
ನಾಸಿಕ್ – ಕಪಟಿ ಬಾಬಾ ಅಶೋಕ್ ಖರಾತ್ ೨೦ ವರ್ಷಗಳ ಹಿಂದೆ ಬೆದರಿಕೆ ಹಾಕಿದ್ದಾಗಿ ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ (ಅಂನಿಸ) ದಾವೆ ಮಾಡಿದೆ. ೨೦೦೭ ರಲ್ಲಿ ಅಂನಿಸ ಕಾರ್ಯಕರ್ತರು ಖರಾತ್‌ನ ಕಚೇರಿಗೆ ಹೋದಾಗ, “ನನ್ನ ಬಳಿ ರಿವಾಲ್ವರ್ ಇದೆ” ಎಂದು ಖರಾತ್ ಅವರಿಗೆ ಬೆದರಿಕೆ ಹಾಕಿದ್ದನು. ಅಂನಿಸ ಸವಾಲು ಹಾಕಿದ ನಂತರ ಅವನು ತನ್ನ ದಂಧೆಯನ್ನು ೩ ತಿಂಗಳುಗಳ ಕಾಲ ಸ್ಥಗಿತಗೊಳಿಸಿದ್ದನು. ೨೦೧೩ ರಲ್ಲಿಯೂ ಸಹ ಖರಾತ್ ಅಂನಿಸ ಕಾರ್ಯಕರ್ತರಿಗೆ, “ನನ್ನ ತಂಟೆಗೆ ಬಂದರೆ ನಿಮ್ಮ ಅಸ್ತಿತ್ವವನ್ನೇ ಅಳಿಸಿ ಹಾಕುತ್ತೇನೆ” ಎಂದು ಬೆದರಿಸಿದ್ದನು. ತದನಂತರ ಅಶೋಕ್ ಖರಾತ್‌ನ ಚಟುವಟಿಕೆಗಳಿಂದ ಬೇಸತ್ತ ಸಂತ್ರಸ್ತರು ಕಾಲಕಾಲಕ್ಕೆ ಅಂನಿಸ ಸಂಘಟನೆಯನ್ನು ಸಂಪರ್ಕಿಸುತ್ತಿದ್ದರು; ಆದರೆ ಅವರು ಪೊಲೀಸರ ಬಳಿ ಹೋಗಲು ಹೆದರುತ್ತಿದ್ದರು ಎಂದು ಅಂನಿಸ ಕಾರ್ಯಕರ್ತರು ದಾವೆ ಮಾಡಿದ್ದಾರೆ.
ಸಂಪಾದಕೀಯ ನಿಲುವುಇಷ್ಟು ವರ್ಷಗಳ ಕಾಲ ಈ ಕಪಟಿಬಾಬಾನ ಬಗ್ಗೆ ಅಂನಿಸಗೆ ತಿಳಿದಿತ್ತು ಮತ್ತು ಅಂನಿಸನ ಕಾಯ್ದೆ ಜಾರಿಗೆ ಬಂದು ಕೂಡ ಇಷ್ಟು ವರ್ಷಗಳಾಗಿವೆ, ಹಾಗಿದ್ದರೂ ಈ ಹಿಂದೆ ಅಂನಿಸ ಸ್ವತಃ ಪೊಲೀಸರ ಬಳಿ ಏಕೆ ಹೋಗಲಿಲ್ಲ? ಕಳೆದ ೨೦ ವರ್ಷಗಳಲ್ಲಿ ಅಂನಿಸ ಈ ಕಪಟಿ ಬಾಬಾನ ಬಗ್ಗೆ ಒಂದೇ ಒಂದು ಮಾತನ್ನೂ ಸಹ ಆಡಲಿಲ್ಲ. ಇದರ ಹಿಂದಿನ ಕಾರಣವೇನು ಎಂಬುದರ ಕುರಿತು ತನಿಖೆಯಾಗಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!