‘ಮಹರ್ಷಿಗಳ ಆಜ್ಞೆಗನುಸಾರ ರಾಮನಾಥಿಯ ಸನಾತನ ಆಶ್ರಮದಲ್ಲಿ ೨೩ ರಿಂದ ೨೭ ಎಪ್ರಿಲ್ ೨೦೨೧ ರಲ್ಲಿ ‘ಸೇತುರಕ್ಷಕ ಶ್ರೀ ಹನುಮಾನ ಪ್ರತಿಷ್ಠಾಪನಾ ವಿಧಿ’ ನಡೆಯಿತು. ಈ ವಿಧಿಯ ಅಂತರ್ಗತ ಅನೇಕ ಉಪವಿಧಿಗಳನ್ನೂ ಮಾಡಲಾಯಿತು. ದೇವರ ಕೃಪೆಯಿಂದ ಅವುಗಳ ಸೂಕ್ಷ್ಮ ಪರೀಕ್ಷಣೆ ಮಾಡಿದಾಗ ಅರಿವಾದ ಅಂಶಗಳು ಮತ್ತು ಅವುಗಳಲ್ಲಿನ ಕೆಲವು ವಿಧಿಗಳ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇವೆ.

೧. ದಿನಾಂಕ ೨೫.೪.೨೦೨೧ ರಂದು ಸಂಪನ್ನವಾದ ವಿಧಿ
ವಾಸ್ತುಹೋಮ ಮತ್ತು ಅದರ ಲಾಭ : ವಾಸ್ತುಹೋಮದಿಂದ ವಾಸ್ತುಪುರುಷನು ಸಂತುಷ್ಟನಾಗಿ ಆಶೀರ್ವಾದ ನೀಡುತ್ತಾನೆ. ಆದ್ದರಿಂದ ವಾಸ್ತುವಿನಲ್ಲಿರುವ ಜೀವಗಳ ಐಹಿಕ ಹಾಗೂ ಪಾರಮಾರ್ಥಿಕ ದೃಷ್ಟಿಯಲ್ಲಿ ಕಲ್ಯಾಣವಾಗುತ್ತದೆ. ರಾಮನಾಥಿಯ ಸನಾತನ ಆಶ್ರಮದ ವಾಸ್ತುದೇವತೆಯನ್ನು ಉದ್ದೇಶಿಸಿ ಮಾಡಿದ ಹೋಮದಿಂದ ವಾಸ್ತುದೇವತೆ ಸಂತುಷ್ಟರಾದರು ಮತ್ತು ಅವರು ಸಾಧಕರ ವ್ಯಷ್ಟಿ ಹಾಗೂ ಸಮಷ್ಟಿ ಸಾಧನೆಗಾಗಿ ಆಶೀರ್ವಾದ ನೀಡಿದರÀÄ. ಅದರಿಂದ ರಾಮನಾಥಿಯ ವಾಸ್ತುವಿನ ಕಡೆಗೆ ಬ್ರಹ್ಮಾಂಡದಲ್ಲಿನ ವಿವಿಧ ದೇವತೆಗಳ ತತ್ತ್ವಲಹರಿಗಳು ಹಾಗೂ ನಿರ್ಗುಣ-ಸಗುಣ ಸ್ತರದಲ್ಲಿನ ಚೈತನ್ಯ ಲಹರಿಗಳು ಆಕರ್ಷಿಸತೊಡಗಿದವು. ಆಶ್ರಮದ ಪರಿಸರದಲ್ಲಿನ ವಿವಿಧ ದೇವತೆಗಳ ಮಂದಿರಗಳಲ್ಲಿನ ದೇವತೆಗಳು ವಾಸ್ತುದೇವತೆಗೆ ಸಹಾಯ ಮಾಡಲು ದೇವತೆಗಳ ತತ್ತ್ವಲಹರಿ ಮತ್ತು ನಿರ್ಗುಣ-ಸಗುಣ ಸ್ತರದಲ್ಲಿನ ಚೈತನ್ಯ ಲಹರಿಗಳನ್ನು ಸಗುಣ ಲಹರಿಗೆ ರೂಪಾಂತರಗೊಳಿಸಿದವು. ಆದುದರಿಂದ ವಾಸ್ತುದೇವತೆಗೆ ದೇವತೆಗಳ ತತ್ತ್ವಲಹರಿ ಮತ್ತು ಚೈತನ್ಯ ಲಹರಿಗಳನ್ನು ಸಹಜವಾಗಿ ಗ್ರಹಣ ಮಾಡಲು ಸಾಧ್ಯವಾಯಿತು. ಆದ್ದರಿಂದ ವಾಸ್ತು ಚೈತನ್ಯದಿಂದ ತುಂಬಿತು. ಅದೇ ರೀತಿ ಆಶ್ರಮದ ವಾಸ್ತುವಿನ ಸುತ್ತಲಿನ ವಾಯುಮಂಡಲದಲ್ಲಿ ದೇವತೆಗಳ ತತ್ತ್ವಲಹರಿ ಹಾಗೂ ನಿರ್ಗುಣ-ಸಗುಣ ಸ್ತರದ ಚೈತನ್ಯ ಲಹರಿಯ ಹೊದಿಕೆ ತಯಾರಾದ ಕಾರಣ ಸಾಧಕರ ಶ್ವಾಸದ ಮೂಲಕ ಈ ಚೈತನ್ಯ ಅವರ ಸ್ಥೂಲ ಮತ್ತು ಸೂಕ್ಷ್ಮ ದೇಹಗಳಲ್ಲಿ ಹರಡುತ್ತದೆ. ಆದ್ದರಿಂದ ಸಾಧಕರಿಗೆ ಈ ಚೈತನ್ಯದಾಯಕ ವಾತಾವರಣದ ಲಾಭವಾಗಿ ಅವರ ಸಾಧನೆ ಚೆನ್ನಾಗಿ ನಡೆಯುತ್ತದೆ.
೨. ೨೭.೪.೨೦೨೧ ರಂದು ಸಂಪನ್ನವಾದ ವಿಧಿ
೨ ಅ. ಷೋಡಶೋಪಚಾರಗಳ ಸಮಯದಲ್ಲಿ ಸೂಕ್ಷ್ಮದಿಂದ ಘಟಿಸುವ ಪ್ರಕ್ರಿಯೆ

ಕೃತಜ್ಞತೆಗಳು
ಭಗವಂತನ ಕೃಪೆಯಿಂದ ನನಗೆ ಶ್ರೀ ಹನುಮಂತನ ಮೂರ್ತಿಯ ಪ್ರತಿಷ್ಠಾಪನೆ ವಿಧಿಯ ಸೂಕ್ಷ್ಮ ಪರೀಕ್ಷಣೆ ಮಾಡುವ ಸೇವೆ ಸಿಕ್ಕಿತು ಹಾಗೂ ಅವನೇ ಈ ಸೇವೆಯನ್ನು ನನ್ನಿಂದ ಮಾಡಿಸಿಕೊಂಡನು. ಈ ಸೇವೆಯ ಮೂಲಕ ನನಗೆ ತುಂಬಾ ಹೊಸ ಅಂಶಗಳು ಕಲಿಯಲು ಹಾಗೂ ಅನುಭವಿಸಲು ಸಿಕ್ಕಿದವು’, ಅದಕ್ಕಾಗಿ ನಾನು ಭಗವಂತನ ಚರಣಗಳಿಗೆ ಕೃಜ್ಞತೆಯನ್ನು ಸಲ್ಲಿಸುತ್ತಿದ್ದೇನೆ.’ – ಸುಶ್ರೀ (ಕು.) ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫) (ಸೂಕ್ಷ್ಮದಿಂದ ಸಿಕ್ಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹಣೆಯಲ್ಲಿ ಮೂಡಿದ ಕಮಲವು ಸ್ಪಷ್ಟವಾಗಿ ಕಾಣುವುದರ ಕಾರಣವೇನು !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !