ಬಂಗಾಳ ವಿಧಾನಸಭಾ ಚುನಾವಣೆ

ಕೋಲಕಾತಾ – ಬಂಗಾಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಗರದಲ್ಲಿ ಭಾಜಪ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ. ನಗರದ ಬೆಹಾಲಾ ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ರತ್ನಾ ಚಟ್ಟೋಪಾಧ್ಯಾಯ ಅವರ ಸಮ್ಮುಖದಲ್ಲಿ ಅವರ ಬೆಂಬಲಿಗರು ಭಾಜಪ ಕಚೇರಿಯನ್ನು ಧ್ವಂಸಗೊಳಿಸಿದರು. ಭಾಜಪ ಬೆಂಬಲಿಗರು ವಿರೋಧಿಸಿದಾಗ ಎರಡೂ ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿತು. ಭಾಜಪದ ಪ್ರಕಾರ, ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷದ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಮತ್ತು ಪ್ರವೇಶ ದ್ವಾರವನ್ನು ಹಾನಿಗೊಳಿಸಿದ್ದಾರೆ.
Democracy Under Attack In Bengal! 🚩🔥
The mask has fallen once again. In a blatant display of lawlessness, Trinamool Congress (TMC) goons have brutally attacked and vandalised a BJP office during the Bengal Assembly Elections.
This isn't just an attack on a building; it is an… pic.twitter.com/8WLzLPj4vS
— Sanatan Prabhat (@SanatanPrabhat) April 6, 2026
೧. ಈ ಘಟನೆಯ ಕುರಿತು ಭಾಜಪ ಅಭ್ಯರ್ಥಿ ಇಂದ್ರನೀಲ್ ಖಾನ್ ಆರೋಪ ಮಾಡಿದ್ದು, ಬೆಹಾಲಾ ಪಶ್ಚಿಮ ಕ್ಷೇತ್ರದಲ್ಲಿ ಸೋಲಿನ ಭೀತಿಯಿಂದ ತೃಣಮೂಲ ಕಾಂಗ್ರೆಸ್ ಈ ಕೃತ್ಯ ಎಸಗಿದೆ ಎಂದಿದ್ದಾರೆ. ರತ್ನಾ ಚಟ್ಟೋಪಾಧ್ಯಾಯ ಮತ್ತು ಅವರ ಬೆಂಬಲಿಗರು ಪೊಲೀಸರ ಸಮ್ಮುಖದಲ್ಲೇ ಭಾಜಪ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ ಹಾಗೂ ಪೊಲೀಸರು ಅದನ್ನು ತಡೆಯುವ ಬದಲು ಸುಮ್ಮನಿದ್ದರು ಎಂದು ಅವರು ಆರೋಪಿಸಿದ್ದಾರೆ.
೨. ಘಟನೆಯ ನಂತರ ಇಂದ್ರನೀಲ್ ಖಾನ್ ಅವರು ತಮ್ಮ ಬೆಂಬಲಿಗರೊಂದಿಗೆ ಪರ್ಣಶ್ರೀ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಮತ್ತೊಂದೆಡೆ ರತ್ನಾ ಚಟ್ಟೋಪಾಧ್ಯಾಯ ಕೂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರಿಂದಾಗಿ ಅಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಮುಖಾಮುಖಿಯಾಗಿ ಪ್ರತಿಭಟನೆ ಆರಂಭಿಸಿದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ಪ್ರಸ್ತುತ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಸಂಪಾದಕೀಯ ನಿಲುವುಗೂಂಡಾ ಕಾರ್ಯಕರ್ತರಿಂದ ತುಂಬಿರುವ ತೃಣಮೂಲ ಕಾಂಗ್ರೆಸ್ ಪಕ್ಷ ಜನತೆಗೆ ಎಂತಹ ಕಾನೂನು ಆಡಳಿತವನ್ನು ನೀಡೀತು? |
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!