|

ಗೋರಖಪುರ (ಉತ್ತರಪ್ರದೇಶ) – ಇಲ್ಲಿನ ಆವಾಸ್ ವಿಕಾಸ್ ಕಾಲೋನಿ ಸಮೀಪವಿರುವ ಗೋಡಧೋಯಿಯಾ ಸೇತುವೆಯ ಪಕ್ಕದಲ್ಲಿ ಸರಕಾರಿ ಭೂಮಿಯನ್ನು ಅತಿಕ್ರಮಿಸಿ ನಿರ್ಮಿಸಲಾಗಿದ್ದ ದರ್ಗಾವನ್ನು ಮಾರ್ಚ್ 26 ರಂದು ತೆರವುಗೊಳಿಸಲಾಯಿತು. ಪ್ರದೇಶದ ಕಾಲುವೆ ಅಗಲೀಕರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಈ ದರ್ಗಾವನ್ನು ಹಜರತ್ ಬಾಬಾ ಜಾಫರ್ ಅಲಿ ಶಾ ‘ಮಾಸೂಮ್’ ಎಂದು ಕರೆಯಲಾಗುತ್ತಿತ್ತು. ಸಾರ್ವಜನಿಕ ಲೋಕೋಪಯೋಗಿ ಇಲಾಖೆ ನಡೆಸಿದ ಈ ಕಾರ್ಯಾಚರಣೆಯ ಸಮಯದಲ್ಲಿ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಮುಸಲ್ಮಾನರು ಕಾರ್ಯಾಚರಣೆಗೆ ಸ್ವಲ್ಪ ಮಟ್ಟಿಗೆ ವಿರೋಧ ವ್ಯಕ್ತಪಡಿಸಿದರಾದರೂ, ಆಡಳಿತ ಮಂಡಳಿಯ ಕಠಿಣ ನಿಲುವಿನ ಮುಂದೆ ಅವರ ಆಟ ನಡೆಯಲಿಲ್ಲ. ತದನಂತರ ಮುಸಲ್ಮಾನರು ಶಾಂತಿಯುತವಾಗಿ ಕಾರ್ಯಾಚರಣೆ ನಡೆಸಲು ಅವಕಾಶ ನೀಡಿದರು.
ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದವರಲ್ಲಿ ಮುಸಲ್ಮಾನ ಮಹಿಳೆಯರೂ ಸೇರಿದ್ದರು. ಅನೇಕ ವರ್ಷಗಳಿಂದ ಇಲ್ಲಿಗೆ ಬಂದು ಭಕ್ತಿಯಿಂದ ಹರಕೆಗಳನ್ನು ಸಲ್ಲಿಸುತ್ತಿದ್ದೆವು ಎಂದು ಅವರು ಹೇಳಿದರು. ದರ್ಗಾವನ್ನು ಕೆಡವುದನ್ನು ಕಂಡು ಅನೇಕರು ಭಾವುಕರಾದರು. (ಈಗ ಈ ದೃಶ್ಯಗಳನ್ನು ಬಂಡವಾಳ ಮಾಡಿಕೊಂಡು ‘ಬಿಬಿಸಿ’ ಮತ್ತು ‘ನ್ಯೂಯಾರ್ಕ್ ಟೈಮ್ಸ್’ ನಂತಹ ಹಿಂದೂ ವಿರೋಧಿ ಮಾಧ್ಯಮಗಳು ಆಡಳಿತ ಮಂಡಳಿಯನ್ನು ವಿರೋಧಿಸಲು ಆರಂಭಿಸಿದರೆ ಆಶ್ಚರ್ಯಪಡಬೇಕಿಲ್ಲ! – ಸಂಪಾದಕರು). ಈ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!