
ಭೀಮಾವರಂ (ಆಂಧ್ರಪ್ರದೇಶ) – ಶ್ರೀರಾಮನವಮಿಯ ನಿಮಿತ್ತ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಆಕಿವೀಡು ಪೆಡಪೇಟೆಯಲ್ಲಿರುವ ಅತಿ ಪ್ರಾಚೀನ ಶ್ರೀರಾಮಮಂದಿರವನ್ನು ಸ್ವಚ್ಛಗೊಳಿಸಲು ತೆರಳಿದ್ದ ಶಾಸಕ ರಘುರಾಮ ರಾಜು ಮತ್ತು ಅವರೊಂದಿಗೆ ತೆರಳಿದ್ದ ಕೆಲವು ಹಿಂದೂ ಭಕ್ತರ ಮೇಲೆ ಸುತ್ತಮುತ್ತಲಿನ ಕ್ರೈಸ್ತರು ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಅನೇಕ ಹಿಂದೂ ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭೀಮಾವರಂ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಅವರಿಗೆ ಚಿಕಿತ್ಸೆ ನಡೆಯುತ್ತಿದೆ. ದಾಳಿ ಮಾಡಿದವರ ಪೈಕಿ ೩೮ ಜನರಿಗೆ ವಿಚಾರಣೆಗಾಗಿ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. (ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯ ಅಪಾಯದಲ್ಲಿದೆ ಎಂದು ಬೊಬ್ಬೆ ಹೊಡೆಯುವ ಕಮ್ಯುನಿಸ್ಟರು, ಬುದ್ಧಿಜೀವಿಗಳು ಮತ್ತು ಜಾತ್ಯತೀತವಾದಿಗಳು ಇಂತಹ ಘಟನೆಗಳ ನಂತರ ತುಟಿ ಬಿಚ್ಚುವುದಿಲ್ಲ ಎಂಬುದನ್ನು ಗಮನಿಸಿ! – ಸಂಪಾದಕರು)
ಗಾಯಗೊಂಡ ಭಕ್ತರ ಪೈಕಿ ಒಬ್ಬರ ತಲೆಗೆ ಮೊಳೆ ಹೊಕ್ಕಿದೆ, ಇನ್ನೊಬ್ಬ ವ್ಯಕ್ತಿಯ ಮೇಲೆ ೧೨ ಬಾರಿ ಚಾಕುವಿನಿಂದ ಇರಿಯಲಾಗಿದೆ ಎಂದು ಶಾಸಕ ರಘುರಾಮ ರಾಜು ತಿಳಿಸಿದ್ದಾರೆ. ಇಂತಹ ಅರಾಜಕ ಘಟನೆಗಳಿಗೆ ಸಕಾಲದಲ್ಲಿ ಕಡಿವಾಣ ಹಾಕುವುದು ಅವಶ್ಯಕವಾಗಿದೆ.
ಹಿಂದೂ ದೇವಾಲಯದಲ್ಲಿ ಹಿಂದೂಗಳ ಮೇಲೆ ದಾಳಿ ಮಾಡಿದ ಕ್ರೈಸ್ತರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದರು. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಸಾಮಾನ್ಯವಾಗಿ ಶಾಂತಿಯ ಮಾತುಗಳನ್ನಾಡುವ ಕ್ರೈಸ್ತರು ವಾಸ್ತವದಲ್ಲಿ ಎಷ್ಟು ಕ್ರೂರವಾಗಿರುತ್ತಾರೆ ಎಂಬುದು ಇದರಿಂದ ತಿಳಿಯುತ್ತದೆ. ಇವರ ಬಗ್ಗೆ ಕಾಂಗ್ರೆಸ್ಸಿಗರು, ಪ್ರಗತಿಪರರು ಮುಂತಾದವರು ಮೌನವಾಗಿರುವುದೇಕೆ? |
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ರಾಮರಾಜ್ಯದ ಆಧಾರಸ್ತಂಭ ಮಹರ್ಷಿ ವಸಿಷ್ಠರು !
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University