಂದ ದೇಶದಲ್ಲಿನ ದೊಡ್ಡ ಜನಸಂಖ್ಯೆಯ ವಿದ್ಯುತ್ ಅಗತ್ಯತೆಗಳನ್ನು ಪೂರೈಸಬಹುದು ಮತ್ತು ಕಲ್ಲಿದ್ದಲಿನ ಬಳಕೆಯಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. |
ಇಂಧನ ಉರಿಯುವಾಗಲೇ ಹೊಸ ಇಂಧನದ ಸೃಷ್ಟಿ! – ರಿಯಾಕ್ಟರ್‌ನ ವೈಶಿಷ್ಟ್ಯ
ಸಾಮಾನ್ಯ ಪರಮಾಣು ರಿಯಾಕ್ಟರ್‌ನಲ್ಲಿ ಇಂಧನ ಉರಿದು ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಇಂಧನವು ಖಾಲಿಯಾಗುತ್ತದೆ; ಆದರೆ ಈ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಭಿನ್ನವಾಗಿದೆ. ಇದು ಇಂಧನವನ್ನು ಬಳಸುವಾಗಲೇ ಹೊಸ ಇಂಧನವನ್ನು ಉತ್ಪಾದಿಸುತ್ತದೆ, ಆದ್ದರಿಂದಲೇ ಇದನ್ನು ‘ಬ್ರೀಡರ್’ (Breeder) ಎಂದು ಕರೆಯಲಾಗುತ್ತದೆ. ಈ ರಿಯಾಕ್ಟರ್ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ನಂತರ, ವಾಣಿಜ್ಯ ಮಟ್ಟದಲ್ಲಿ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಅನ್ನು ನಿರ್ವಹಿಸುವಲ್ಲಿ ರಷ್ಯಾದ ನಂತರ ಭಾರತವು ಎರಡನೇ ದೇಶವಾಗಲಿದೆ. ಭಾರತದ ನಂತರ ಕೇವಲ ಚೀನಾಡಾ ಬಳಿ ಇಂತಹ ರಿಯಾಕ್ಟರ್ ಹೊಂದಿದೆ; ಆದರೆ ಅದು ವಾಣಿಜ್ಯ ಬಳಕೆಗೆ ಸೀಮಿತವಾಗಿಲ್ಲ. ಈ ರಿಯಾಕ್ಟರ್ ಸುಧಾರಿತ ಭದ್ರತಾ ವ್ಯವಸ್ಥೆಗಳನ್ನು ಹೊಂದಿದ್ದು ತುರ್ತು ಪರಿಸ್ಥಿತಿಯಲ್ಲಿ ತನ್ನಷ್ಟಕ್ಕೆ ತಾನೇ ಸುರಕ್ಷಿತವಾಗಿ ಸ್ಥಗಿತಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
ಭಾರತದ ಅಣುಶಕ್ತಿ ಕ್ಷೇತ್ರದ ಯಶಸ್ಸಿನಿಂದ ಪಾಕಿಸ್ತಾನ ಕಂಗಾಲು!
ಅಣುಶಕ್ತಿ ಕ್ಷೇತ್ರದಲ್ಲಿ ಭಾರತವು ದೊಡ್ಡ ಯಶಸ್ಸನ್ನು ಸಾಧಿಸಿದ ನಂತರ, ನೆರೆಯ ಪಾಕಿಸ್ತಾನವು ಅದನ್ನು ಆಕ್ಷೇಪಿಸಲು ಪ್ರಾರಂಭಿಸಿದೆ. ಪಾಕಿಸ್ತಾನದ ಶಸ್ತ್ರಾಸ್ತ್ರ ನಿಯಂತ್ರಣ ಸಲಹೆಗಾರ ಮತ್ತು ‘ಸ್ಟ್ರಾಟೆಜಿಕ್ ಪ್ಲಾನ್ಸ್ ಡಿವಿಷನ್’ ಸದಸ್ಯರಾದ ಜಹೀರ್ ಕಾಝಮಿಯವರು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಪಾಕಿಸ್ತಾನಕ್ಕೆ ‘ಎಚ್ಚರದಿಂದಿರಲು’ ಕರೆ ನೀಡಿದ್ದಾರೆ. ಇದು ‘ಬ್ರೀಡರ್’ ಮಾದರಿಯ ರಿಯಾಕ್ಟರ್ ಆಗಿರುವುದರಿಂದ, ವಿದ್ಯುತ್ ಉತ್ಪಾದನೆಯ ಜೊತೆಗೆ ಪ್ಲುಟೋನಿಯಂ (ಅಣುಬಾಂಬ್ ತಯಾರಿಕೆಗೆ ಅಗತ್ಯವಾದ ಅಂಶ) ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಆರೋಪಿಸಿದ್ದಾರೆ. ಆದ್ದರಿಂದ ಭಾರತವು ಈ ತಂತ್ರಜ್ಞಾನವನ್ನು ಅಣ್ವಸ್ತ್ರಗಳ ತಯಾರಿಕೆಗೆ ಬಳಸಬಹುದು ಎಂಬುದು ಅವರ ವಾದ. ಈ ರಿಯಾಕ್ಟರ್ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (IAEA) ನಿಯಂತ್ರಣದಲ್ಲಿ ಇಲ್ಲದಿರುವುದರಿಂದ, ಭಾರತವು ಯಾವುದೇ ನಿರ್ಬಂಧಗಳಿಲ್ಲದೆ ಉನ್ನತ ಗುಣಮಟ್ಟದ ಪ್ಲುಟೋನಿಯಂನ್ನು ಉತ್ಪಾದಿಸಬಹುದು ಎಂದೂ ಅವರು ಆರೋಪಿಸಿದ್ದಾರೆ.
ಆದರೆ, ಭಾರತ ಸರಕಾರದ ಅನುಸಾರ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ನೀತಿಗಳನ್ನು ಯಾವುದೇ ಅಂತರರಾಷ್ಟ್ರೀಯ ಸಂಸ್ಥೆಯ ನಿಯಂತ್ರಣದಲ್ಲಿ ಇಡಲಾಗುವುದಿಲ್ಲ. ಆದ್ದರಿಂದ, ಈ ಯೋಜನೆಯು ದೇಶದ ದೀರ್ಘಕಾಲೀನ ಇಂಧನ ಮತ್ತು ಕಾರ್ಯತಂತ್ರದ ಅಗತ್ಯಗಳ ಒಂದು ಪ್ರಮುಖ ಭಾಗವಾಗಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!