ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್. ಮುರುಗನ್ ಅವರಿಂದ ಲೋಕಸಭೆಯಲ್ಲಿ ಮಾಹಿತಿ
(ಯು.ಆರ್.ಎಲ್. – ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್. ಅಂದರೆ ಜಾಲತಾಣಗಳು, ಚಿತ್ರಗಳು ಮತ್ತು ಫೈಲ್‌ಗಳ ಮೂಲ ಸ್ರೋತದ ಮಾಹಿತಿ ನೀಡುವ ಇಂಟರ್ನೆಟ್ ವಿಳಾಸ)

ನವ ದೆಹಲಿ – ಭಾರತೀಯ ಸೈನ್ಯವು ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧ ‘ಆಪರೇಷನ್ ಸಿಂದೂರ್’ ನಡೆಸುತ್ತಿದ್ದ ಸಮಯದಲ್ಲಿ, ವಿವಿಧ ರೀತಿಯ ದಾರಿ ತಪ್ಪಿಸುವ ಸುದ್ದಿಗಳನ್ನು ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಹರಡಲಾಗಿತ್ತು. ಇದರ ಕುರಿತು ಕೇಂದ್ರ ಸರಕಾರವು ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್. ಮುರುಗನ್ ಅವರು ಏಪ್ರಿಲ್ ೧ ರಂದು ಲೋಕಸಭೆಯಲ್ಲಿ ಮಾಹಿತಿ ನೀಡಿದರು. ಈ ಅವಧಿಯಲ್ಲಿ ಸುಳ್ಳು ಸುದ್ದಿಗಳನ್ನು ಹರಡಿದ ಆರೋಪದ ಮೇಲೆ ಡಿಜಿಟಲ್ ಮಾಧ್ಯಮಗಳ ೧ ಸಾವಿರದ ೪೦೦ಕ್ಕೂ ಹೆಚ್ಚು ‘ಯು.ಆರ್.ಎಲ್.’ಗಳನ್ನು ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದರು. ರಾಜ್ಯ ಸಚಿವರು ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ, ಪತ್ರ ಮಾಹಿತಿ ಕಾರ್ಯಾಲಯದ (ಪಿ.ಐ.ಬಿ.) ಅಡಿಯಲ್ಲಿ ಕಾರ್ಯನಿರ್ವಹಿಸುವ ‘ಫ್ಯಾಕ್ಟ್ ಚೆಕ್ ಯೂನಿಟ್’ (ಮಾಹಿತಿ ಪರಿಶೀಲನಾ ಘಟಕವು) ಇದುವರೆಗೆ ಒಟ್ಟು ೨ ಸಾವಿರದ ೯೧೩ ‘ಫ್ಯಾಕ್ಟ್-ಚೆಕ್’ಗಳನ್ನು (ಪರಿಶೀಲಿಸಿದ ಮಾಹಿತಿ) ಪ್ರಕಟಿಸಿದೆ ಎಂದು ಉಲ್ಲೇಖಿಸಿದ್ದಾರೆ.
ರಾಜ್ಯ ಸಚಿವ ಮುರುಗನ್ ಅವರು ಮಾತನಾಡಿ, ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಡಿಜಿಟಲ್ ಮಾಧ್ಯಮಗಳ ‘ಯು.ಆರ್.ಎಲ್.’ಗಳನ್ನು ನಿರ್ಬಂಧಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಿರ್ದೇಶನ ನೀಡಿತ್ತು ಎಂದು ಹೇಳಿದರು. ಕಳೆದ ೫ ವರ್ಷಗಳಲ್ಲಿ ಕಾರ್ಯಕ್ರಮ ಸಂಹಿತೆ ಮತ್ತು ಜಾಹೀರಾತು ಸಂಹಿತೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಖಾಸಗಿ ಉಪಗ್ರಹ ದೂರದರ್ಶನ ವಾಹಿನಿಗಳ ಮೇಲೆ ‘ಅನುಮತಿ ರದ್ದುಪಡಿಸುವುದು’ ಮತ್ತು ‘ಪ್ರಸಾರ ಸ್ಥಗಿತಗೊಳಿಸಲು ಆದೇಶಿಸುವುದು’ ಸೇರಿದಂತೆ ಸುಮಾರು ೧೪೪ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ