
ನವದೆಹಲಿ – ಇರಾನ್ ಜೊತೆ ನಡೆಯುತ್ತಿರುವ ಯುದ್ಧವು ಮುಂದಿನ ೨-೩ ವಾರಗಳಲ್ಲಿ ಕೊನೆಗೊಳ್ಳಬಹುದು. ಒಂದು ಒಪ್ಪಂದದ ಮೂಲಕ ಈ ಯುದ್ಧವು ಮೊದಲೇ ಮುಗಿಯಬಹುದಿತ್ತು. ಇರಾನ್ ಅಣ್ವಸ್ತ್ರಗಳನ್ನು ಪಡೆಯದಂತೆ ತಡೆಯುವುದು ಅಮೆರಿಕದ ಗುರಿಯಾಗಿತ್ತು, ಅದು ಈಗ ಸಾಧ್ಯವಾಗಿದೆ. ಈ ಕಾರ್ಯಾಚರಣೆ ಈಗ ಅಂತಿಮ ಹಂತದಲ್ಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೈಟ್ ಹೌಸ್‌ನ ಓವಲ್ ಕಚೇರಿಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
ಅಮೆರಿಕದ ಮೇಲೆ ನಂಬಿಕೆ ಇಡಲು ಸಾಧ್ಯವಿಲ್ಲ! – ಇರಾನ್
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘಚಿ ಮಾತನಾಡಿ, “ಅಮೆರಿಕದೊಂದಿಗಿನ ನಮ್ಮ ಹಿಂದಿನ ಅನುಭವಗಳು ಕೆಟ್ಟದಾಗಿವೆ. ಆದ್ದರಿಂದ ಈಗ ಅಮೆರಿಕವನ್ನು ನಂಬಲು ಸಾಧ್ಯವಿಲ್ಲ. ೨೦೧೫ರ ಪರಮಾಣು ಒಪ್ಪಂದದಿಂದ ಅಮೆರಿಕ ಈಗಾಗಲೇ ಹಿಂದೆ ಸರಿದಿದೆ, ಆದ್ದರಿಂದ ಈಗ ಯಾವುದೇ ಹೊಸ ಚರ್ಚೆಯ ಮೇಲೆ ನಮಗೆ ನಂಬಿಕೆಯಿಲ್ಲ. ಮಿತ್ರ ರಾಷ್ಟ್ರಗಳ ಮೂಲಕ ಅಮೆರಿಕದೊಂದಿಗೆ ಸಂದೇಶಗಳ ವಿನಿಮಯ ನಡೆಯುತ್ತಿರುವುದು ನಿಜ; ಆದರೆ ಅದನ್ನು ಸಂವಾದ ಎಂದು ಕರೆಯಲು ಸಾಧ್ಯವಿಲ್ಲ” ಎಂದರು.
ಭೂಮಿಯ ಮೇಲಿನ ದಾಳಿಯ ಸಾಧ್ಯತೆ ಎದುರಿಸಲು ಸಂಪೂರ್ಣ ಸಿದ್ಧ! – ಇರಾನ್

ಇರಾನ್ ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘಚಿ ಅವರು ಅಮೆರಿಕಕ್ಕೆ ಎಚ್ಚರಿಕೆ ನೀಡುತ್ತಾ, “ಇರಾನ್ ಯಾವುದೇ ಭೂಸೇನಾ ದಾಳಿಯನ್ನು ಎದುರಿಸಲು ಸಂಪೂರ್ಣ ಸಿದ್ಧವಾಗಿದೆ. ನಾವು ಅವರ ಹಾದಿ ಕಾಯುತ್ತಿದ್ದೇವೆ. ಇರಾನ್ ಅಮೆರಿಕದ ದಾಳಿಗೆ ಹೆದರುವುದಿಲ್ಲ ಮತ್ತು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದೆ. ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದು ಇರಾನ್‌ಗೆ ಚೆನ್ನಾಗಿ ತಿಳಿದಿದೆ. ಅಮೆರಿಕಕ್ಕೆ ಮಾತ್ರ ಇಂತಹ ತಪ್ಪು ದುಬಾರಿಯಾಗಬಹುದು” ಎಂದು ಎಚ್ಚರಿಸಿದರು.
ಅಮೆರಿಕ ಮತ್ತು ಇಸ್ರೇಲ್‌ನಿಂದ ಔಷಧ ತಯಾರಿಕಾ ಘಟಕದ ಮೇಲೆ ದಾಳಿ ! – ಇರಾನ್ ಆರೋಪ
ತೆಹ್ರಾನ್‌ನಲ್ಲಿರುವ ‘ತೋಫಿಗ್ ದಾರು’ ಔಷಧ ತಯಾರಿಕಾ ಘಟಕದ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿವೆ ಎಂದು ಇರಾನ್ ಆರೋಪಿಸಿದೆ. ಇದರಿಂದ ಅಲ್ಲಿನ ವೈದ್ಯಕೀಯ ಪೂರೈಕೆ ಸರಪಳಿಗೆ ತೀವ್ರ ಹಾನಿಯಾಗಿದೆ. ಇದು ಯುದ್ಧಾಪರಾಧವಾಗಿದೆ ಎಂದು ಇರಾನ್ ಹೇಳಿದೆ.
ಕತಾರ್ ಬಳಿ ತೈಲ ನೌಕೆಯ ಮೇಲೆ ಇರಾನ್ ದಾಳಿ
ಇರಾನ್‌ನಿಂದ ಉಡಾಯಿಸಲಾದ ಕ್ರೂಸ್ ಕ್ಷಿಪಣಿಗಳು ಕತಾರ್ ಕರಾವಳಿಯ ಸಮೀಪವಿದ್ದ ತೈಲ ನೌಕೆಯ ಮೇಲೆ ದಾಳಿ ನಡೆಸಿವೆ. ೩ ಕ್ಷಿಪಣಿಗಳ ಪೈಕಿ ೨ ಕ್ಷಿಪಣಿಗಳನ್ನು ತಡೆಯಲಾಗಿದ್ದು, ಮೂರನೇ ಕ್ಷಿಪಣಿ ತೈಲ ನೌಕೆಗೆ ಅಪ್ಪಳಿಸಿದೆ. ದಾಳಿಯ ನಂತರ ನೌಕೆಯಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
ಹೋರ್ಮುಜ್ ಜಲಸಂಧಿಯನ್ನು ತೆರೆಯಲು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮಿಲಿಟರಿ ಕಾರ್ಯಾಚರಣೆಗೆ ಸಿದ್ಧ
ಯುಎಇ, ಅಮೆರಿಕ ಮತ್ತು ಇತರ ರಾಷ್ಟ್ರಗಳ ಜೊತೆ ಸೇರಿ ಹೋರ್ಮುಜ್ ಜಲಸಂಧಿಯನ್ನು ತೆರೆಯುವ ಆಯ್ಕೆಯನ್ನು ಪರಿಗಣಿಸುತ್ತಿದೆ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಿರ್ಣಯ ಮಂಡಿಸಲು ಸಿದ್ಧತೆ ನಡೆಸುತ್ತಿದೆ. ಜಲ ಮಾರ್ಗವನ್ನು ಮುಕ್ತಗೊಳಿಸಲು ಅಂತರಾಷ್ಟ್ರೀಯ ಮಿಲಿಟರಿ ಮೈತ್ರಿಕೂಟವನ್ನು ಸ್ಥಾಪಿಸಲು ಎಮಿರೇಟ್ಸ್ ಅಧಿಕಾರಿಗಳು ಕರೆ ನೀಡಿದ್ದಾರೆ.
ಅಮೆರಿಕ ಕುವೈತ್‌ನಿಂದ ಇರಾನ್ ಮೇಲೆ ದಾಳಿ ಮಾಡಬಾರದು ! – ಇರಾಕಿ ಮಿಲಿಷಿಯಾ
ಇರಾನ್ ಬೆಂಬಲಿತ ಇರಾಕಿ ಮಿಲಿಷಿಯಾ ‘ಕತೈಬ್ ಸೈಯದ್ ಅಲ್-ಶುಹಾದಾ’, ಕುವೈತ್ ಭೂಮಿಯನ್ನು ಬಳಸಿಕೊಂಡು ಇರಾನ್ ಮೇಲೆ ದಾಳಿ ಮಾಡದಂತೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ. ಇದರಿಂದ ಈ ಪ್ರದೇಶದಲ್ಲಿ ಸಂಘರ್ಷ ಮತ್ತಷ್ಟು ಉಲ್ಬಣಿಸಬಹುದು ಎಂದು ಅದು ಹೇಳಿದೆ.
ಇರಾನ್ ಪ್ರಜೆಗಳ ಪ್ರವೇಶಕ್ಕೆ ಯುಎಇ ನಿಷೇಧ
ಯುನೈಟೆಡ್ ಅರಬ್ ಎಮಿರೇಟ್ಸ್ ಇರಾನ್ ಪ್ರಜೆಗಳು ತಮ್ಮ ದೇಶಕ್ಕೆ ಬರದಂತೆ ನಿಷೇಧ ಹೇರಿದೆ. ಇದರೊಂದಿಗೆ ಕೆಲವು ಇರಾನಿ ಸಂಸ್ಥೆಗಳ ಮೇಲೆಯೂ ನಿಷೇಧ ಹೇರಲಾಗಿದೆ.
ಅಮೆರಿಕದ ಪತ್ರಕರ್ತೆ ಶೆಲ್ಲಿ ಕಿಟಲ್ಸನ್ ಇರಾಕ್‌ನಲ್ಲಿ ಅಪಹರಣ

ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಅಮೆರಿಕದ ಮಹಿಳಾ ಪತ್ರಕರ್ತೆ ಶೆಲ್ಲಿ ಕಿಟಲ್ಸನ್ ಅವರನ್ನು ಅಪಹರಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಈ ಘಟನೆ ನಡೆದ ಪ್ರದೇಶದಲ್ಲಿ ಮೊದಲೇ ಭದ್ರತಾ ಬೆದರಿಕೆಯ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.
ಯುದ್ಧ ನಿಲ್ಲಿಸಲು ಚೀನಾ ಮತ್ತು ಪಾಕಿಸ್ತಾನದ ೫ ಅಂಶಗಳ ಯೋಜನೆ
ಇನ್ನೊಂದೆಡೆ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಬೀಜಿಂಗ್‌ನಲ್ಲಿ ನಡೆದ ಸಭೆಯ ನಂತರ ೫ ಅಂಶಗಳ ಯೋಜನೆಯನ್ನು ಬಿಡುಗಡೆ ಮಾಡಿದ್ದಾರೆ. ಇದರ ಉದ್ದೇಶ ಇರಾನ್‌ನಲ್ಲಿನ ಯುದ್ಧವನ್ನು ನಿಲ್ಲಿಸುವುದಾಗಿದೆ.
ಅ. ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕು.
ಆ. ಆದಷ್ಟು ಬೇಗ ಶಾಂತಿ ಮಾತುಕತೆ ಆರಂಭಿಸಬೇಕು.
ಇ. ನಾಗರಿಕ ಪ್ರದೇಶಗಳ ಮೇಲಿನ ದಾಳಿಗಳನ್ನು ನಿಲ್ಲಿಸಬೇಕು.
ಈ. ಹೋರ್ಮುಜ್ ಜಲಸಂಧಿಯಲ್ಲಿನ ಸಮುದ್ರ ಮಾರ್ಗಗಳನ್ನು ಸುರಕ್ಷಿತವಾಗಿಡಬೇಕು.
ಉ. ವಿಶ್ವಸಂಸ್ಥೆಯ ನಿಯಮಗಳ ಪ್ರಕಾರ ಶಾಂತಿ ಒಪ್ಪಂದ ನಡೆಯಬೇಕು.
ಯುದ್ಧದಿಂದ ಕೊಲ್ಲಿ ರಾಷ್ಟ್ರಗಳಿಗೆ ೧೮ ಲಕ್ಷ ಕೋಟಿ ರೂಪಾಯಿ ಹಾನಿ
‘ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಂ’ (UNDP) ಪ್ರಕಾರ, ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧವು ಇಡೀ ಪ್ರದೇಶದ ಆರ್ಥಿಕತೆಗೆ ದೊಡ್ಡ ಹಾನಿ ಉಂಟುಮಾಡಬಹುದು. ಈ ಸಂಘರ್ಷ ಈಗ ಕೇವಲ ಕೆಲವು ದೇಶಗಳಿಗೆ ಸೀಮಿತವಾಗಿಲ್ಲ, ಇಡೀ ಪ್ರದೇಶಕ್ಕೆ ದೊಡ್ಡ ಸಂಕಟವಾಗಿ ಪರಿಣಮಿಸಿದೆ.
ಅ. ಕೊಲ್ಲಿ ಪ್ರದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನವು (GDP) ಶೇಕಡಾ ೩.೭ ರಿಂದ ೬ ರಷ್ಟು ಕುಸಿಯಬಹುದು.
ಆ. ಇದರಿಂದ ೧೮ ಲಕ್ಷ ಕೋಟಿ ರೂಪಾಯಿಗಳಷ್ಟು ಹಾನಿಯಾಗಬಹುದು.
ಇ. ಹೋರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರವು ಶೇಕಡಾ ೭೦% ಕ್ಕಿಂತ ಹೆಚ್ಚು ಕುಸಿದಿದೆ.
ಈ. ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ ಸುಮಾರು ೧೨೦ ಡಾಲರ್ ತಲುಪಿದೆ.
ಉ. ೧೬ ರಿಂದ ೩೬ ಲಕ್ಷ ಉದ್ಯೋಗಗಳು ಅಪಾಯದಲ್ಲಿವೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!