ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯದ ವಿಡಿಯೋಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಗೋತಿಯೆ ಶಂಕೆ!

ನವ ದೆಹಲಿ – ಪ್ರಸಿದ್ಧ ಲೇಖಕ ಮತ್ತು ಪತ್ರಕರ್ತ ಫ್ರಾನ್ಸುವಾ ಗೋತಿಯೆ ಅವರು ತಮ್ಮ ಫೇಸ್ ಬುಕ್ ಖಾತೆಯನ್ನು ಶಾಶ್ವತವಾಗಿ ರದ್ದುಗೊಳಿಸಲಾಗಿದೆ (ಡಿಲೀಟ್) ಎಂದು ತಿಳಿಸಿದ್ದಾರೆ. ಅವರು ‘ಎಕ್ಸ್’ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಗೋತಿಯೆ ಅವರ ಪ್ರಕಾರ, ಅವರು ಬಾಂಗ್ಲಾದೇಶದ ಹಿಂದೂಗಳ ಮೇಲಿನ ಹಿಂಸಾಚಾರಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಪ್ರಸಾರ ಮಾಡಿದ ನಂತರ ಅವರ ಖಾತೆಯ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಘಟನೆಯು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದ ಮೇಲೆ ಮತ್ತೆ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ.
ಗೋತಿಯೆ ಅವರು ‘ಎಕ್ಸ್’ನಲ್ಲಿ, ಅಂದಾಜು ೨ ಲಕ್ಷ ಸ್ನೇಹಿತರಿದ್ದ ತಮ್ಮ ಫೇಸ್ ಬುಕ್ ಖಾತೆಯನ್ನು ಇದ್ದಕ್ಕಿದ್ದಂತೆ ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ತಮ್ಮ ಇನ್ ಸ್ಟಾಗ್ರಾಮ್ ಖಾತೆಯನ್ನು ಈ ಹಿಂದೆ ೨ ಬಾರಿ ರದ್ದುಗೊಳಿಸಲಾಗಿತ್ತು ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗೋತಿಯೆ ಅವರು ಸಾಮಾಜಿಕ ಮಾಧ್ಯಮಗಳ ನಿಯಂತ್ರಣದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಈ ಹಿಂದೆ ‘ಯೂ ಟ್ಯೂಬ್ ಚಾನಲ್’ ಮತ್ತು ‘ಟ್ವಿಟರ್’ ಖಾತೆಗಳನ್ನು ಸಹ ಮುಚ್ಚಲಾಗಿತ್ತು!
ಗೋತಿಯೆ ಅವರ ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೆ ಈ ಹಿಂದೆಯೂ ಕ್ರಮ ಕೈಗೊಂಡ ಘಟನೆಗಳು ನಡೆದಿವೆ. ೨೦೨೧ ರಲ್ಲಿ ಅವರ ‘ಟ್ವಿಟರ್’ ಖಾತೆಯನ್ನು ಅಮಾನತುಗೊಳಿಸಲಾಗಿತ್ತು, ಹಾಗೂ ೨೦೨೪ ರಲ್ಲಿ ಅವರ ಯೂ ಟ್ಯೂಬ್ ಚಾನಲ್ ಅನ್ನು ರದ್ದುಗೊಳಿಸಲಾಗಿತ್ತು.
‘ಮೆಟಾ’ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ
ಫೇಸ್ ಬುಕ್ ಮಾಲೀಕತ್ವ ಹೊಂದಿರುವ ‘ಮೆಟಾ’ ಸಂಸ್ಥೆಯಿಂದ ಈ ಪ್ರಕರಣದ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಸಾಮಾನ್ಯವಾಗಿ ಸಮುದಾಯದ ನಿಯಮಗಳ ಉಲ್ಲಂಘನೆ, ಸೂಕ್ಷ್ಮ ಅಥವಾ ಹಿಂಸಾತ್ಮಕ ವಿಷಯಗಳಂತಹ ಕಾರಣಗಳಿಗಾಗಿ ಖಾತೆಗಳನ್ನು ರದ್ದುಗೊಳಿಸಲಾಗುತ್ತದೆ.
ಸಂಪಾದಕೀಯ ನಿಲುವುಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಡಂಗುರ ಸಾರುವ ‘ಮೆಟಾ’ದಂತಹ ಸಾಮಾಜಿಕ ಮಾಧ್ಯಮಗಳ ಹಿಂದೂ ವಿರೋಧಿ ಸ್ವರೂಪವು ಇದರಿಂದ ಕಂಡುಬರುತ್ತದೆ ! |
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಯುಕ್ರೇನ್ ನಿಂದ ರಷ್ಯಾದ 12 ಪ್ರಾಂತ್ಯಗಳ ಮೇಲೆ ನೂರಾರು ಡ್ರೋನ್ ದಾಳಿ ! : Ukraine-Russia War
1985 ರಲ್ಲಿ ಏರ್ ಇಂಡಿಯಾದ ‘ಕನಿಷ್ಕ’ ವಿಮಾನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಸ್ಫೋಟ ನಡೆಸಿದ್ದರು! ಭಾರತೀಯ ಮೂಲದ 329 ಪ್ರಯಾಣಿಕರು ಸಾವನ್ನಪ್ಪಿದ್ದರು ! : Kanishka Blast
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency