
ಇಸ್ಲಾಮಾಬಾದ್ (ಪಾಕಿಸ್ತಾನ) – ಇರಾನ್-ಅಮೆರಿಕ ಯುದ್ಧದ ಹಿನ್ನೆಲೆಯಲ್ಲಿ ಸಂಯುಕ್ತ ಅರಬ್ ಎಮಿರೇಟ್ಸ್ (ಯುಎಇ), ಪಾಕಿಸ್ತಾನಕ್ಕೆ ನೀಡಿದ್ದ ೨ ಶತಕೋಟಿ ಡಾಲರ್ (ಅಂದಾಜು ೧೬,೦೦೦ ಕೋಟಿ ರೂಪಾಯಿ) ಸಾಲವನ್ನು ಏಪ್ರಿಲ್ ೧೭ ರೊಳಗೆ ಬಡ್ಡಿ ಸಮೇತ ಮರುಪಾವತಿಸುವಂತೆ ಆದೇಶಿಸಿದೆ. ಇದರಲ್ಲಿ ಮುಖ್ಯ ವಿಷಯವೆಂದರೆ, ಎಮಿರೇಟ್ಸ್ ಈ ಸಾಲದ ಮೇಲಿನ ಬಡ್ಡಿ ದರವನ್ನು ಶೇ. ೩% ರಿಂದ ನೇರವಾಗಿ ಶೇ. ೬.೫% ಕ್ಕೆ ಏರಿಸಿದೆ. ಆರ್ಥಿಕವಾಗಿ ದಿವಾಳಿಯಾಗಿರುವ ಮತ್ತು ಹಸಿವಿನಿಂದ ಕಂಗಾಲಾಗಿರುವ ಪಾಕಿಸ್ತಾನಕ್ಕೆ ಇದರಿಂದ ಭಾರಿ ಹೊಡೆತ ಬಿದ್ದಿದೆ.
ಪಾಕಿಸ್ತಾನಕ್ಕೆ ದ್ವಿಮುಖ ಸಂಕಟ
ಪಾಕಿಸ್ತಾನಕ್ಕೆ ಇಂದು ಕೈಯಲ್ಲಿ ತಟ್ಟೆ ಹಿಡಿದು ಜಗತ್ತಿನಾದ್ಯಂತ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ಪಾಕ್ ನ ವಿದೇಶಿ ವಿನಿಮಯ ಮೀಸಲು ನಿಧಿ ಖಾಲಿಯಾಗಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ ೧೭ ರೊಳಗೆ ೨ ಶತಕೋಟಿ ಡಾಲರ್ ಸಂಗ್ರಹಿಸುವುದು ಪಾಕಿಸ್ತಾನಕ್ಕೆ ಅಸಾಧ್ಯದ ಮಾತಾಗಿದೆ. ಒಂದು ವೇಳೆ ಪಾಕಿಸ್ತಾನ ಈ ಹಣವನ್ನು ನೀಡದಿದ್ದರೆ, ಸಂಯುಕ್ತ ಅರಬ್ ಎಮಿರೇಟ್ಸ್ ಜೊತೆಗಿನ ಸಂಬಂಧವು ಶಾಶ್ವತವಾಗಿ ಹದಗೆಡುವ ಸಾಧ್ಯತೆಯಿದೆ. ಇರಾನ್ ಅನ್ನು ಬೆಂಬಲಿಸಬೇಕೆ ಅಥವಾ ಎಮಿರೇಟ್ಸ್ ಹಣ ಪಾವತಿಸಬೇಕೆ ಎಂಬ ಸಂದಿಗ್ಧತೆಯಲ್ಲಿ ಸದ್ಯ ಪಾಕಿಸ್ತಾನ ಸರಕಾರ ಸಿಲುಕಿದೆ.
ಎಮಿರೇಟ್ಸ್ ಪಾಕಿಸ್ತಾನವನ್ನು ತಿರಸ್ಕರಿಸಿದ್ದು ಯಾಕೆ?
ಪಾಕಿಸ್ತಾನವು ಪ್ರಸ್ತುತ ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಯುದ್ಧವನ್ನು ನಿಲ್ಲಿಸಲು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಪಾಕಿಸ್ತಾನವು ಟರ್ಕಿ ಮತ್ತು ಈಜಿಪ್ಟ್ ನಂತಹ ದೇಶಗಳೊಂದಿಗೆ ಚರ್ಚಿಸುತ್ತಿದೆ; ಆದರೆ ಸಂಯುಕ್ತ ಅರಬ್ ಎಮಿರೇಟ್ಸ್ ನ ನಿಲುವು ಇದಕ್ಕೆ ವಿರುದ್ಧವಾಗಿದೆ. ಅಮೆರಿಕವು ಇರಾನ್ ನ ದಬ್ಬಾಳಿಕೆಯನ್ನು ಶಾಶ್ವತವಾಗಿ ಕೊನೆಗೊಳಿಸಬೇಕೆಂದು ಬಯಸುತ್ತಿದೆ. ಪಾಕಿಸ್ತಾನವು ಇರಾನ್ ಅನ್ನು ಉಳಿಸಲು ಪ್ರಯತ್ನಿಸುತ್ತಿರುವುದರಿಂದ, ಎಮಿರೇಟ್ಸ್ ಪಾಕಿಸ್ತಾನಕ್ಕೆ ಆರ್ಥಿಕ ದಿಗ್ಬಂಧನ ಹಾಕಲು ಪ್ರಾರಂಭಿಸಿದೆ. ಇದರಿಂದಾಗಿ ಪಾಕಿಸ್ತಾನದ ಸರಕಾರಿ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬೀಳುವ ಭೀತಿಯಲ್ಲಿದೆ.
ಸಂಪಾದಕೀಯ ನಿಲುವುಭಾರತ, ಅಫ್ಘಾನಿಸ್ತಾನ, ಬಲೂಚಿಸ್ತಾನಗಳ ವಿರುದ್ಧ ಜಿಹಾದ್ ಮಾಡಿದ ಫಲವಾಗಿಯೇ ಪಾಕಿಸ್ತಾನ ಇಂದು ಅಧಃಪತನದತ್ತ ಸಾಗುತ್ತಿದೆ. ಕರ್ಮದ ಫಲವನ್ನು ತಿನ್ನಲೇಬೇಕು ಎನ್ನುವುದಕ್ಕೆ ಇದೇ ಸಾಕ್ಷಿ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation