ಭಾಗ್ಯನಗರ (ತೆಲಂಗಾಣ) ದ ಪ್ರಖರ ಹಿಂದುತ್ವವಾದಿ ಶಾಸಕ ಟಿ. ರಾಜಾ ಸಿಂಗ್ ಅವರ ಕರೆ

ನಾಂದೇಡ್ – ಮಹಾರಾಷ್ಟ್ರದ ಸಚಿವ ನಿತೇಶ್ ರಾಣೆ ಅವರು ಮದರಸಾಗಳ ಕುರಿತು ನೀಡಿದ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ. ಮಹಾರಾಷ್ಟ್ರದ ಎಲ್ಲಾ ಮದರಸಾಗಳನ್ನು ಮುಚ್ಚಿ. ಈ ಮದರಸಾಗಳಲ್ಲಿ ದೇಶವಿರೋಧಿ ಶಿಕ್ಷಣವನ್ನು ನೀಡಲಾಗುತ್ತಿದೆ. ನಿತೇಶ್ ರಾಣೆ ಅವರಿಗೆ ನನ್ನ ವಿನಂತಿ ಏನೆಂದರೆ, ಅವರು ಈ ಅನಧಿಕೃತ ಮದರಸಾಗಳನ್ನು ಮುಚ್ಚುವ ಬದಲು ಅವುಗಳಿಗೆ ಬೀಗ ಜಡಿಯಬೇಕು. ಕುಖ್ಯಾತ ಗೂಂಡಾ ದಾವೂದ್ ಇಬ್ರಾಹಿಂ ಮತ್ತು ಅಜ್ಮಲ್ ಕಸಬ್ ನಂತಹ ಭಯೋತ್ಪಾದಕರು ಇಂತಹ ಮದರಸಾಗಳಿಂದಲೇ ಹುಟ್ಟಿಕೊಂಡಿದ್ದಾರೆ. ಹೀಗಾಗಿ ನಿತೇಶ್ ರಾಣೆ ಅವರು ತಮ್ಮ ಮಾತನ್ನು ನಿಜ ಮಾಡಿ ತೋರಿಸಬೇಕು ಎಂದು ಭಾಗ್ಯನಗರ (ತೆಲಂಗಾಣ) ದ ಪ್ರಖರ ಹಿಂದುತ್ವವಾದಿ ಶಾಸಕ ಟಿ. ರಾಜಾ ಸಿಂಗ್ ಇಲ್ಲಿ ಕರೆ ನೀಡಿದರು. ನಾಂದೇಡ್ ಜಿಲ್ಲೆಯ ಬಿಲೋಲಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
🔥 Bold Statements From T. Raja Singh ! 🔥
Staunch Hindutvawadi MLA from Bhagyanagar, @TigerRajaSingh, issues a bold appeal in Nanded:
🚫 "Minister Nitesh Rane must lock up all Madrasas in Maharashtra!"🚽 "The CM should remove Aurangzeb’s tomb and build a toilet there!"
— Sanatan Prabhat (@SanatanPrabhat) April 5, 2026
ಮುಖ್ಯಮಂತ್ರಿಗಳು ಔರಂಗಜೇಬನ ಸಮಾಧಿಯನ್ನು ತೆರವುಗೊಳಿಸಿ ಅಲ್ಲಿ ಶೌಚಾಲಯ ನಿರ್ಮಿಸಬೇಕು!
ಟಿ. ರಾಜಾ ಸಿಂಗ್ ಮಾತು ಮುಂದುವರೆಸಿ, ರಾಜ್ಯದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಛತ್ರಪತಿ ಸಂಭಾಜಿನಗರದಲ್ಲಿರುವ ಔರಂಗಜೇಬನ ಸಮಾಧಿಯನ್ನು ತೆರವುಗೊಳಿಸಲು ಭಯವಾಗುತ್ತಿದೆಯೇ? ಎಂದು ಕೇಳಿದರು. ಔರಂಗಜೇಬನ ಸಮಾಧಿಯನ್ನು ಕಿತ್ತುಹಾಕಿದರೆ ಮುಸ್ಲಿಮರ ಮತಗಳು ಸಿಗುವುದಿಲ್ಲ ಎಂಬ ಭಯವಿದೆಯೇ? ಆದರೆ ಅವರು (ಮುಸ್ಲಿಮರು) ನಿಮಗೆ ಮತ ಹಾಕುವುದಿಲ್ಲ ಎಂಬುದನ್ನು ಬರೆದಿಟ್ಟುಕೊಳ್ಳಿ. ಮಹಾರಾಷ್ಟ್ರದಲ್ಲಿ ಔರಂಗಜೇಬನ ಕಬ್ರ ಬೇಡ. ಅವನು ನಮ್ಮ ಛತ್ರಪತಿ ಸಂಭಾಜಿರಾಜರನ್ನು ಚಿತ್ರಹಿಂಸೆ ನೀಡಿ ಕೊಂದನು. ಆದ್ದರಿಂದ, ಅವನ ಕಬ್ರವನ್ನು ತೆರವುಗೊಳಿಸಲು ಸೈನಿಕರು ಬೇಕಾದರೆ, ನಾವು ಲಕ್ಷಾಂತರ ಸಂಖ್ಯೆಯಲ್ಲಿ ಬರುತ್ತೇವೆ.
ದೇಶದ್ರೋಹಿಗಳಿಗೆ ಗುಂಡು ಹಾರಿಸಲು ಮನೆಮನೆಗಳಲ್ಲಿ ಬಂದೂಕುಗಳಿರಬೇಕು!
ಹಿಂದೂಗಳು ತಮ್ಮ ಮನೆಗಳಲ್ಲಿ ಸ್ವರಕ್ಷಣೆಗಾಗಿ ಆಯುಧಗಳನ್ನು ಇಟ್ಟುಕೊಳ್ಳಬೇಕು ಎಂದು ಶಾಸಕ ಟಿ. ರಾಜಾ ಸಿಂಗ್ ಹಿಂದೂಗಳಿಗೆ ಕರೆ ನೀಡಿದರು. ದೇವರ ಗರ್ಭಗುಡಿಯಲ್ಲಿ ಆಯುಧಗಳನ್ನು ಇಡುವುದು ಕಾನೂನುಬದ್ಧವಾಗಿದೆ; ಆದರೆ ಅದನ್ನು ಹೊರತೆಗೆದು ಸ್ವರಕ್ಷಣೆಗಾಗಿ ಪ್ರತಿರೋಧವೊಡ್ಡಿದರೆ ವಿಷಯ ಬೇರೆಯಾಗುತ್ತದೆ. ಭವಿಷ್ಯದಲ್ಲಿ ಯುದ್ಧ ಸಂಭವಿಸಿದರೆ ಮತ್ತು ಆಯುಧಗಳು ಇಲ್ಲದಿದ್ದರೆ, ನೀವು ಏನು ಮಾಡುತ್ತೀರಿ? ಹೇಗೆ ಹೋರಾಡುತ್ತೀರಿ? ದೇಶದ್ರೋಹಿಗಳು ದಾಳಿ ಮಾಡಲು ಬಂದರೆ, ಆತ್ಮರಕ್ಷಣೆಗಾಗಿ ನಾವು ಸಿದ್ಧರಿರಬೇಕು, ಎಂದು ಹೇಳಿದರು.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ