
ಕಾಠ್ಮಂಡು (ನೇಪಾಳ) – ನೇಪಾಳದ ದೂರಸಂಪರ್ಕ ಪ್ರಾಧಿಕಾರವು ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಅನ್ನು ನಿಷೇಧಿಸಿದೆ. ಸಂಚಾರ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ೨೮೧ ಬೆಟ್ಟಿಂಗ್ ‘ಆಪ್‌ಗಳು’ ಮತ್ತು ವೆಬ್ ಸೈಟ್‌ಗಳನ್ನು ನಿಷೇಧಿಸಲು ನಿರ್ಧರಿಸಲಾಯಿತು ಮತ್ತು ಅದನ್ನು ಜಾರಿಗೆ ತರಲಾಯಿತು. ನೇಪಾಳದ ಆರ್ಥಿಕತೆಯನ್ನು ರಕ್ಷಿಸಲು ಮತ್ತು ಯುವಕರನ್ನು ಜೂಜಿನ ಬಲೆಯಿಂದ ಕಾಪಾಡುವುದಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ನೇಪಾಳದ ಗಡಿ ಪ್ರದೇಶಗಳಲ್ಲಿ ಜೂಜು ಮತ್ತು ಡಿಜಿಟಲ್ ಮಾಧ್ಯಮಗಳ ಮೂಲಕ ಅಕ್ರಮ ಬೆಟ್ಟಿಂಗ್ ನಡೆಸುತ್ತಿದ್ದ ತಂಡಗಳ ಮೇಲೆ ನೇಪಾಳ ಸರಕಾರದ ಕಠಿಣ ಕ್ರಮವು ಪರಿಣಾಮ ಬೀರಿದೆ. ಆನ್‌ಲೈನ್ ಬೆಟ್ಟಿಂಗ್ ನ ಜಾಲವು ಅನೇಕ ದೇಶಗಳೊಂದಿಗೆ ಸಂಪರ್ಕ ಹೊಂದಿದ್ದು, ವಿವಿಧ ಮಾಧ್ಯಮಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಮೂಲಗಳ ಮಾಹಿತಿಯ ಪ್ರಕಾರ, ಭಾರತ ಮತ್ತು ನೇಪಾಳ ದೇಶಗಳ ನಡುವಿನ ಮುಕ್ತ ಗಡಿಯಿಂದಾಗಿ ಗಡಿ ಪ್ರದೇಶಗಳಲ್ಲಿ ದೀರ್ಘಕಾಲದಿಂದ ಸಕ್ರಿಯವಾಗಿದ್ದ ಬೆಟ್ಟಿಂಗ್ ತಂಡಗಳು ‘ಆನ್‌ಲೈನ್’ ಮತ್ತು ‘ಆಫ್‌ಲೈನ್’ (ಪ್ರತ್ಯಕ್ಷ) ಎರಡೂ ಮಾಧ್ಯಮಗಳ ಮೂಲಕ ತಮ್ಮ ವ್ಯವಹಾರ ನಡೆಸುತ್ತಿದ್ದವು. ಮನೆ ಮನೆಗಳಲ್ಲಿ ಮತ್ತು ಹೊಲಗಳಲ್ಲಿ ಬೆಟ್ಟಿಂಗ್ ನಡೆಸಿ ಕೋಟ್ಯಂತರ ರೂಪಾಯಿಗಳ ವ್ಯವಹಾರ ಮಾಡಲಾಗುತ್ತಿತ್ತು. ಇದರಲ್ಲಿ ಹವಾಲಾ ನೆಟ್‌ವರ್ಕ್ ಮತ್ತು ‘ಡಿಜಿಟಲ್ ಪೇಮೆಂಟ್’ ವ್ಯವಸ್ಥೆಯನ್ನು ಸಹ ಬಳಸಲಾಗುತ್ತಿತ್ತು. ಎರಡೂ ದೇಶಗಳ ಭದ್ರತಾ ಸಂಸ್ಥೆಗಳ ನಡುವಿನ ಹೆಚ್ಚುತ್ತಿರುವ ಸಮನ್ವಯದಿಂದಾಗಿ ಈ ಜಾಲಗಳ ಬೇರುಗಳು ದುರ್ಬಲಗೊಳ್ಳುತ್ತಿವೆ. ಇದರಿಂದಾಗಿ ಬೆಟ್ಟಿಂಗ್ ದಂಧೆಕೋರರು ಈಗ ತಮ್ಮ ಸ್ಥಳಗಳನ್ನು ಬದಲಾಯಿಸುತ್ತಿದ್ದಾರೆ ಅಥವಾ ಅವರ ಚಟುವಟಿಕೆಗಳು ಸ್ಥಗಿತಗೊಂಡಿವೆ.
ನೇಪಾಳ ಸರಕಾರವು ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ ಸಹ, ‘ಬೆಟ್ಟಿಂಗ್ ದಂಧೆಕೋರರು ಹೊಸ ವಿಧಾನಗಳನ್ನು ಅಳವಡಿಸಿಕೊಂಡು ಮತ್ತೆ ಸಕ್ರಿಯರಾಗಲು ಪ್ರಯತ್ನಿಸಬಹುದು’, ಎಂಬ ಸಾಧ್ಯತೆಯನ್ನೂ ವ್ಯಕ್ತಪಡಿಸಲಾಗುತ್ತಿದೆ.
ಸಂಪಾದಕೀಯ ನಿಲುವುಭಾರತದಲ್ಲಿ ರಾಷ್ಟ್ರಮಟ್ಟದಲ್ಲಿ ಆನ್‌ಲೈನ್ ಬೆಟ್ಟಿಂಗ್ ವಿರುದ್ಧ ಯಾವುದೇ ಕಠಿಣ ಕಾನೂನಿಲ್ಲ. ಭಾರತವೇ ಈಗ ಈ ಕಡೆ ಗಮನಹರಿಸಿ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ! |
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !