ಚಂದ್ರನ ಸುತ್ತ ಪ್ರದಕ್ಷಿಣೆ ಹಾಕಿ ಮರಳಿ ಬರಲಿದೆ

ಫ್ಲೋರಿಡಾ (ಅಮೇರಿಕಾ) – ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ವು ಚಂದ್ರನ ಕಾರ್ಯಾಚರಣೆಗಾಗಿ ‘ಆರ್ಟೆಮಿಸ್-೨’ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿದೆ. ಇಲ್ಲಿನ ಕೆನಡಿ ಸ್ಪೇಸ್ ಸೆಂಟರ್‌ನಿಂದ ಉಡಾವಣೆಯಾದ ಈ ನೌಕೆಯಲ್ಲಿ ೪ ಗಗನಯಾತ್ರಿಗಳನ್ನು ಕಳುಹಿಸಲಾಗಿದೆ. ೫೦ ವರ್ಷಗಳ ಹಿಂದಿನ ‘ಅಪೊಲೊ’ ಕಾರ್ಯಾಚರಣೆಯ ನಂತರ ನಾಸಾ ಮೊದಲ ಬಾರಿಗೆ ಚಂದ್ರನ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ. ‘ಆರ್ಟೆಮಿಸ್-೨’ ಅಭಿಯಾನದ ಮೂಲಕ ೪ ಗಗನಯಾತ್ರಿಗಳು ಚಂದ್ರನ ಸುತ್ತ ಒಂದು ಪ್ರದಕ್ಷಿಣೆ ಹಾಕಿ ಸುಮಾರು ೧೦ ದಿನಗಳ ನಂತರ ಭೂಮಿಗೆ ಮರಳಲಿದ್ದಾರೆ.
ಅಮೇರಿಕಾದ ಗಗನಯಾತ್ರಿಗಳಾದ ರೀಡ್ ವೈಸ್‌ಮನ್, ವಿಕ್ಟರ್ ಗ್ಲೋವರ್ ಮತ್ತು ಕ್ರಿಸ್ಟಿನಾ ಕೋಚ್, ಹಾಗೆಯೇ ಕೆನಡಾದ ಜೆರೆಮಿ ಹ್ಯಾನ್ಸೆನ್ ಚಂದ್ರನ ಪ್ರದಕ್ಷಿಣೆ ಹಾಕಲಿದ್ದಾರೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುಮಾರು ಒಂದು ವರ್ಷ ಕಳೆದಿದ್ದ ೪೭ ವರ್ಷದ ಕೋಚ್ ಅವರು ಚಂದ್ರನ ಸಮೀಪಕ್ಕೆ ತಲುಪುವ ಮೊದಲ ಮಹಿಳಾ ಗಗನಯಾತ್ರಿ ಎನಿಸಿಕೊಳ್ಳಲಿದ್ದಾರೆ. ಗಗನಯಾತ್ರಿಗಳು ಚಂದ್ರನ ಸಮೀಪ ತಲುಪಲು ೩-೪ ದಿನಗಳ ಸಮಯ ಬೇಕಾಗಲಿದೆ.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman