ಮುಸ್ಲಿಂ ಮಹಿಳೆಯರ ನಮಾಜ್ ವೇಳೆ ಬಿಜೆಪಿ ನಾಯಕಿ ದುರ್ಗಾ ಸೂಕ್ತಂ ಪಠಣ: ಮುಸ್ಲಿಂ ಸಮುದಾಯ ಆಕ್ರೋಶ

ದೆಹಲಿ ವಿಮಾನ ನಿಲ್ದಾಣದ ಪ್ರಾರ್ಥನಾ ಮಂದಿರದಲ್ಲಿನ ಘಟನೆ

ನವದೆಹಲಿ – ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋವೊಂದರಲ್ಲಿ, ತೆಲಂಗಾಣದ ಬಿಜೆಪಿ ನಾಯಕಿ ಮಾಧವಿ ಲತಾ ಅವರು ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾರ್ಥನಾ ಮಂದಿರದಲ್ಲಿ ಶಾಂತಿಯುತವಾಗಿ ‘ದುರ್ಗಾ ಸೂಕ್ತಂ’ ಪಠಿಸುತ್ತಿರುವುದು ಕಂಡುಬಂದಿದೆ. ಅದೇ ವಿಡಿಯೋದಲ್ಲಿ ಕೆಲವು ಮುಸ್ಲಿಂ ಮಹಿಳೆಯರು ನಮಾಜ್ ಮಾಡುತ್ತಿರುವುದೂ ಕಾಣಿಸುತ್ತಿದೆ.

ಈ ವಿಡಿಯೋ ಕುರಿತು ಮುಸ್ಲಿಮರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ‘ಬಿಜೆಪಿ ನಾಯಕಿಯರು ದುರ್ಗಾ ಸೂಕ್ತಂ ಪಠಿಸುವ ಮೂಲಕ ಮುಸ್ಲಿಮರಿಗೆ ಕಿರುಕುಳ ನೀಡುತ್ತಿದ್ದಾರೆ’ ಎಂಬುದು ಅವರ ವಾದವಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು, “ಪ್ರಾರ್ಥನಾ ಮಂದಿರವು ಎಲ್ಲಾ ಧರ್ಮದವರಿಗೂ ಮುಕ್ತವಾಗಿರುತ್ತದೆ. ಒಂದು ಕಡೆ ನಮಾಜ್ ಮತ್ತು ಇನ್ನೊಂದು ಕಡೆ ದುರ್ಗಾ ಸೂಕ್ತಂ ಪಠಿಸುವುದರಲ್ಲಿ ತೊಂದರೆಯಾದರೂ ಏನು?” ಎಂದು ಪ್ರಶ್ನಿಸುತ್ತಿದ್ದಾರೆ.

ವಕೀಲ ವಿನೀತ್ ಜಿಂದಾಲ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, “ರಸ್ತೆಯಲ್ಲಿ ಅಕ್ರಮವಾಗಿ ನಮಾಜ್ ಮಾಡಿದಾಗ ಯಾವುದೇ ಪ್ರಶ್ನೆ ಉದ್ಭವಿಸುವುದಿಲ್ಲ; ಆದರೆ ನಿಗದಿಪಡಿಸಿದ ಸ್ಥಳದಲ್ಲಿ ಹಿಂದೂಗಳು ಪೂಜೆ ಮಾಡಿದರೆ ಆಕ್ಷೇಪ ವ್ಯಕ್ತಪಡಿಸಲಾಗುತ್ತದೆ ಮತ್ತು ತಮ್ಮನ್ನು ತಾವು ಸಂತ್ರಸ್ತರೆಂದು ತೋರಿಸಿಕೊಳ್ಳಲು ಪ್ರಯತ್ನಿಸಲಾಗುತ್ತದೆ,” ಎಂದು ಟೀಕಿಸಿದ್ದಾರೆ.

ಸಂಪಾದಕೀಯ ನಿಲುವು

ವಿಮಾನ ನಿಲ್ದಾಣಗಳಲ್ಲಿನ ಪ್ರಾರ್ಥನಾ ಮಂದಿರಗಳು ಎಲ್ಲಾ ಧರ್ಮದವರಿಗೂ ಮುಕ್ತವಾಗಿವೆ. ಮುಸ್ಲಿಮರು ನಮಾಜ್ ಮಾಡಿದಂತೆ, ಹಿಂದೂಗಳು ತಮ್ಮ ಧರ್ಮದ ಪ್ರಾರ್ಥನೆಗಳನ್ನು ಮಾಡಬಹುದು. ಇದಕ್ಕೂ ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸುವುದಾದರೆ, ಅವರನ್ನು ಪಾಕಿಸ್ತಾನಕ್ಕೆ ಕಳುಹಿಸುವ ಸಮಯ ಬಂದಿದೆ!