|

ಪುಣೆ, ಮಾರ್ಚ್ ೨೯ (ವಾರ್ತೆ) – ದತ್ತ ಪರಂಪರೆಯ ಅಗ್ರಗಣ್ಯ ಸಂತಶ್ರೇಷ್ಠರು ಮತ್ತು ಶಕ್ತಿಪಾತಯೋಗದ ಅಧ್ವರ್ಯುಗಳಾದ ಪ.ಪೂ. ಗುಳವಣಿ ಮಹಾರಾಜರು ದೀಕ್ಷೆ ಪಡೆದು ೧೧೫ ವರ್ಷಗಳಾದವು. ಈ ನಿಮಿತ್ತವಾಗಿ ‘ಶ್ರೀ ಪರಮಹಂಸ ಪರಿವ್ರಾಜಕಾಚಾರ್ಯ ವಾಸುದೇವಾನಂದ ಸರಸ್ವತಿ ಟೆಂಬೆ ಸ್ವಾಮಿ ಮಹಾರಾಜ ಮತ್ತು ಶ್ರೀ ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಲೋಕನಾಥತೀರ್ಥ ಸ್ವಾಮಿ ಮಹಾರಾಜ ಟ್ರಸ್ಟ್’ ವತಿಯಿಂದ ‘ಶ್ರೀಗುರು ಗೌರವ ದೀಕ್ಷಾ ಶತಮಾನೋತ್ಸವ ೨೦೨೦ ರಿಂದ ೨೦೨೬’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
|
|
|
ಈ ವರ್ಷ ಅಂದರೆ ೨೦೨೬ ರಲ್ಲಿ ಪುಣೆಯ ಏರಂಡವಣೆಯಲ್ಲಿರುವ ‘ಶ್ರೀವಾಸುದೇವ ನಿವಾಸ ಸ್ಥಾಪನೆಯ ವಜ್ರ ಮಹೋತ್ಸವ’, ಪ.ಪೂ. ಗುಳವಣಿ ಮಹಾರಾಜರ ಶಿಷ್ಯರಾದ ‘ಪ.ಪೂ. ಬ್ರಹ್ಮಶ್ರೀ ಶ್ರೀ ದತ್ತಮಹಾರಾಜ ಕವೀಶ್ವರ ಪುಣ್ಯತಿಥಿ ರಜತ ಮಹೋತ್ಸವ’, ‘ಪ.ಪೂ. ಯೋಗತಪಸ್ವಿ ಶ್ರೀ ನಾರಾಯಣಕಾಕಾ ಢೇಕಣೆ ಮಹಾರಾಜ ಜನ್ಮ ಶತಮಾನೋತ್ಸವ’, ಹಾಗೂ ಈ ದತ್ತ ಪರಂಪರೆಯ ಪ್ರಸ್ತುತ ಉತ್ತರಾಧಿಕಾರಿಗಳಾದ ಪೂ. ಶರದಭಾವು ಜೋಶಿ ಅವರ ‘ಯೋಗಭಕ್ತಿಯ ಅಮೃತ ಮಹೋತ್ಸವ’ವಾಗಿ ಆಚರಿಸಲಾಗುತ್ತಿದೆ. ಈ ನಿಮಿತ್ತವಾಗಿ ಮಾರ್ಚ್ ೨೮ ರಂದು ೧೫ ಸಂತರನ್ನು ಮತ್ತು ಮಾರ್ಚ್ ೨೯ ರಂದು ೧೧ ಸಂತರನ್ನು ಹೀಗೆ ಒಟ್ಟು ೨೬ ಸಂತರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳ ಕೊಡುಗೆ ಹಾಗೂ ಸೇವಾಕಾರ್ಯವನ್ನು ಪರಿಗಣಿಸಿ ಅವರನ್ನು ಗೌರವಿಸಲಾಯಿತು. ಅವರ ಪರವಾಗಿ ಸನಾತನ ಸಂಸ್ಥೆಯ ಸದ್ಗುರು ಸ್ವಾತಿ ಖಾಡಯೆ ಅವರು ಈ ಸನ್ಮಾನವನ್ನು ಸ್ವೀಕರಿಸಿದರು. ಶಾಲು, ಶ್ರೀಫಲ, ಮುತ್ತಿನ ಹಾರ ಮತ್ತು ಸನ್ಮಾನ ಚಿಹ್ನೆ ನೀಡಿ ಅವರನ್ನು ಗೌರವಿಸಲಾಯಿತು.
|
|
|
ಸಮಾಜಕ್ಕೆ ಸನ್ಮಾರ್ಗವನ್ನು ತೋರಿಸುವ ಮಹಾನ್ ಕಾರ್ಯವನ್ನು ಭಾರತವರ್ಷದ ಮತ್ತು ವಿಶೇಷವಾಗಿ ಸಂತಭೂಮಿ ಎಂದು ಗುರುತಿಸಲ್ಪಡುವ ಮಹಾರಾಷ್ಟ್ರದ ಅನೇಕ ಸಂತ-ಸತ್ಪುರುಷರು ಈವರೆಗೆ ಮಾಡಿದ್ದಾರೆ. ಅಂತಹ ಪರಂಪರೆಯ ಸತ್ಪುರುಷರ ಆಶೀರ್ವಾದ ಲಭಿಸಲಿ ಎಂಬ ಉದ್ದೇಶದಿಂದ ಈ ಸಂತರ ಸಮಾಗಮದ ಸನ್ಮಾನವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಪೂ. ಶರದಭಾವು ಜೋಶಿ ಅವರನ್ನು ಸನಾತನ ಸಂಸ್ಥೆಯ ಪರವಾಗಿ ಸದ್ಗುರು ಸ್ವಾತಿ ಖಾಡಯೆ ಅವರು ಶಾಲು, ಶ್ರೀಫಲ ಮತ್ತು ಉಡುಗೊರೆ ನೀಡಿ ಗೌರವಿಸಿದರು. ಗೌರವಾನ್ವಿತ ಅತಿಥಿಗಳ ಆಗಮನವಾಗುತ್ತಿದ್ದಂತೆಯೇ ಪುಷ್ಪವೃಷ್ಟಿ ಮಾಡಿ ಅವರನ್ನು ಸ್ವಾಗತಿಸಲಾಯಿತು. ನಂತರ ಶ್ರೀಗುರುಗಳ ಪಾದುಕೆ ಪೂಜೆ, ವೇದಮಂತ್ರ ಪಾರಾಯಣ, ಭಜನೆ ಮತ್ತು ‘ದಿಗಂಬರಾ ದಿಗಂಬರಾ ಶ್ರೀಪಾದ ವಲ್ಲಭ ದಿಗಂಬರಾ’ ನಾಮಘೋಷದೊಂದಿಗೆ ಕಾರ್ಯಕ್ರಮವು ಆರಂಭವಾಯಿತು.

ಗೌರವಾನ್ವಿತ ಸಂತರು ಆಶೀರ್ವಚನ ನೀಡಿದರು. ಇದರ ನಂತರ ಶ್ರೀ. ಶಿರೀಷಕುಮಾರ ಉಪಾಧ್ಯೆ ಮತ್ತು ಶ್ರೀ. ಅರುಣಕುಮಾರ ಉಪಾಧ್ಯೆ ಸಹೋದರರು ವಯಲಿನ್ ಮೂಲಕ ನುಡಿಸಿದ ಪ.ಪ. ಶ್ರೀಟೆಂಬೆ ಸ್ವಾಮಿ ಮಹಾರಾಜ ರಚಿತ ‘ಶ್ರೀ ದತ್ತ ತ್ರಿಪದಿ’ಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು. ಏರಂಡವಣೆಯ ಶ್ರೀ ವಾಮನ ನಿವಾಸದಲ್ಲಿ ಈ ಕಾರ್ಯಕ್ರಮವು ನೆರವೇರಿತು.




ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!