ಇಂದಿನಿಂದ ಇಂಟರ್ನೆಟ್ ಸಂಪರ್ಕ ಹೊಂದಿರುವ ಚೀನೀ ಸಿಸಿಟಿವಿ ಕ್ಯಾಮೆರಾಗಳ ಮಾರಾಟದ ಮೇಲೆ ನಿಷೇಧ

ಭದ್ರತೆಯ ದೃಷ್ಟಿಯಿಂದ ಕೇಂದ್ರ ಸರಕಾರದ ನಿರ್ಧಾರ

ನವದೆಹಲಿ – ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಕೇಂದ್ರ ಸರಕಾರವು ಏಪ್ರಿಲ್ ೧ ರಿಂದ ಚೀನಾ ನಿರ್ಮಿತ ಇಂಟರ್ನೆಟ್‌ಗೆ ಸಂಪರ್ಕ ಹೊಂದಿರುವ ಸಿಸಿಟಿವಿ ಕ್ಯಾಮೆರಾಗಳನ್ನು ನಿಷೇಧಿಸಲು ನಿರ್ಧರಿಸಿದೆ. ಈಗ ಸಿಸಿಟಿವಿ ಅಥವಾ ಕಣ್ಗಾವಲು ಉಪಕರಣಗಳನ್ನು ಸರಕಾರಿ ಪ್ರಮಾಣಪತ್ರವಿಲ್ಲದೆ ಭಾರತದಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ. ಇದರಿಂದ ಈಗ ‘ಹಿಕವಿಷನ್’ ಮತ್ತು ‘ದಾಹುವಾ’ ದಂತಹ ಚೀನೀ ಕಂಪನಿಗಳ ಸಿಸಿಟಿವಿ ಮಾರಾಟದ ಮೇಲೆ ನಿಷೇಧ ಹೇರಲಾಗುವುದು.

ಇದರೊಂದಿಗೆ ಕೇಂದ್ರ ಸರಕಾರದ ಹೊಸ ನಿಯಮಗಳ ಪ್ರಕಾರ, ಕಂಪನಿಗಳು ಸಿಸಿಟಿವಿಯಲ್ಲಿನ ‘ಸಿಸ್ಟಮ್-ಆನ್-ಚಿಪ್’ (ಎಸ್‌ಒಸಿ) ನಂತಹ ಪ್ರಮುಖ ಘಟಕಗಳ ಮಾಹಿತಿಯನ್ನು ನೀಡಬೇಕಾಗುತ್ತದೆ ಮತ್ತು ಉತ್ಪನ್ನಗಳನ್ನು ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷಿಸಿಕೊಳ್ಳಬೇಕಾಗುತ್ತದೆ.