ನಮಾಜ್ ನೆಪವೊಡ್ಡಿ ಮನೆಯಲ್ಲಿ ಜನಸಂದಣಿ ಮಾಡುವುದು ಅಯೋಗ್ಯ! – ಅಲಹಾಬಾದ್ ಉಚ್ಚ ನ್ಯಾಯಾಲಯ

  • ಬರೇಲಿ: ಸಾಮೂಹಿಕ ನಮಾಜ್ ಪಠಣ ಪ್ರಕರಣ; ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪು

  • ಜಿಲ್ಲಾಧಿಕಾರಿ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಆದೇಶ!

ಪ್ರಯಾಗರಾಜ್ (ಉತ್ತರ ಪ್ರದೇಶ) – ಖಾಸಗಿ ಆಸ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಸೇರಿಸಿ ಸಾಮೂಹಿಕ ನಮಾಜ್ ಪಠಣ ಮಾಡುವುದು ಸರಿಯಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಬರೇಲಿಯ ಸಾಮೂಹಿಕ ನಮಾಜ್ ಪಠಣ ಪ್ರಕರಣದಲ್ಲಿ ತೀರ್ಪು ನೀಡಿದೆ. ಖಾಸಗಿ ಆಸ್ತಿಯಲ್ಲಿ ಇಂತಹ ಸಾಮೂಹಿಕ ನಮಾಜ್ ಮಾಡುವ ಪದ್ಧತಿಯ ಬಗ್ಗೆ ನ್ಯಾಯಾಲಯವು ಆಕ್ಷೇಪ ವ್ಯಕ್ತಪಡಿಸಿದ್ದು, ಅದನ್ನು ತಡೆಯಲು ನಿರ್ದೇಶನ ನೀಡಿದೆ. ಅಲ್ಲದೆ, ಶಾಂತಿ ಭಂಗವಾಗುವ ಸಾಧ್ಯತೆವಿದ್ದರೆ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಸ್ವಾತಂತ್ರ್ಯ ನೀಡಿದೆ.

೧. ನ್ಯಾಯಾಲಯವು ವೈಯಕ್ತಿಕ ಸುರಕ್ಷತೆ ಮತ್ತು ಖಾಸಗಿ ಆಸ್ತಿಯ ನೆಪದಲ್ಲಿ ಸಾರ್ವಜನಿಕ ಸುವ್ಯವಸ್ಥೆ ಹಾಗೂ ಲೋಕಶಾಂತಿಯನ್ನು ಅಪಾಯಕ್ಕೆ ಸಿಲುಕಿಸಲು ಸಾಧ್ಯವಿಲ್ಲ ಎಂದು ಸೂಚಿಸಿದೆ.

೨. ಬರೇಲಿಯ ನಿವಾಸಿ ತಾರಿಕ್ ಖಾನ್ ಎಂಬುವವರು ರಮಜಾನ್ ವೇಳೆ ತಮ್ಮ ಖಾಸಗಿ ಕಟ್ಟಡದಲ್ಲಿ ನಮಾಜ್ ಪಠಣ ಮಾಡುವುದಕ್ಕೆ ನಿಷೇಧ ಹೇರಿದ ವಿರುದ್ಧ ಮತ್ತು ಶಾಂತಿ ಭಂಗ ಪ್ರಕರಣದಲ್ಲಿ ಕೈಗೊಂಡ ಕ್ರಮದ ವಿರುದ್ಧ ಅರ್ಜಿ ಸಲ್ಲಿಸಿದ್ದರು.

೩. ರಾಜ್ಯ ಸರಕಾರದ ಪರವಾಗಿ ಹೆಚ್ಚುವರಿ ಹಿರಿಯ ವಕೀಲರಾದ ಅನೂಪ ತ್ರಿವೇದಿ ಅವರು ನ್ಯಾಯಾಲಯಕ್ಕೆ ತಿಳಿಸುತ್ತಾ, ಅರ್ಜಿದಾರರು ಸುರಕ್ಷತೆಯ ಕಾರಣಗಳನ್ನು ಮುಂದಿಟ್ಟುಕೊಂಡು ನಿಯಮಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಲ್ಲಿಸಲಾದ ಪ್ರಮಾಣಪತ್ರ ಮತ್ತು ಪುರಾವೆಗಳ ಪ್ರಕಾರ, ಅರ್ಜಿದಾರರ ಖಾಸಗಿ ಕಟ್ಟಡದಲ್ಲಿ ಪ್ರತಿದಿನ ೫೦ ರಿಂದ ೬೦ ಜನರು ನಮಾಜ್ ಗಾಗಿ ಜಮಾಯಿಸುತ್ತಿದ್ದರು, ಇದರಿಂದ ಆ ಪ್ರದೇಶದ ಧಾರ್ಮಿಕ ಸೌಹಾರ್ದತೆ ಮತ್ತು ಸುರಕ್ಷತೆಗೆ ಧಕ್ಕೆ ಉಂಟಾಗುತ್ತಿತ್ತು ಎಂದು ಹೇಳಿದರು.

೪. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಆಡಳಿತದ ಪ್ರಮುಖ ಕರ್ತವ್ಯವಾಗಿದ್ದು, ಸಾರ್ವಜನಿಕ ಶಾಂತಿಗೆ ಅಡ್ಡಿಪಡಿಸುವ ಇಂತಹ ಪದ್ಧತಿಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

೫. ನಮಾಜ್ ಹೆಸರಿನಲ್ಲಿ ಪುನಃ ಜನಸಂದಣಿ ಸೇರಿಸಿ ಪರಿಸರದ ಶಾಂತಿಗೆ ಭಂಗ ತಂದರೆ, ಜಿಲ್ಲಾಡಳಿತ ಮತ್ತು ಪೊಲೀಸರು ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲು ಸಂಪೂರ್ಣ ಮುಕ್ತರಾಗಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.