ಪಾಕಿಸ್ತಾನದ 3 ಸೇನಾ ನೆಲೆಗಳು ಧ್ವಂಸ

ಕಾಬೂಲ್ (ಅಫ್ಘಾನಿಸ್ತಾನ) – ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳ ನಡುವಿನ ತಾತ್ಕಾಲಿಕ ಕದನ ವಿರಾಮ ಮುಗಿಯುತ್ತಿದ್ದಂತೆಯೇ ಗಡಿಯ ಬಳಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಮಾರ್ಚ್ 25 ರಂದು ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 2 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಅಫ್ಘಾನ್ ಅಧಿಕಾರಿಗಳ ಮಾಹಿತಿಯ ಪ್ರಕಾರ, ಈ ಸಂಘರ್ಷವು ಕುನಾರ್ ಪ್ರಾಂತ್ಯದ ನಾರಾಯಿ ಮತ್ತು ಸರ್ಕಾನೋ ಜಿಲ್ಲೆಗಳಲ್ಲಿ ನಡೆದಿದೆ. ಈ ಸ್ಥಳಗಳಲ್ಲಿ ಪಾಕಿಸ್ತಾನವು ದೊಡ್ಡ ಪ್ರಮಾಣದಲ್ಲಿ ಫಿರಂಗಿ ಗುಂಡುಗಳನ್ನು ಹಾರಿಸಿದೆ.
೧. ಅಫ್ಘಾನ್ ಗಡಿ ಪಡೆಗಳು ಪ್ರತ್ಯುತ್ತರ ನೀಡಿ ಪಾಕಿಸ್ತಾನದ 3 ಸೇನಾ ನೆಲೆಗಳನ್ನು ಧ್ವಂಸಗೊಳಿಸಿವೆ. ಅದರಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಅಫ್ಘಾನ್ ಸೈನ್ಯವು ಪ್ರತಿಪಾದಿಸಿದೆ; ಆದರೆ ಈ ಪ್ರತಿಪಾದನೆಗಳಿಗೆ ಸ್ವತಂತ್ರವಾಗಿ ದೃಢೀಕರಣ ಸಿಕ್ಕಿಲ್ಲ. ಪಾಕಿಸ್ತಾನವು ಮಾತ್ರ ಗುಂಡಿನ ದಾಳಿಯನ್ನು ಅಫ್ಘಾನ್ ಪಡೆಗಳೇ ಆರಂಭಿಸಿವೆ ಎಂದು ಆರೋಪಿಸಿದೆ.
೨. ರಮಜಾನ್ ಅವಧಿಯಲ್ಲಿ ಉಭಯ ದೇಶಗಳು ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಿದ್ದವು. ಈ ಹಿಂದೆ ಸೌದಿ ಅರೇಬಿಯಾ, ಟರ್ಕಿ ಮತ್ತು ಕತಾರ್ ಇವರುಗಳ ವಿನಂತಿಯ ನಂತರ ಎರಡೂ ಕಡೆಯವರು ಸಂಘರ್ಷ ನಿಲ್ಲಿಸಲು ಸಮ್ಮತಿ ಸೂಚಿಸಿದ್ದರು. ಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿ ನಡೆಸಿದ ವೈಮಾನಿಕ ದಾಳಿಯ ನಂತರ ಈ ಒಪ್ಪಂದವಾಗಿತ್ತು.
೩. ‘ತಹರಿಕ್-ಎ-ತಾಲಿಬಾನ್ ಪಾಕಿಸ್ತಾನ’ವು ಪಾಕಿಸ್ತಾನದಲ್ಲಿ ಮತ್ತೆ ದಾಳಿಗಳನ್ನು ಆರಂಭಿಸಿದ್ದಾಗಿ ಘೋಷಿಸಿದೆ. ಈ ಸಂಘಟನೆಯು ಅಫ್ಘಾನಿಸ್ತಾನದಲ್ಲಿ ಅಧಿಕಾರದಲ್ಲಿರುವ ತಾಲಿಬಾನ್ ನ ಸಹಯೋಗಿ ಸಂಘಟನೆಯೆಂದು ನಂಬಲಾಗಿದೆ. ವರ್ಷ 2021 ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಈ ಸಂಘಟನೆಯು ಪಾಕಿಸ್ತಾನದಲ್ಲಿ ದಾಳಿಗಳ ತೀವ್ರತೆಯನ್ನು ಹೆಚ್ಚಿಸಿದೆ. ಅಫ್ಘಾನಿಸ್ತಾನವು ನಮ್ಮ ಭೂಮಿಯನ್ನು ಭಯೋತ್ಪಾದಕ ಚಟುವಟಿಕೆಗಳಿಗಾಗಿ ಬಳಸಲು ನೀಡುತ್ತಿದೆ ಎಂದು ಪಾಕಿಸ್ತಾನವು ಆರೋಪಿಸಿದೆ. ಅಫ್ಘಾನಿಸ್ತಾನ ಸರಕಾರವು ಈ ಆರೋಪಗಳನ್ನು ನಿರಾಕರಿಸಿದೆ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !