
ನವದೆಹಲಿ – ಕತಾರ್ ಮತ್ತು ಇರಾನ್ ನಡುವೆ ಗುಪ್ತ ಒಪ್ಪಂದವೊಂದು ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಒಪ್ಪಂದದ ಪ್ರಕಾರ, ಕತಾರ್ ಮೊದಲ ಬಾರಿಗೆ ಇರಾನ್ ಜೊತೆಗಿನ ಯುದ್ಧದಿಂದ ತನ್ನನ್ನು ಅಧಿಕೃತವಾಗಿ ದೂರವಿರಿಸಿಕೊಂಡಿದೆ. ಒಂದು ಹೇಳಿಕೆಯಲ್ಲಿ ಕತಾರ್, ಅಮೆರಿಕ ಮತ್ತು ಇರಾನ್ ನಡುವೆ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಘೋಷಿಸಿದೆ. ಇದರಿಂದಾಗಿಯೇ ಮಾರ್ಚ್ ೨೦ ರಿಂದ ಇರಾನ್ ಕತಾರ್ ಮೇಲೆ ಯಾವುದೇ ದಾಳಿ ಮಾಡಿಲ್ಲ.
ಇಸ್ರೇಲಿ ವೆಬ್‌ಸೈಟ್ ‘ಜೆಫೀಡ್’ ನ ವರದಿಯ ಪ್ರಕಾರ, ಕತಾರ್ ಮತ್ತು ಇರಾನ್ ನಡುವಿನ ಒಪ್ಪಂದದ ಪ್ರಕಾರ, ಒಂದು ವೇಳೆ ಇರಾನ್ ಕತಾರ್‌ನ ತೈಲ ಮತ್ತು ಅನಿಲ ಸೌಲಭ್ಯಗಳ ಮೇಲೆ ದಾಳಿ ಮಾಡದಿದ್ದರೆ, ಅದಕ್ಕೆ ೬ ಶತಕೋಟಿ ಡಾಲರ್ಸ್ ಸಿಗಲಿದೆ. ಈ ಮೊತ್ತವನ್ನು ಅಮೆರಿಕವು ವರ್ಷ ೨೦೨೩ ರಲ್ಲಿ ಕತಾರ್‌ಗೆ ನೀಡಿತ್ತು. ಆ ಸಮಯದಲ್ಲಿ ಕೆಲವು ಅಮೆರಿಕನ್ ಕೈದಿಗಳ ಬಿಡುಗಡೆಯ ಬದಲಾಗಿ ಇರಾನ್ ಈ ಮೊತ್ತವನ್ನು ಪಡೆಯಬೇಕಿತ್ತು; ಆದರೆ ಆ ನಂತರ ಕತಾರ್ ಈ ಪ್ರಸ್ತಾವನೆಯನ್ನು ಹಿಂಪಡೆಯಿತು. ಈಗ ಈ ಒಪ್ಪಂದದ ಪ್ರಕಾರ ಇರಾನ್‌ಗೆ ಕತಾರ್‌ನಿಂದ ಈ ಎಲ್ಲಾ ಹಣ ಸಿಗಲಿದೆ.
ಈ ಯುದ್ಧ ಇಸ್ರೇಲ್‌ಗಾಗಿ ನಡೆಯುತ್ತಿದೆ! – ಕತಾರ್
ಕತಾರ್ ವಿದೇಶಾಂಗ ಸಚಿವರು, ತಾವು ಇನ್ನು ಮುಂದೆ ಇರಾನ್ ಮತ್ತು ಅಮೆರಿಕ ನಡುವೆ ಯಾವುದೇ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ಈ ಯುದ್ಧವು ಇಸ್ರೇಲ್‌ಗಾಗಿ ನಡೆಯುತ್ತಿದೆ’, ಎಂದು ಹೇಳುತ್ತಾ ಕತಾರ್ ಕೈತೊಳೆದುಕೊಂಡಿದೆ.
ಸಿಂಧೂ ಜಲ ಒಪ್ಪಂದ; ಪಾಕಿಸ್ತಾನ ತನ್ನ ಅಣು ನೀತಿಯನ್ನು ಬದಲಿಸಿ ಅಣುಬಾಂಬ್ ಬಳಸಬೇಕು! : Bilawal Bhutto
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
Dhirendra Krishna Shastri : ರಾಮ ಮಂದಿರ ದಾನ ಕಳ್ಳತನ: ಪಂಡಿತ ಧೀರೇಂದ್ರ ಶಾಸ್ತ್ರಿಯ ಸ್ಫೋಟಕ ಹೇಳಿಕೆ!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’