ಉತ್ತರ ಪ್ರದೇಶ: ಗೋಶಾಲೆ ನಡೆಸುತ್ತಿದ್ದ ಸಂತರಿಗೆ 28 ಲಕ್ಷ ರೂಪಾಯಿ ವಂಚನೆ!

ವಂಚಕ ಜಾಲದ ಮುಖ್ಯಸ್ಥ ಹಶೀಮ್, ಕಳೆದ 8 ವರ್ಷಗಳಿಂದ ಸಂತರ ಜೊತೆಗೇ ಗೋಶಾಲೆಯಲ್ಲಿ ಕೆಲಸ ಮಾಡುತ್ತಿದ್ದ!

ಮುಜಫರ್‌ನಗರ (ಉತ್ತರ ಪ್ರದೇಶ) – ಜಿಲ್ಲೆಯ ಗಂಗಾನದಿಯ ದಡದಲ್ಲಿರುವ ಪವಿತ್ರ ತೀರ್ಥಕ್ಷೇತ್ರ ಶುಕತೀರ್ಥದ ನಿರ್ಮೋಹಿ ಅಖಾಡ ಆಶ್ರಮದಲ್ಲಿ ವಾಸವಿರುವ ಸಂತ ವಿಷ್ಣುದಾಸ್ ಅವರು ಕಳೆದ ಹಲವು ದಶಕಗಳಿಂದ ಗೋಸೇವೆ ಮಾಡುತ್ತಿದ್ದರು. ಅವರು ದೊಡ್ಡದೊಂದು ಗೋಶಾಲೆಯನ್ನು ನಿರ್ಮಿಸಲು ಯೋಜಿಸಿದ್ದರು ಮತ್ತು ಅದಕ್ಕಾಗಿ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಿದ್ದರು; ಆದರೆ ಕಳೆದ 8 ವರ್ಷಗಳಿಂದ ಆಶ್ರಮದಲ್ಲಿದ್ದುಕೊಂಡು ಗೋಸೇವೆ ಮಾಡುತ್ತಿದ್ದ ಹಶೀಮ್ ಎಂಬ ವ್ಯಕ್ತಿ ಅವರಿಗೆ ನಂಬಿಕೆ ದ್ರೋಹ ಎಸಗಿದ್ದಾನೆ. ಈತ ಒಂದು ಅಂತರರಾಜ್ಯ ವಂಚಕ ಜಾಲದ ಸಹಾಯದೊಂದಿಗೆ ಸಂತರ ಬಳಿಯಿದ್ದ 28 ಲಕ್ಷದ 50 ಸಾವಿರ ರೂಪಾಯಿಗಳನ್ನು ವಂಚಿಸಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ ಕೇವಲ ಒಂದು ದಿನದೊಳಗೆ ಹಶೀಮ್ ಮತ್ತು ಆತನ ಸಹಚರರನ್ನು ಬಂಧಿಸಲಾಗಿದೆ.

ಘಟನಾವಳಿಗಳ ವಿವರ

೧. ಸಂತ ವಿಷ್ಣುದಾಸರು ಹತ್ರಾಸ್ ಜಿಲ್ಲೆಯ ಬಘನಾ ಗ್ರಾಮದಲ್ಲಿದ್ದ ತಮ್ಮ ಪೂರ್ವಜರ ಭೂಮಿಯನ್ನು ಮಾರಿ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಿದ್ದರು. ಆ ಹಣದಿಂದ ಗೋಶಾಲೆಯನ್ನು ವಿಸ್ತರಿಸುವ ಯೋಜನೆ ಅವರದಾಗಿತ್ತು.

೨. ಸಂತರು ತಮ್ಮ ಸ್ವಂತ ಭೂಮಿಯನ್ನು ಮಾರಿ ಗೋಶಾಲೆ ನಿರ್ಮಿಸುವ ವಿಚಾರ ವ್ಯಕ್ತಪಡಿಸುತ್ತಿದ್ದಂತೆ, ಹಸಿಮ್ ಎಂಬಾತ ಪಿತೂರಿ ನಡೆಸಿದನು.

೩. ಹಸಿಮ್ ನೇತೃತ್ವದ ತಂಡವು ಮೊದಲು ಒಬ್ಬ ನಕಲಿ ಭೂಮಾಲೀಕನನ್ನು ಸೃಷ್ಟಿಸಿತು. ಮುಜಾಫರ್ ಪುರ್ ಜಿಲ್ಲೆಯ ಸಿಕ್ರಿ ನಿವಾಸಿ ‘ನಜೀರ್’ ಎಂದು ಆ ವ್ಯಕ್ತಿಗೆ ಹೆಸರಿಡಲಾಯಿತು. ವಾಸ್ತವವಾಗಿ ಸಿಕ್ರಿಯಲ್ಲಿ ನಜೀರ್ ಹೆಸರಿನ ಯಾವ ವ್ಯಕ್ತಿಯೂ ಇರಲಿಲ್ಲ. ಹರಿದ್ವಾರದ ಅಬ್ದುಲ್ ಖಾದಿರ್ ಎಂಬಾತ ನಜೀರ್ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ತಯಾರಿಸಿದನು. ಅದಕ್ಕೆ ಸುಖವಿಂದರ್ ಎಂಬಾತನ ಭಾವಚಿತ್ರವನ್ನು ಅಂಟಿಸಲಾಯಿತು. ಸುಖವಿಂದರ್ ನಜೀರ್ ಸೋಗಿನಲ್ಲಿ ಸಂತರನ್ನು ಭೇಟಿಯಾದನು.

೪. ತಂಡದ ಸದಸ್ಯರಾದ ದಿಲ್ಶಾದ್ ಮತ್ತು ಫೈಜಾಬ್ ಸಿಕ್ರಿ ಗ್ರಾಮದಲ್ಲಿ ಗೋಶಾಲೆಗಾಗಿ ೪೦ ಗುಂಟೆ ಭೂಮಿ ಇರುವುದಾಗಿ ಸಂತರಿಗೆ ತಿಳಿಸಿದರು. ಇದರ ನಂತರ, ಫೆಬ್ರವರಿ ೧೭ ರಂದು ೨೫ ಲಕ್ಷ ರೂಪಾಯಿ ಮತ್ತು ಫೆಬ್ರವರಿ ೨೭ ರಂದು ಮೂರೂವರೆ ಲಕ್ಷ ರೂಪಾಯಿಗಳನ್ನು ಆಶ್ರಮದಲ್ಲೇ ಹಸಿಮ್ ಮತ್ತು ಆತನ ಸಹಚರರಿಗೆ ಹಸ್ತಾಂತರಿಸಲಾಯಿತು.

೫. ಮರುದಿನ ಸಂತರಿಗೆ ನಕಲಿ ಒಪ್ಪಂದ ಪತ್ರವನ್ನು ನೀಡಲಾಯಿತು. ಈ ಸಮಯದಲ್ಲಿ ರಿತೇಶ್ ಎಂಬ ನಕಲಿ ಅಧಿಕಾರಿಯು ೨೬ ಸಾವಿರ ರೂಪಾಯಿಗಳನ್ನು ಪಡೆದು ದಾಖಲೆಗಳನ್ನು ಸಿದ್ಧಪಡಿಸಿದನು ಮತ್ತು ಸಂತರ ಬಗ್ಗೆ ನಂಬಿಕೆ ಗಳಿಸಲು ಅವರಿಗೆ ವಿಶ್ವಾಸ ಮೂಡಬೇಕು ಎಂದು ಅವರ ಮುಂದೆಯೇ ಭೂಮಿಯನ್ನು ಅಳತೆ ಮಾಡಿದನು.

೬. ೪೦ ಗುಂಟೆ ಭೂಮಿಯನ್ನು ಪರಿಶೀಲಿಸಲು ಸಂತ ವಿಷ್ಣುದಾಸರು ಸಿಕ್ರಿ ಗ್ರಾಮಕ್ಕೆ ಹೋದಾಗ, ಅಲ್ಲಿ ಮೌರಾದ್ ಎಂಬ ವ್ಯಕ್ತಿ ನೀರು ಹಾಯಿಸುತ್ತಿದ್ದನು. “ನಾವು ಈ ಭೂಮಿಯನ್ನು ೧೫ ದಿನಗಳ ಹಿಂದೆಯೇ ಖರೀದಿಸಿ ನೋಂದಣಿ ಮಾಡಿಸಿದ್ದೇವೆ, ಇಲ್ಲಿ ನಜೀರ್ ಎಂಬವರು ಯಾರೂ ವಾಸವಾಗಿಲ್ಲ” ಎಂದು ಆತ ತಿಳಿಸಿದನು. ಇದನ್ನು ಕೇಳಿದ ಕೂಡಲೇ ತಮಗೆ ವಂಚನೆಯಾಗಿರುವುದು ಸಂತರಿಗೆ ಅರಿವಾಯಿತು.

೭. ಅವರು ತಕ್ಷಣವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರು ವಿಶೇಷ ತಂಡವನ್ನು ರಚಿಸಿ ಹಸಿಮ್ ಮತ್ತು ಆತನ ತಂಡಕ್ಕಾಗಿ ಶೋಧ ನಡೆಸಿದರು. ಅವರ ಮೊಬೈಲ್ ಸಂಖ್ಯೆಗಳನ್ನು ಟ್ರ್ಯಾಕ್ ಮಾಡಿದಾಗ, ಸಮೀಪದ ತುಘಲಕ್ ಪುರ್ ರಸ್ತೆಯ ನಿರ್ಜನ ಪ್ರದೇಶದಲ್ಲಿದ್ದ ಕೋಳಿ ಸಾಕಾಣಿಕೆ ಕೇಂದ್ರದ ಬಳಿ ಅವರು ಇರುವುದು ಪತ್ತೆಯಾಯಿತು. ಮಾರ್ಚ್ ೧೯ ರಂದು ಪೊಲೀಸರು ಎಲ್ಲರನ್ನೂ ಸುತ್ತುವರಿದು ಬಂಧಿಸಿದರು. ಈ ಕಾರ್ಯಾಚರಣೆಯಲ್ಲಿ ಮುಖ್ಯ ಸಂಚುಕೋರ ಹಸಿಮ್ ಸೇರಿದಂತೆ ಪ್ರವೀಣ್, ದಿಲ್ಶಾದ್, ಸುಖವಿಂದರ್, ಫೈಜಾಬ್, ರವೀಶ್ ಮತ್ತು ಅಬ್ದುಲ್ ಖಾದಿರ್ ಅವರನ್ನು ಬಂಧಿಸಲಾಯಿತು.

೮. ಪೊಲೀಸರು ನಡೆಸಿದ ದಾಳಿಯಲ್ಲಿ ೨೨ ಲಕ್ಷ ರೂಪಾಯಿ ನಗದು, ನಜೀರ್ ಮತ್ತು ರಿತೇಶ್ ಹೆಸರಿನ ೨ ನಕಲಿ ಆಧಾರ್ ಕಾರ್ಡ್‌ಗಳು, ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್, ನೋಟರಿ ದಾಖಲೆಗಳು, ನಕಲಿ ದಸ್ತಾವೇಜುಗಳ ಪ್ರತಿಗಳು ಮತ್ತು ಕೃತ್ಯಕ್ಕೆ ಬಳಸಿದ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಂಪಾದಕೀಯ ನಿಲುವು

ಇಂತಹ ಘಟನೆಗಳನ್ನು ಗಮನಿಸಿ, ಒಂದು ವೇಳೆ ಹಿಂದೂಗಳು ಅಲ್ಪಸಂಖ್ಯಾತ ಮುಸಲ್ಮಾನರನ್ನು ಕೆಲಸಕ್ಕೆ ಇರಿಸಿಕೊಳ್ಳಲು ವಿರೋಧಿಸಲು ಆರಂಭಿಸಿದರೆ, ಅದರಲ್ಲಿ ತಪ್ಪೇನಿದೆ?