
ಇಸ್ಲಾಮಾಬಾದ್ – ಪಾಕಿಸ್ತಾನವು ಆರ್ಥಿಕ ಮುಗ್ಗಟ್ಟಿನ ಎಂತಹ ಹಂತಕ್ಕೆ ತಲುಪಿದೆಯೆಂದರೆ, ಅಲ್ಲಿನ ಸರಕಾರಕ್ಕೆ ನಾಗರಿಕರ ಆದಾಯವಷ್ಟೇ ಅಲ್ಲದೆ, ಎಮ್ಮೆಯ ಸಗಣಿಯಲ್ಲೂ ಕಂದಾಯದ ಮೂಲ ಕಾಣಲಾರಂಭಿಸಿದೆ. ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾದ ಪಂಜಾಬ್‌ನಲ್ಲಿ ಮರಿಯಮ್ ನವಾಜ್ ನೇತೃತ್ವದ ಸರಕಾರ ವು ‘ಸುಥರಾ ಪಂಜಾಬ್’ ಹೆಸರಿನಲ್ಲಿ ವಸೂಲಾತಿ ಅಭಿಯಾನವನ್ನು ಆರಂಭಿಸಿದ್ದು, ಇದರಲ್ಲಿ ಎಮ್ಮೆಯ ಸಗಣಿಯ ಮೇಲೆ ತೆರಿಗೆ ವಿಧಿಸುವುದಾಗಿ ಘೋಷಿಸಿದೆ.
೧. ಪಂಜಾಬ್ ಸರಕಾರದ ಹೊಸ ಆದೇಶದಂತೆ, ಪ್ರಾಂತ್ಯದ ೧೬೮ ಜಾನುವಾರು ವಸಾಹತುಗಳಲ್ಲಿ ಸಾಕಲಾಗುವ ಪ್ರತಿಯೊಂದು ಎಮ್ಮೆಯ ಸಗಣಿಯ ಮೇಲೆ ಪ್ರತಿದಿನ ೩೦ ರೂಪಾಯಿ ಶುಲ್ಕ ವಿಧಿಸಲಾಗುವುದು.
೨. ಈ ಸಗಣಿಯನ್ನು ಸಂಗ್ರಹಿಸಿ ಅದರಿಂದ ಜೈವಿಕ ಅನಿಲವನ್ನು ತಯಾರಿಸಲಾಗುವುದು ಮತ್ತು ನಗರಗಳ ಸ್ವಚ್ಛತಾ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗುವುದು ಎಂದು ಸರಕಾರವು ಪ್ರತಿಪಾದಿಸಿದೆ; ಆದರೆ ನಾಗರಿಕರು ಇದನ್ನು ಪರಿಸರ ಪೂರಕ ಉಪಕ್ರಮವಾಗಿ ನೋಡದೆ, ಆರ್ಥಿಕ ಮುಗ್ಗಟ್ಟಿನಿಂದಾಗಿ ಹೇರಲಾದ ತೆರಿಗೆ ಎಂದು ಪರಿಗಣಿಸುತ್ತಿದ್ದಾರೆ.
೩. ಪಾಕಿಸ್ತಾನದ ಹಾಲು ಉತ್ಪಾದಕರು ಮತ್ತು ಸಣ್ಣ ರೈತರು ಈಗಾಗಲೇ ಹಣದುಬ್ಬರ, ಮೇವಿನ ಹೆಚ್ಚುತ್ತಿರುವ ಬೆಲೆ ಮತ್ತು ವಿದ್ಯುತ್ ಅಭಾವದಿಂದ ತೊಂದರೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ತೆರಿಗೆಯು ಅವರ ಸಂಕಷ್ಟಗಳನ್ನು ಮತ್ತಷ್ಟು ಹೆಚ್ಚಿಸಲಿದೆ.
೪. ವಿರೋಧ ಪಕ್ಷದವರು ಈ ತೆರಿಗೆಯನ್ನು ನಾಚಿಕೆಗೇಡಿನ ನಿರ್ಧಾರ ಎಂದು ಹೇಳಿದ್ದಾರೆ. ಪಂಜಾಬ್ ಪ್ರಾಂತ್ಯದ ಬಳಿ ಕಂದಾಯ ಸಂಗ್ರಹಿಸಲು ಯಾವುದೇ ಗಟ್ಟಿ ಮೂಲಗಳು ಉಳಿದಿಲ್ಲ ಎಂಬುದು ಇದರಿಂದ ತಿಳಿಯುತ್ತದೆ ಎಂದು ಅವರು ಟೀಕಿಸಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation