ಏಪ್ರಿಲ್‌ ೨ – ಹನುಮಾನ ಜಯಂತಿ : ಹನುಮಂತನ ಪಂಚಮಹಾಭೂತಗಳೊಂದಿಗಿನ ಕಾರ್ಯ ಮತ್ತು ಅವನ ಆಧ್ಯಾತ್ಮಿಕ ವೈಶಿಷ್ಟ್ಯಗಳು

೧. ೧೧ ನೇ ರುದ್ರ

ಹನುಮಂತನು ೧೧ ನೇ ರುದ್ರ ನಾಗಿದ್ದು ಅವನು ಶಿವಸ್ವರೂಪನಾಗಿದ್ದಾನೆ. ತ್ರೇತಾಯುಗದ ಪ್ರಭು ಶ್ರೀರಾಮರ ಅವತಾರ ಕಾರ್ಯದಲ್ಲಿ ಪಾಲ್ಗೊಂಡು ಶ್ರೀರಾಮರಿಗೆ ಸಹಾಯ ಮಾಡಲಿಕ್ಕಾಗಿಯೆ ಶಿವ ಹನುಮಂತನ ಅವತಾರ ತಾಳಿದನು.

೨. ಸಪ್ತಚಿರಂಜೀವಿಗಳಲ್ಲಿ ಒಬ್ಬ

ಬಲಿರಾಜ, ಪರಶುರಾಮ, ಹನುಮಂತ,ವಿಭೀಷಣ, ಮಹರ್ಷಿ ವ್ಯಾಸ, ಕೃಪಾಚಾರ್ಯ ಮತ್ತು ಅಶ್ವತ್ಥಾಮ ಇವರು ಸಪ್ತಚಿರಂಜೀವಿಗಳಾಗಿದ್ದಾರೆ.

೩. ಪವನಸುತ ಹನುಮಂತ

ಹನುಮಂತನಲ್ಲಿ ವಾಯುತತ್ತ್ವ ಪ್ರಬಲವಾಗಿದೆ. ವಾಯುದೇವನು ಶಿವನ ತೇಜಾಂಶಯುಕ್ತ ತತ್ತ್ವವನ್ನು ಅಂಜನೀ ದೇವಿಯವರೆಗೆ ತಲುಪಿಸುವ ಮಹತ್ಕಾರ್ಯ ಮಾಡಿದ ಕಾರಣ ಹನುಮಂತನನ್ನು ‘ಪವನಸುತ’ ಅಥವಾ ‘ಪವನಪುತ್ರ’ ಎಂದು ಸಂಬೋಧಿಸುತ್ತಾರೆ. ವಾಯುದೇವರ ಕೃಪೆಯಿಂದ ಹನುಮಂತ ಗಗನದಲ್ಲಿ ಜಿಗಿಯುತ್ತಾ ಮುಕ್ತವಾಗಿ ಸಂಚರಿಸಬಲ್ಲನು. ಹನುಮಂತನ ಕಾರ್ಯ ವಾಯುತತ್ತ್ವಕ್ಕೆ ಸಂಬಂಧಿಸಿದೆ. ಸಂಸ್ಕೃತದಲ್ಲಿ ‘ಮರುತ’ ಎಂದರೆ ‘ವಾಯು’. ಹನುಮಂತನ ಸಂಬಂಧ ವಾಯುವಿನೊಂದಿಗೆ ಇರುವುದರಿಂದ ಅವನಿಗೆ ‘ಮಾರುತಿ’ ಎನ್ನುತ್ತಾರೆ.

೪. ತೇಜತತ್ತ್ವದ ಮೇಲೆ ನಿಯಂತ್ರಣವಿರುವುದರಿಂದ ಸೂರ್ಯ ಮತ್ತು ಅಗ್ನಿಯಿಂದ ಸಂರಕ್ಷಣೆ ಸಿಗುವುದು

ಹನುಮಂತನು ವಾಯುತತ್ತ್ವದ ಬಲದಲ್ಲಿ ಕಾರ್ಯ ಮಾಡುವುದರಿಂದ ಹಾಗೂ ವಾಯುತತ್ತ್ವವು ತೇಜತತ್ತ್ವಕ್ಕಿಂತ ಸೂಕ್ಷ್ಮ ಆಗಿರುವುದರಿಂದ ಹನುಮಂತನಿಗೆ ತೇಜತತ್ತ್ವದ ಮೇಲೆ ನಿಯಂತ್ರಣವಿದೆ. ಆದ್ದರಿಂದ ಹನುಮಂತನಿಗೆ ಸೂರ್ಯ ಮತ್ತು ಅಗ್ನಿಯಿಂದ ಸಂರಕ್ಷಣೆ ಸಿಕ್ಕಿದೆ. ಹನುಮಂತನು ಬಾಲ್ಯಾವಸ್ಥೆಯಲ್ಲಿ ಉದಯಿಸುವ ಸೂರ್ಯನನ್ನು ಆಕಾಶದಲ್ಲಿನ ಕೆಂಪು ಬಣ್ಣದ ಹಣ್ಣೆಂದು ತಿಳಿದು ನುಂಗಲು ಹೋಗಿದ್ದನು. ಲಂಕಾದಹನದ ಪ್ರಸಂಗದಲ್ಲಿ ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿರುವಾಗ ಅವನಿಗೆ ಸ್ವಲ್ಪವೂ ನೋವಾಗಲಿಲ್ಲ ತದ್ವಿರುದ್ಧ ಬಾಲದ ತುದಿಗೆ ತಾಗಿದ ಬೆಂಕಿಯನ್ನು ಉಪಯೋಗಿಸಿ ಹನುಮಂತ ಸಂಪೂರ್ಣ ಲಂಕೆಯನ್ನು ಭಸ್ಮ ಮಾಡಿದನು. ಇದರಿಂದ ತೇಜತತ್ತ್ವ, ಅಂದರೆ ಅಗ್ನಿತತ್ತ್ವ ಹನುಮಂತನ ಅಧೀನದಲ್ಲಿದೆ, ಎಂಬುದು ಸಿದ್ಧವಾಗುತ್ತದೆ.

ಸುಶ್ರೀ (ಕು.) ಮಧುರಾ ಭೋಸಲೆ

೫. ಶಿವನ ಹಾಗೆಯೆ ಅಖಂಡ ಸಾಧನೆ ಮಾಡುವ ರಾಮಭಕ್ತ ಹನುಮಂತ

ಹನುಮಂತ ಶಿವನ ಹಾಗೆಯೆ ಅಖಂಡ ಸಾಧನೆ ಮಾಡುತ್ತಾನೆ. ಅವನು ಯುದ್ಧದ ಪ್ರಸಂಗದಲ್ಲಿ ಹಾಗೂ ನಿದ್ರೆಯಲ್ಲಿಯೂ ರಾಮನಾಮವನ್ನು ಅಖಂಡವಾಗಿ ಜಪಿಸುತ್ತಾನೆ. ಅದೇ ರೀತಿ ಜಾಗೃತ ಸ್ಥಿತಿಯಲ್ಲಿರುವಾಗ ಅವನ ಕಾರ್ಯ ಪೂರ್ಣವಾದಾಗ ಅವನುರಾಮನ ಧ್ಯಾನ ಮಾಡುತ್ತಾನೆ. ಇವನು ಅಖಂಡ ರಾಮನಾಮ ಜಪಿಸುವ ಏಕೈಕ ರಾಮಭಕ್ತನಾಗಿದ್ದಾನೆ.

೬. ದಾಸ್ಯಭಕ್ತಿಯ ಸರ್ವೋತ್ತಮ ಉದಾಹರಣೆ

ಭಕ್ತಿಯೋಗಾಂತರ್ಗತ ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ ಹಾಗೂ ಆತ್ಮನಿವೇದನ ಇವು ನವವಿಧ ಭಕ್ತಿಗಳಾಗಿವೆ. ಇದರಲ್ಲಿನ ದಾಸ್ಯಭಕ್ತಿಯ ಸರ್ವೋತ್ತಮ ಉದಾಹರಣೆ ಹನುಮಂತನಾಗಿದ್ದಾನೆ.

೭. ಕಾಲ ಮತ್ತು ಕಾಮವನ್ನು ಜಯಿಸಿರುವವನು

ಹನುಮಂತ ಸಪ್ತಚಿರಂಜೀವಿಗಳಲ್ಲಿ ಒಬ್ಬನಾಗಿದ್ದು ಅವನು ಕಲ್ಪಾಂತ್ಯದ ವರೆಗೆ ಜೀವಂತವಾಗಿರುವನು. ಆದ್ದರಿಂದ ಕಾಲ ಅವನ ಅಧೀನದಲ್ಲಿದೆ. ಹನುಮಂತ ಬಾಲಬ್ರಹ್ಮಚಾರಿ ಆಗಿದ್ದು ಅವನುಬ್ರಹ್ಮಚರ್ಯ ವ್ರತವನ್ನು ಕಠೋರವಾಗಿ ಪಾಲಿಸುತ್ತಾನೆ. ಹನುಮಂತ ಷಡ್ರಿಪುಗಳಲ್ಲಿ ಎಲ್ಲಕ್ಕಿಂತ ಬಲಿಷ್ಟವಾಗಿರುವ ಕಾಮವಾಸನೆಯನ್ನು ಜಯಿಸಿದ್ದಾನೆ.

೮. ಸನ್ಯಾಸ ಆಶ್ರಮವನ್ನು ಪಾಲಿಸಿ ವಿರಕ್ತ ಜೀವನ ನಡೆಸುವುದು

ಹನುಮಂತ ಕಲ್ಪಾಂತ್ಯದ ವರೆಗೆ ಜೀವಂತವಾಗಿದ್ದರೂ, ಅವನ ಮನಸ್ಸು ಕಿಂಚಿತ್ತೂ ಮಾಯೆಯ ಕಡೆಗೆ ತಿರುಗುವುದಿಲ್ಲ. ಅವನು ಮೋಹಮಾಯೆಯಿಂದ ಅಲಿಪ್ತನಾಗಿದ್ದು ವಿರಕ್ತ ಜೀವನ ನಡೆಸುವನು. ಅವನು ನೈಷ್ಠಿಕ (ಅಚಂಚಲ) ಬ್ರಹ್ಮಚಾರಿಯಾಗಿದ್ದು ಸನ್ಯಾಸ ಆಶ್ರಮವನ್ನು ಪಾಲಿಸುತ್ತಾನೆ. ಅವನು ಶಿವನ ಹಾಗೆಯೆ ಪರಮ ವೈರಾಗಿಯಾಗಿದ್ದಾನೆ.

೯. ಧರ್ಮ ಮತ್ತು ಮೋಕ್ಷ ಈ ಪುರುಷಾರ್ಥಗಳ ದಾತಾ ಆಗಿದ್ದಾನೆ

ಹನುಮಂತನು ದಾಸ್ಯಭಕ್ತಿ ಮಾಡುತ್ತಾ ಸೇವಕ ಧರ್ಮವನ್ನು ಆಚರಣೆ ಮಾಡುತ್ತಾನೆ. ಅವನು ಜೀವನ್ಮುಕ್ತನಾಗಿದ್ದು ಮೋಕ್ಷಪ್ರಾಪ್ತಿ ಮಾಡಿದ್ದಾನೆ. ಅವನ ಉಪಾಸನೆಯಿಂದ ಭಕ್ತರಿಗೆ ಧರ್ಮಶಕ್ತಿ ಪ್ರಾಪ್ತಿಯಾಗುತ್ತದೆ ಹಾಗೂ ಮೋಕ್ಷ ಸಿಗುತ್ತದೆ; ಏಕೆಂದರೆ ಅವನು ಧರ್ಮ ಮತ್ತು ಮೋಕ್ಷ ಈ ಪುರುಷಾರ್ಥಗಳ ದಾತಾ ಆಗಿದ್ದಾನೆ.

– ಸುಶ್ರೀ (ಕು.) ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫), ಸನಾತನ ಆಶ್ರಮ, ರಾಮನಾಥಿ ಗೋವಾ.