|

ಒಟಾವಾ (ಕೆನಡಾ) – ಕೆನಡಾದ ಖಲಿಸ್ತಾನಿ ಸಂಘಟನೆಗಳು ೨೦೨೬ರ ಏಪ್ರಿಲ್ ೫ ರಂದು ಬ್ರಾಂಪ್ಟನ್‌ನ ತ್ರಿವೇಣಿ ದೇಗುಲ ಮತ್ತು ಸರ್ರೆಯ ಶ್ರೀ ಲಕ್ಷ್ಮಿ ನಾರಾಯಣ ಈ ಎರಡು ಬೃಹತ್ ದೇಗುಲಗಳ ಹೊರಗೆ ‘ಖಲಿಸ್ತಾನ್ ಜಿಂದಾಬಾದ್’ ಮೆರವಣಿಗೆ ಮತ್ತು ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿವೆ. ‘ಹಿಂದೂಗಳು ಪೂಜೆಗಾಗಿ ಈ ದೇಗುಲಗಳಿಗೆ ಬಂದಾಗ, ಅವರು ಘೋಷಣೆಗಳನ್ನು ಕೇಳಬೇಕಾಗುತ್ತದೆ ಮತ್ತು ನೂಕಾಟ-ತಳ್ಳಾಟ ನಡೆಯಬಹುದು’ ಎಂದು ಅವರು ಹೇಳಿದ್ದಾರೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿ ಪ್ರಕಟಣೆ ಹೊರಡಿಸಿರುವ ‘ಹಿಂದೂ ಕೆನಡಿಯನ್ ಫೌಂಡೇಶನ್’, “ನಮ್ಮ ದೇಗುಲಗಳು ಪೂಜೆಯ ಪವಿತ್ರ ಸ್ಥಳಗಳೇ ಹೊರತು ಪ್ರತಿಭಟನೆಯ ಮೈದಾನಗಳಲ್ಲ. ನಾವು ಬೆದರಿಕೆಗಳಿಗೆ ಮಣಿಯುವುದಿಲ್ಲ” ಎಂದು ಸ್ಪಷ್ಟಪಡಿಸಿದೆ. ಕೆನಡಾದಾದ್ಯಂತದ ಪೊಲೀಸ್ ಮತ್ತು ಭದ್ರತಾ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿರುವ ಫೌಂಡೇಶನ್, “ಈ ಭಯೋತ್ಪಾದಕರನ್ನು ತಡೆಯಿರಿ, ಇಲ್ಲದಿದ್ದರೆ ಕೆನಡಾದ ಪೊಲೀಸ್ ಮತ್ತು ಸರಕಾರದ ಮೇಲಿನ ಹಿಂದೂ ಸಮುದಾಯದ ನಂಬಿಕೆ ಹೋಗಲಿದೆ” ಎಂದು ತಿಳಿಸಿದೆ. ಖಲಿಸ್ತಾನ್ ಬೆಂಬಲಿಗರು ಈ ಹಿಂದೆ ಕೂಡ ಕೆನಡಾದಲ್ಲಿ ದೇಗುಲಗಳ ಹೊರಗೆ ವಾತಾವರಣವನ್ನು ಹಾಳುಮಾಡಲು ಪ್ರಯತ್ನಿಸಿದ್ದರು.
‘ಹಿಂದೂ ಕೆನಡಿಯನ್ ಫೌಂಡೇಶನ್’ ಹೇಳಿಕೆಯ ಪ್ರಕಾರ,
೧. ಇದು ಶಾಂತಿಯುತ ಪ್ರತಿಭಟನೆಯಲ್ಲ, ಇದು ಉದ್ದೇಶಪೂರ್ವಕವಾಗಿ ವಾತಾವರಣವನ್ನು ಪ್ರಚೋದಿಸುವ ಸಂಚು. ದೇಗುಲವನ್ನು ರಾಜಕೀಯ ವೇದಿಕೆಯನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ. ನವೆಂಬರ್ ೩, ೨೦೨೪ ರಂದು ಬ್ರಾಂಪ್ಟನ್‌ನ ಹಿಂದೂ ಸಭಾ ದೇಗುಲದ ಮೇಲೆ ಖಲಿಸ್ತಾನ್ ಬೆಂಬಲಿಗರು ಹಗಲ ಹೊತ್ತಿನಲ್ಲಿ ದಾಳಿ ನಡೆಸಿದ್ದರು. ಶಾಂತಿಯುತವಾಗಿ ಪೂಜೆ ಮಾಡುತ್ತಿದ್ದ ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಮೇಲೆ ಲಾಠಿಗಳಿಂದ ಹಲ್ಲೆ ನಡೆಸಲಾಗಿತ್ತು. ಇದು ಕೇವಲ ಒಂದು ದಾಳಿಯಲ್ಲ, ಅನೇಕ ದೇಗುಲಗಳನ್ನು ನಿರಂತರವಾಗಿ ಗುರಿ ಮಾಡಲಾಗುತ್ತಿದೆ ಮತ್ತು ಭಕ್ತರನ್ನು ಹೆದರಿಸಲಾಗುತ್ತಿದೆ.
೨. ನಮ್ಮ ದೇಗುಲಗಳು ಪವಿತ್ರವಾದವು. ಇವು ಪ್ರತಿಭಟನಾ ಸ್ಥಳಗಳಲ್ಲ ಅಥವಾ ರಾಜಕೀಯ ವೇದಿಕೆಗಳಲ್ಲ. ಈ ಬಾರಿ ಏನಾದರೂ ಗದ್ದಲ ನಡೆದರೆ ನಾವು ಸುಮ್ಮನಿರುವುದಿಲ್ಲ.
೩. ಹಿಂದೂ ಸಮುದಾಯವು ಕೆನಡಾದ ಅವಿಭಾಜ್ಯ ಅಂಗವಾಗಿದೆ. ಹಿಂದೂಗಳು ಶಾಂತಿಪ್ರಿಯರು ಮತ್ತು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವರು. ಆದರೆ ಈಗ ಅತಿರೇಕವಾಗಿದೆ, ಸರಕಾರವು ಹಿಂದೂಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲೇಬೇಕು.
೪. ಕೆನಡಾ ಸಂಸತ್ತು ಈಗಾಗಲೇ ‘ಸಿ-೯’ (C-9) ವಿಧೇಯಕವನ್ನು ಅಂಗೀಕರಿಸಿದೆ. ಇದರಲ್ಲಿ ಪ್ರಾರ್ಥನಾ ದೇಗುಲಗಳಲ್ಲಿ ದ್ವೇಷ ಹರಡುವುದು, ಬೆದರಿಕೆ ಹಾಕುವುದು ಮತ್ತು ಅಡ್ಡಿಪಡಿಸುವವರಿಗೆ ಕಠಿಣ ಶಿಕ್ಷೆಯ ನಿಬಂಧನೆಯಿದೆ. ಬ್ರಾಂಪ್ಟನ್‌ನಲ್ಲಿ ಈಗಾಗಲೇ ದೇಗುಲಗಳ ಸುತ್ತ ‘ಬಬಲ್ ಝೋನ್’ (ನಿರ್ಬಂಧಿತ ಪ್ರದೇಶ) ನಿರ್ಮಿಸಲಾಗಿದ್ದು, ಅಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ. ಗುರಿ ಮಾಡಿ ದಾಳಿ ಮಾಡುವುದು ಪ್ರತಿಭಟನೆಯಲ್ಲ, ಅದು ಬೆದರಿಕೆ. ಪೂಜೆಗೆ ಅಡ್ಡಿಪಡಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ, ಅದು ದಬ್ಬಾಳಿಕೆ.
೫. ಖಲಿಸ್ತಾನ್ ಬೆಂಬಲಿಗರು ಹಿಂದೂ ಸಮುದಾಯವನ್ನು ಮೌನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಕೇವಲ ಹಿಂದೂಗಳಿಗೆ ಸಂಬಂಧಿಸಿದ ವಿಷಯವಲ್ಲ, ಬದಲಿಗೆ ಇಡೀ ಕೆನಡಾದ ಭದ್ರತೆ, ಕಾನೂನು ಸುವ್ಯವಸ್ಥೆ ಮತ್ತು ಸಾಮಾಜಿಕ ಸೌಹಾರ್ದತೆಗೆ ಅಪಾಯವಾಗಿದೆ. ಕೆನಡಾ ಮೂಲದ ಖಲಿಸ್ತಾನಿ ಭಯೋತ್ಪಾದಕರು ದೇಶದ ಆಂತರಿಕ ಭದ್ರತೆಗೆ ದೊಡ್ಡ ಕಂಟಕವಾಗಿದ್ದಾರೆ. ಹಿಂಸಾಚಾರವನ್ನು ಪ್ರಚೋದಿಸುವವರನ್ನು ಗುರುತಿಸಿ ಅವರ ಮೇಲೆ ಹೊಣೆಗಾರಿಕೆ ನಿಗದಿಪಡಿಸಬೇಕು.
ಸಂಪಾದಕೀಯ ನಿಲುವುಕೆನಡಾದ ಹೊಸ ಸರಕಾರವು ಈ ಬಗ್ಗೆ ಕಠಿಣ ಕ್ರಮ ಕೈಗೊಂಡು, ಖಲಿಸ್ತಾನಿಗಳನ್ನು ಜೈಲಿಗಟ್ಟುವ ಮೂಲಕ ಹಿಂದೂಗಳು ಮತ್ತು ಅವರ ದೇಗುಲಗಳನ್ನು ರಕ್ಷಿಸಬೇಕು. ಇದಕ್ಕಾಗಿ ಭಾರತ ಸರಕಾರವೂ ಕೆನಡಾ ಸರಕಾರದ ಮೇಲೆ ಒತ್ತಡ ಹೇರಬೇಕು! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara