Gau Samman : ರಾಷ್ಟ್ರವ್ಯಾಪಿ ಗೋಹತ್ಯೆ ನಿಷೇಧಕ್ಕಾಗಿ ಏಪ್ರಿಲ್ 27 ರಿಂದ ‘ಗೋಸನ್ಮಾನ್ ಆವಾಹನ್ ಅಭಿಯಾನ’ !

ಮುಂದಿನ ಒಂದೂವರೆ ವರ್ಷಗಳ ಕಾಲ ದೇಶಾದ್ಯಂತ 780 ಜಿಲ್ಲೆಗಳು ಮತ್ತು 5,೦೦೦ ತಾಲ್ಲೂಕುಗಳಲ್ಲಿ ಗೋಸಂತರು ಮತ್ತು ಗೋಭಕ್ತರಿಂದ ಪ್ರತಿಭಟನೆ ಹಾಗೂ ಆಮರಣ ಉಪವಾಸ ಸತ್ಯಾಗ್ರಹ ನಡೆಯಲಿದೆ.

ನವ ದೆಹಲಿ: ರಾಷ್ಟ್ರವ್ಯಾಪಿ ಗೋರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲು ದೇಶದ ಸಂತರು, ಗೋರಕ್ಷಕರು ಮತ್ತು ಅಸಂಖ್ಯಾತ ಧರ್ಮಪ್ರೇಮಿ ಹಿಂದೂಗಳು ಸಜ್ಜಾಗಿದ್ದಾರೆ. ಇದಕ್ಕಾಗಿ ‘ಗೋಸನ್ಮಾನ್ ಆವಾಹನ್ ಅಭಿಯಾನ’ ವನ್ನು ಘೋಷಿಸಲಾಗಿದೆ. ಈ ವ್ಯಾಪಕ ಅಭಿಯಾನದ ಮೊದಲ ಹಂತವಾಗಿ 27 ಏಪ್ರಿಲ್ 2026 ರಂದು ದೇಶದ 780 ಜಿಲ್ಲೆಗಳ ಗೋಸಂತರು ಮತ್ತು ಗೋಭಕ್ತರು ತಮ್ಮ ತಮ್ಮ ತಾಲ್ಲೂಕು/ಉಪವಿಭಾಗ/ಜಿಲ್ಲಾ ಕಚೇರಿಗಳಿಗೆ ಭೇಟಿ ನೀಡಲಿದ್ದಾರೆ. ತಹಶೀಲ್ದಾರ್, ಬಿಡಿಒ ಅಥವಾ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಗೋಮಾತೆಯನ್ನು ರಕ್ಷಿಸುವಂತೆ ಪ್ರಾರ್ಥಿಸಲಿದ್ದಾರೆ.

ಅಭಿಯಾನದ ಮುಖ್ಯ ಉದ್ದೇಶ: ರಾಷ್ಟ್ರವ್ಯಾಪಿ ಗೋರಕ್ಷಣಾ ಕಾಯ್ದೆ

ಸಂವಿಧಾನದ ಚೌಕಟ್ಟಿನೊಳಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಅಹಿಂಸಾತ್ಮಕವಾಗಿ ಈ ಕೆಳಗಿನ ವಿನಂತಿಗಳನ್ನು ಮಾಡಲಾಗುವುದು:

ಅ.ಸೇವೆ: ಗೋಮಾತೆಯ ಸೇವೆಗಾಗಿ ಮೀಸಲಾದ ಒಂದು ಕೇಂದ್ರ ಕಾಯ್ದೆಯನ್ನು ಜಾರಿಗೆ ತರಬೇಕು. ಇದರಿಂದ ಭಾರತದಾದ್ಯಂತ ಗೋಕಲ್ಯಾಣ ಸೇವೆಗಳು ಏಕರೂಪವಾಗಿ ನಡೆಯಲು ಸಾಧ್ಯವಾಗುತ್ತದೆ.

ಆ.ರಕ್ಷಣೆ: ಭಾರತದಲ್ಲಿ ಗೋಹತ್ಯೆಯು ಸಂಪೂರ್ಣವಾಗಿ ನಿಲ್ಲಬೇಕು.

ಇ.ಗೌರವ: ಗೋಮಾತೆಗೆ ‘ರಾಷ್ಟ್ರಮಾತೆ’ ಎಂಬ ಸಾಂವಿಧಾನಿಕ ಸ್ಥಾನಮಾನ ನೀಡಬೇಕು. ಈ ಮೂಲಕ ಗೋವನ್ನು ‘ರಾಷ್ಟ್ರೀಯ ದೇವತೆ’, ‘ರಾಷ್ಟ್ರೀಯ ಪೂಜನೀಯ ಸಂಕೇತ’ ಮತ್ತು ‘ರಾಷ್ಟ್ರೀಯ ಪರಂಪರೆ’ಯಾಗಿ ಗುರುತಿಸಲ್ಪಡಬೇಕು.

‘ಗೋಸನ್ಮಾನ್ ಆವಾಹನ್ ಅಭಿಯಾನ’ದ ಯೋಜನೆ

1. (ಡಿಸೆಂಬರ್ 2025 ರಿಂದ ಏಪ್ರಿಲ್ 2026): ಐದು ತಿಂಗಳುಗಳ ಕಾಲ ಸನಾತನ ಭಾರತೀಯ ಸಮಾಜವನ್ನು ಜಾಗೃತಗೊಳಿಸಲು ವ್ಯಾಪಕ ಪ್ರಚಾರ ಮತ್ತು ಜನಸಂಪರ್ಕ ಅಭಿಯಾನ ನಡೆಸಲಾಗುವುದು.

2.ತಾಲ್ಲೂಕು ಮಟ್ಟ (27 ಏಪ್ರಿಲ್ 2026): ಎಲ್ಲಾ ಅವಶ್ಯಕತೆ ಸಿದ್ಧತೆಗಳು ಪೂರ್ಣಗೊಂಡ ನಂತರ ಏಪ್ರಿಲ್ 27ಕ್ಕೆ ಕ್ಷೇತ್ರದಲ್ಲಿನ ಎಲ್ಲಾ ಗೋಭಕ್ತರು ಮತ್ತು ಸಂತರು ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸುವರು.

3.ಜಿಲ್ಲಾ ಮಟ್ಟ (27 ಜುಲೈ 2026): ಎರಡುವರೆ ತಿಂಗಳ ಅವಧಿಯಲ್ಲಿ ಸರಕಾರದ ಜೊತೆಗೆ ರಚನಾತ್ಮಕ ಸಂವಾದ ನಡೆಸಲಾಗುವುದು .ಜುಲೈ 10ರ ಒಳಗೆ ಸರಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರದಿದ್ದರೆ, ಜುಲೈ 27 ರಂದು ದೇಶಾದ್ಯಂತದ ಪ್ರತಿಯೊಂದು ಜಿಲ್ಲೆಯ ಕಾರ್ಯಾಲಯಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿಗಳಿಗೆ ಹೊಸ ಮನವಿ ಸಲ್ಲಿಸಲಾಗುವುದು.

4.ರಾಜ್ಯ ಮಟ್ಟ (27 ಅಕ್ಟೋಬರ್ 2026): ಎರಡುವರೆ ತಿಂಗಳ ಅವಧಿಯಲ್ಲಿ ಆಡಳಿತದ ಜೊತೆಗೆ ಮತ್ತೊಮ್ಮೆ ಸಂವಾದ ನಡೆಸಲಾಗುವುದು. ಅಕ್ಟೋಬರ್ 10ರ ಒಳಗೆ ಸಕಾರಾತ್ಮಕ ಸ್ಪಂದನ ಸಿಗದಿದ್ದರೆ, ಅಕ್ಟೋಬರ್ 27 ರಂದು ಗೋಭಕ್ತರು ಆಯಾ ರಾಜ್ಯಗಳ ರಾಜಧಾನಿಗಳಿಗೆ ತೆರಳಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸುವರು. ಅಲ್ಲದೇ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಮೂಲಕ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಮತ್ತು ಪ್ರಧಾನಮಂತ್ರಿಗಳನ್ನು ಉದ್ದೇಶಿಸಿ ರಾಜ್ಯ ಸರಕಾರದ ಸಚಿವರ ಬಳಿ ಒಂದು ಮನವಿ ನೀಡುವರು.

5.ರಾಷ್ಟ್ರೀಯ ಮಟ್ಟ (27 ಫೆಬ್ರವರಿ 2027 ರಿಂದ 15 ಆಗಸ್ಟ್ 2027): ಮುಂದಿನ ಮೂರು ತಿಂಗಳ ಕಾಲ(ನವಂಬರ್, ಡಿಸೆಂಬರ್, ಜನವರಿ) ಕಾದು ನೋಡಲಾಗುವುದು. ಆದರೆ ಜನವರಿ 26ರ ಒಳಗೆ ಸರಕಾರ ಸ್ಪಂದಿಸದಿದ್ದರೆ, ಫೆಬ್ರವರಿ 27 ರಂದು ದೇಶದ 36 ಪ್ರಾಂತ್ಯದಲ್ಲಿನ ಎಲ್ಲಾ 780 ಜಿಲ್ಲೆಗಳ ಮತ್ತು 5,೦೦೦ ತಾಲೂಕಗಳಿಂದ ನೇಮಕಗೊಂಡಿರುವ ಸಂತರು ಮತ್ತು ಗೋಭಕ್ತರು ದೆಹಲಿಗೆ ಆಗಮಿಸುವರು. ಅಲ್ಲಿ
ಸುಮಾರು ಐದೂವರೆ ತಿಂಗಳುಗಳ ಕಾಲ ದೆಹಲಿಯಲ್ಲಿ ಶಾಂತಿಯುತ ‘ಸಂಕೀರ್ತನೆ’ ಮತ್ತು ನಿರಂತರ ಮನವಿಗಳ ಮೂಲಕ ಕೇಂದ್ರ ಸರಕಾರವನ್ನು ಒತ್ತಾಯಿಸಲಾಗುವುದು. ಈ ಗೋ ಭಕ್ತರು ಐದೂವರೆ ತಿಂಗಳ ಕಾಲ ಅಂದರೆ, ಆಗಸ್ಟ್ 15.2027 ವರೆಗೆ ದೆಹಲಿಯಲ್ಲೇ ತಂಗುವರು. ಗೋವುಗಳ ಕಲ್ಯಾಣ, ರಕ್ಷಣೆ ಮತ್ತು ಗೌರವಕ್ಕಾಗಿ ಸರ್ಕಾರಕ್ಕೆ ತಮ್ಮ ಪ್ರಾರ್ಥನೆ ಮತ್ತು ಮನವಿಗಳನ್ನು ನಿರಂತರವಾಗಿ ಮುಂದುವರೆಸುವರು.

6.ಆಮರಣ ಉಪವಾಸ (16 ಆಗಸ್ಟ್ 2027 ರಿಂದ): ಮೇಲೆ ಹೇಳಿರುವ ರೀತಿಯಲ್ಲಿ 4 ಹಂತದಲ್ಲಿ (ತಾಲೂಕ, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ) 16 ತಿಂಗಳ ಕಾಲ ಶಾಂತಿಯುತ ಪ್ರಾರ್ಥನೆಯ ನಂತರವೂ ಗೋಗಳ ರಕ್ಷಣೆಗಾಗಿ ಸರಕಾರದಿಂದ ಅಪೇಕ್ಷಿತ ಫಲಿತಾಂಶ ಸಿಗದಿದ್ದರೆ, ಆಗ ಆಗಸ್ಟ್ 16 ರಿಂದ 5 ಗೋಭಕ್ತರ ತಂಡಗಳು ಆಮರಣ ಉಪವಾಸ ಆರಂಭಿಸಲಿವೆ. ಒಂದು ವೇಳೆ ಹೋರಾಟಗಾರರು ಪ್ರಾಣತ್ಯಾಗ ಮಾಡಿದರೆ, ಅವರ ಸ್ಥಾನಕ್ಕೆ ತಕ್ಷಣವೇ ಮತ್ತೊಬ್ಬ ಗೋಪ್ರೇಮಿ, ಸಂತರು ಅಥವಾ ಗೋ ಭಕ್ತರು ಮುಂದೆ ಬಂದು ಉಪವಾಸ ಮುಂದುವರಿಸಲಿದ್ದಾರೆ.
ಗೋಸೇವೆ, ಗೋರಕ್ಷಣೆ ಮತ್ತು ಗೋಸನ್ಮಾನದ ಗುರಿಗಳು ಸಂಪೂರ್ಣವಾಗಿ ಈಡೇರುವವರೆಗೆ ಈ ಹೋರಾಟ ನಿರಂತರವಾಗಿ ಮುಂದುವರಿಯಲಿದೆ.

ಸಂಪರ್ಕ ಮತ್ತು ಸಹಭಾಗಕ್ಕಾಗಿ ಕರೆ !

1. ಗೋಸೇವೆ ಮತ್ತು ಗೋರಕ್ಷಣೆಯ ಮೂಲಕ ರಾಷ್ಟ್ರರಕ್ಷಣೆ ಹಾಗೂ ಸಂಸ್ಕೃತಿ ಸಂವರ್ಧನೆಗಾಗಿ ಸಮರ್ಪಿತವಾಗಿರುವ ಈ ನಿಸ್ವಾರ್ಥ ಮತ್ತು ಪವಿತ್ರ ಅಭಿಯಾನದಲ್ಲಿ ಪಾಲ್ಗೊಳ್ಳಲು ಈ ಸಂಖ್ಯೆಗೆ ‘ಮಿಸ್ಡ್ ಕಾಲ್’ ನೀಡಿ: 9067777323

2. ನಿಮ್ಮ ಸವಿಸ್ತಾರವಾದ ಮಾಹಿತಿಯನ್ನು ಈ ಕೆಳಗಿನ ಸಂಖ್ಯೆಗೆ ವಾಟ್ಸಾಪ್ (WhatsApp) ಮೂಲಕ ಕಳುಹಿಸಿ: 8239711008

3. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 95717121404. ಯಾರಾದರೂ ಈ ಅಭಿಯಾನದ ಹೆಸರಿನಲ್ಲಿ ದೇಣಿಗೆ ಅಥವಾ ನಿಧಿಯನ್ನು ಕೇಳುತ್ತಿದ್ದರೆ, ದಯವಿಟ್ಟು 8239711008 ಈ ಸಂಖ್ಯೆಗೆ ವಾಟ್ಸಾಪ್ ಮೂಲಕ ದೂರು ದಾಖಲಿಸಿ.

5. ಹೆಚ್ಚಿನ ಮಾಹಿತಿಗಾಗಿ ಈ ವೆಬ್‌ಸೈಟ್‌ಗೆ ಭೇಟಿ ನೀಡಿ: https://www.gausamman.cloud

ಈ ‘ದೈವಿ’ ಅಭಿಯಾನದ ಕಾರ್ಯಕಾರಿ ಸಮಿತಿ ಹೀಗಿರಲಿದೆ !

ಈ ಅಭಿಯಾನದ ಕಾರ್ಯಕಾರಿ ಸಮಿತಿಯನ್ನು ಸಾಕ್ಷಾತ್ ದೇವತೆಗಳನ್ನೇ ಕೇಂದ್ರವಾಗಿಟ್ಟುಕೊಂಡು ರೂಪಿಸಲಾಗಿದೆ. ಇದರ ಅಡಿಯಲ್ಲಿ ಮುಖ್ಯ ಸಂರಕ್ಷಕರು ಗೋಮಾತೆ, ಅಭಿಯಾನದ ಅಧ್ಯಕ್ಷರು ನಂದಿ ಬಾಬಾ, ಹಾಗೂ ಅಭಿಯಾನಕ್ಕಾಗಿ ಭಾರತೀಯ ಪರಂಪರೆಯ ಎಲ್ಲಾ ಪೂಜನೀಯ ದೇವತೆಗಳು ಮತ್ತು ದೇವಗಣಗಳ ಆಶೀರ್ವಾದವನ್ನು ಕೋರಲಾಗಿದೆ.
ಅಭಿಯಾನದಲ್ಲಿ ಸೇವೆ ಸಲ್ಲಿಸುವವರಲ್ಲಿ ಭಾರತೀಯ ಪರಂಪರೆಯ ಎಲ್ಲಾ ಆಚಾರ್ಯರು (ಆಧ್ಯಾತ್ಮಿಕ ಗುರುಗಳು), ಮಹಾನ್ ಸಂತರು ಮತ್ತು ಗಣ್ಯ ವ್ಯಕ್ತಿತ್ವಗಳು; ಗೋಸಂತರು, ಗೋಭಕ್ತರು, ಗೋರಕ್ಷಕರು, ಗೋಸೇವಕರು, ಗೋಪಾಲಕರು, ಗೋಪುತ್ರರು, ಗೋವತ್ಸಗಳು (ಕರುಗಳು) ಮತ್ತು ಎಲ್ಲಾ ಗೋಪ್ರೇಮಿ ಸಾರ್ವಜನಿಕರು ಒಳಗೊಂಡಿದ್ದಾರೆ.

ಅಭಿಯಾನದ ಪ್ರಮುಖ ಬೇಡಿಕೆಗಳು ಮತ್ತು ಪ್ರಸ್ತಾವನೆಗಳು !

1. ಗೋ-ಉತ್ಪನ್ನಗಳು (ಹಸು ಹಾಲಿನ ಉತ್ಪನ್ನಗಳು, ತುಪ್ಪ, ಸಗಣಿ ಇತ್ಯಾದಿ):

  • ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸಗಣಿ ಮತ್ತು ಗೋಮೂತ್ರ ಆಧಾರಿತ ಸಮಗ್ರ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಬೇಕು.
  • ರಾಸಾಯನಿಕ ಕೃಷಿಯನ್ನು ನಿಯಂತ್ರಿಸಿ, ಗೋ-ಆಧಾರಿತ (ಸಾವಯವ) ಕೃಷಿಗೆ ಸಕ್ರಿಯವಾಗಿ ಉತ್ತೇಜನ ನೀಡಬೇಕು.
  • ಫಿನೈಲ್ ಬದಲಿಗೆ ‘ಗೋನೈಲ್’ (ಗೋಮೂತ್ರ ಆಧಾರಿತ ಕ್ರಿಮಿನಾಶಕ) ಬಳಕೆಯನ್ನು ಕಡ್ಡಾಯಗೊಳಿಸಬೇಕು.
  • ಆಯುರ್ವೇದ ಆಸ್ಪತ್ರೆಗಳಲ್ಲಿ ಪಂಚಗವ್ಯ ಆಧಾರಿತ ಔಷಧಿಗಳನ್ನು ಉಚಿತವಾಗಿ ವಿತರಿಸಬೇಕು.
  • ದೊಡ್ಡ ‘ಶಾಪಿಂಗ್ ಮಾಲ್‌’ಗಳಲ್ಲಿ ಗೋ-ಆಧಾರಿತ ಕೃಷಿ ಉತ್ಪನ್ನಗಳು, ದೇಸಿ ಹಸುವಿನ ಹೈನು ಉತ್ಪನ್ನಗಳು ಹಾಗೂ ಸಗಣಿ ಮತ್ತು ಗೋಮೂತ್ರದಿಂದ ತಯಾರಿಸಿದ ಉತ್ಪನ್ನಗಳ ಮಾರಾಟಕ್ಕಾಗಿ ಪ್ರತ್ಯೇಕ ಮಳಿಗೆಯನ್ನು (ಕೌಂಟರ್) ಮೀಸಲಿಡುವುದನ್ನು ಕಡ್ಡಾಯಗೊಳಿಸಬೇಕು.

2. ಗೋಶಾಲೆ:

  • ಭಾರತದ ಪ್ರತಿಯೊಂದು ರಾಜ್ಯದಲ್ಲಿ ಕನಿಷ್ಠ ಒಂದು ‘ಗೋ ಅಭಯಾರಣ್ಯ’ವನ್ನು ಸ್ಥಾಪಿಸಬೇಕು.
  • ಪ್ರತಿಯೊಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ‘ನಂದಿಶಾಲೆ’ಯನ್ನು ಸ್ಥಾಪಿಸಬೇಕು.
  • ಗೋಶಾಲೆಗಳನ್ನು ‘ಮನರೇಗಾ’ (MGNREGA) ಯೋಜನೆಯೊಂದಿಗೆ ಜೋಡಿಸಬೇಕು.
  • ಸರಕಾರದ ನಿಯಂತ್ರಣದಲ್ಲಿರುವ ದೇವಾಲಯಗಳು, ವಿಶೇಷವಾಗಿ ದೊಡ್ಡ ಮೊತ್ತದ ದೇಣಿಗೆ ಪಡೆಯುವ ದೇವಾಲಯಗಳು ಕನಿಷ್ಠ ಒಂದು ಗೋಶಾಲೆಯ ನಿರ್ವಹಣೆಯನ್ನು ಮಾಡುವುದನ್ನು ಕಡ್ಡಾಯಗೊಳಿಸಬೇಕು.

3. ಕಾನೂನು ಹಂತದ ಬೇಡಿಕೆಗಳು:

  • ಗೋಹತ್ಯೆ ಮಾಡುವವರಿಗೆ ಮತ್ತು ಜಾನುವಾರುಗಳ ಕಳ್ಳಸಾಗಣೆಯಲ್ಲಿ ತೊಡಗಿರುವ ಅಪರಾಧಿಗಳಿಗೆ ಕಠಿಣ ಜೀವಾವಧಿ ಶಿಕ್ಷೆಯ ನಿಬಂಧನೆಯನ್ನು ಜಾರಿಗೆ ತರಬೇಕು.
  • ಕಂಪನಿಗಳು ತಮ್ಮ ಸಿ.ಎಸ್.ಆರ್. (CSR – ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ನಿಧಿಯ ನಿರ್ದಿಷ್ಟ ಭಾಗವನ್ನು ಗೋಸೇವೆಯ ಚಟುವಟಿಕೆಗಳಿಗಾಗಿ ಮೀಸಲಿಡುವುದನ್ನು ಕಡ್ಡಾಯಗೊಳಿಸಬೇಕು.
  • ಒಮ್ಮೆ ಮಾತ್ರ ಬಳಸುವ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು.

4. ಗೋ-ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಕುರಿತಾದ ಪ್ರಮುಖ ಪ್ರಸ್ತಾವನೆಗಳು:

  • ಜಿಲ್ಲಾ ಮಟ್ಟದಲ್ಲಿ ಸ್ವತಂತ್ರ ಪಂಚಗವ್ಯ ಆಸ್ಪತ್ರೆಗಳನ್ನು ಸ್ಥಾಪಿಸಬೇಕು.
  • ದೇಸಿ ಹಸುಗಳ ಆರ್ಥಿಕ, ವೈಜ್ಞಾನಿಕ ಮತ್ತು ಧಾರ್ಮಿಕ ಮಹತ್ವವನ್ನು ವಿವರಿಸುವ ವಿಷಯಗಳನ್ನು ಸರಕಾರಿ ಹಾಗೂ ಖಾಸಗಿ ಶಾಲೆ-ಕಾಲೇಜುಗಳಲ್ಲಿ ಕಡ್ಡಾಯಗೊಳಿಸಬೇಕು.
  • ಹೆದ್ದಾರಿಗಳಲ್ಲಿ ಹಸುಗಳ ಅಪಘಾತಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು.
  • ಪ್ರತಿ ೫೦ ಕಿಲೋಮೀಟರ್ ಅಥವಾ ಪ್ರತಿ ಟೋಲ್ ನಾಕಾದಲ್ಲಿ ಗಾಯಗೊಂಡ ಹಸುಗಳಿಗೆ ತುರ್ತು ಚಿಕಿತ್ಸೆ ನೀಡಲು ಒಂದು ‘ಗೋ-ವಾಹಿನಿ’ (ಆಂಬ್ಯುಲೆನ್ಸ್) ಹಾಗೂ ೧೫೦ ರಿಂದ ೨೦೦ ಕಿಲೋಮೀಟರ್ ಅಂತರದಲ್ಲಿ ಒಂದು ಸಮರ್ಪಿತ ‘ಗೋ-ಆಸ್ಪತ್ರೆ’ಯನ್ನು ಸ್ಥಾಪಿಸಬೇಕು.

ಸ್ವಯಂಸೇವಕರ ಸಂಘಟನೆ !

ದೇಶಾದ್ಯಂತ ಸುಮಾರು 780 ಜಿಲ್ಲೆಗಳಲ್ಲಿ, ಜಿಲ್ಲಾ ಮಟ್ಟದಲ್ಲಿ 3 ಸಂತರು (ಆಧ್ಯಾತ್ಮಿಕ ನಾಯಕರು) ಮತ್ತು 3 ಸಮರ್ಪಿತ ಹಾಗೂ ನಿಷ್ಠಾವಂತ ‘ಗೋಪ್ರೇಮಿ’ಗಳನ್ನು ಆಯ್ಕೆ ಮಾಡಲಾಗುವುದು. ತಮ್ಮ ತಮ್ಮ ಜಿಲ್ಲೆಗಳಲ್ಲಿ ಜನಸಂಪರ್ಕ ಮತ್ತು ಸೇವಾಕಾರ್ಯದ ಜವಾಬ್ದಾರಿ ಹೊಂದಿರುವ ಈ 6 ಪ್ರಮುಖ ವ್ಯಕ್ತಿಗಳು, ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ತಾಲ್ಲೂಕಿಗೂ ಭೇಟಿ ನೀಡುವರು. ಅಲ್ಲಿ ಕನಿಷ್ಠ 3 ಗೋಭಕ್ತರು ಮತ್ತು 3 ಗೋಸಂತರನ್ನು ನೇಮಕ ಮಾಡಿಕೊಳ್ಳಲಾಗುವುದು. ಈ ತಂಡದಿಂದ ಒಬ್ಬ ಗೋಭಕ್ತ ಮತ್ತು ಒಬ್ಬ ಗೋಸಂತರಿಗೆ ಆಯಾ ತಾಲ್ಲೂಕಿನ ಸೇವೆಯ ಮುಖ್ಯ ಜವಾಬ್ದಾರಿಯನ್ನು ವಹಿಸಲಾಗುವುದು. ಈ ಮೂಲಕ ದೇಶಾದ್ಯಂತ 5,೦೦೦ ತಾಲ್ಲೂಕುಗಳಲ್ಲಿ ಸ್ಥಳೀಯ ಜನಸಂಪರ್ಕ ಕಾರ್ಯಕರ್ತರು ಕಾರ್ಯನಿರ್ವಹಿಸುವರು.

ಅಭಿಯಾನದ ಪ್ರಮುಖ ವೈಶಿಷ್ಟ್ಯಗಳು !

  • ಈ ಅಭಿಯಾನವನ್ನು ಯಾವುದೇ ನಿರ್ದಿಷ್ಟ ಸಂಸ್ಥೆ ಅಥವಾ ಸಂಘಟನೆಯ ಹೆಸರಿನಲ್ಲಿ ನಡೆಸಲಾಗುವುದಿಲ್ಲ. ಈ ಅಭಿಯಾನವು ಕೇವಲ ಈಶ್ವರ, ಗೋಮಾತೆ ಮತ್ತು ನಂದಿ ಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಲಿದೆ.
  • ಈ ಅಭಿಯಾನದ ನೇತೃತ್ವವನ್ನು ಯಾವುದೇ ಸಂತರು, ಮಹಂತರು ಅಥವಾ ರಾಜಕಾರಣಿಗಳು ವಹಿಸುವುದಿಲ್ಲ. ಅಭಿಯಾನಕ್ಕೆ ಸಂಬಂಧಿಸಿದ ಯಾವುದೇ ಪ್ರಚಾರ ಸಾಮಗ್ರಿಗಳಲ್ಲಿ ಯಾವುದೇ ವ್ಯಕ್ತಿಯ ಭಾವಚಿತ್ರವನ್ನು ಮುದ್ರಿಸಲಾಗುವುದಿಲ್ಲ.
  • ಈ ಅಭಿಯಾನವು ಸಂಪೂರ್ಣವಾಗಿ ಅಹಿಂಸಾತ್ಮಕವಾಗಿರಲಿದೆ.
  • ಈ ಅಭಿಯಾನದ ಅಡಿಯಲ್ಲಿ ಗೋಭಕ್ತರು ತಮ್ಮ ಭಾವನೆಗಳನ್ನು ಮತ್ತು ಬೇಡಿಕೆಗಳನ್ನು ‘ಸಂಕೀರ್ತನೆ’ (ಭಕ್ತಿಗೀತೆಗಳು), ಮೆರವಣಿಗೆಗಳು ಮತ್ತು ಲಿಖಿತ ಮನವಿಗಳ ಮೂಲಕ ವ್ಯಕ್ತಪಡಿಸುವರು.
  • ಈ ಅಭಿಯಾನದಲ್ಲಿ ಯಾರಿಂದಲೂ ಯಾವುದೇ ರೀತಿಯ ದೇಣಿಗೆ ಅಥವಾ ಆರ್ಥಿಕ ಸಹಾಯವನ್ನು ಕೇಳಲಾಗುವುದಿಲ್ಲ ಮತ್ತು ಸ್ವೀಕರಿಸಲಾಗುವುದಿಲ್ಲ.