ನಷ್ಟ ಪರಿಹಾರ ಮತ್ತು ಭವಿಷ್ಯದಲ್ಲಿ ದಾಳಿ ಮಾಡದಂತೆ ಇರಾನ್ ಭರವಸೆಯ ಷರತ್ತು

ನವದೆಹಲಿ: ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದ 24ನೇ ದಿನದಂದು ಅಮೆರಿಕ ಕದನ ವಿರಾಮದ ಪ್ರಯತ್ನಗಳನ್ನು ಆರಂಭಿಸಿದೆ; ಆದರೆ ಇರಾನ್ ಇದಕ್ಕೆ ಕೆಲವು ಷರತ್ತುಗಳನ್ನು ವಿಧಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆಗೆ ಸಿದ್ಧರಿದ್ದಾರೆ ಎಂದು ವರದಿಯಾಗಿದೆ. ಟ್ರಂಪ್ ಅವರ ಸಲಹೆಗಾರರಾದ ಜೇರೆಡ್ ಕುಶ್ನರ್ ಮತ್ತು ಸ್ಟೀವ್ ವಿಟ್ಕೋಫ್ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ.
ಇರಾನ್ ಮಾತುಕತೆಗಾಗಿ ಕೆಲವು ಪ್ರಮುಖ ಬೇಡಿಕೆಗಳನ್ನು ಇಟ್ಟಿದೆ. ಯುದ್ಧವನ್ನು ನಿಲ್ಲಿಸುವುದು ಮತ್ತು ಆದ ನಷ್ಟಕ್ಕೆ ಪರಿಹಾರ ನೀಡುವುದರ ಜೊತೆಗೆ, ‘ಭವಿಷ್ಯದಲ್ಲಿ ಮತ್ತೆ ದಾಳಿ ನಡೆಯುವುದಿಲ್ಲ’ ಎಂಬ ಬಗ್ಗೆ ಬಲವಾದ ಖಾತರಿಯನ್ನು ಇರಾನ್ ಒತ್ತಾಯಿಸಿದೆ.
ಈ ಬೇಡಿಕೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್, ಇರಾನ್‌ನ ಎಲ್ಲಾ ಷರತ್ತುಗಳನ್ನು, ಅದರಲ್ಲೂ ವಿಶೇಷವಾಗಿ ನಷ್ಟ ಪರಿಹಾರದ ಬೇಡಿಕೆಯನ್ನು ಒಪ್ಪಲು ತಾವು ಇನ್ನೂ ಸಿದ್ಧರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಅಮೆರಿಕ ಮತ್ತು ಇರಾನ್ ನಡುವೆ ನೇರ ಮಾತುಕತೆ ನಡೆಯುತ್ತಿಲ್ಲ; ಬದಲಾಗಿ ಈಜಿಪ್ಟ್, ಕತಾರ್ ಮತ್ತು ಬ್ರಿಟನ್ ದೇಶಗಳು ಮಧ್ಯಸ್ಥಿಕೆ ವಹಿಸುತ್ತಿವೆ.
ಅಮೆರಿಕದ ನಿರೀಕ್ಷೆಗಳೆಂದರೆ: ಇರಾನ್ ತನ್ನ ಕ್ಷಿಪಣಿ ಉತ್ಪಾದನಾ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು, ಯುರೇನಿಯಂ ಪುಷ್ಟೀಕರಣವನ್ನು ಸ್ಥಗಿತಗೊಳಿಸಬೇಕು ಮತ್ತು ತನ್ನ ಪರಮಾಣು ಕೇಂದ್ರಗಳನ್ನು ನಾಶಪಡಿಸಬೇಕು. ಇದಲ್ಲದೆ, ಹಿಜ್ಬುಲ್ಲಾ ಮತ್ತು ಹಮಾಸ್‌ನಂತಹ ಭಯೋತ್ಪಾದಕ ಸಂಘಟನೆಗಳಿಗೆ ನೀಡುತ್ತಿರುವ ಧನ ಸಹಾಯವನ್ನು ನಿಲ್ಲಿಸಬೇಕೆಂದು ಅಮೆರಿಕ ಬಯಸಿದೆ.
ಶಕ್ತಿಯಿಂದಲೇ ಶಾಂತಿ ಸಾಧ್ಯ! – ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ಮಹತ್ವದ ಹೇಳಿಕೆ ನೀಡಿದ್ದಾರೆ. “ಶಕ್ತಿಯಿಂದಲೇ ಶಾಂತಿ ಬರುತ್ತದೆ” ಎಂದು ಹೇಳುವ ಮೂಲಕ ಅವರು ಇರಾನ್‌ಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಅವರ ಈ ಹೇಳಿಕೆಯಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಯುದ್ಧದಿಂದ ಜಾಗತಿಕ ಅರ್ಥವ್ಯವಸ್ಥೆಗೆ ಸಂಚಕಾರ
ಅಂತರಾಷ್ಟ್ರೀಯ ಇಂಧನ ಸಂಸ್ಥೆಯ ಮುಖ್ಯಸ್ಥ ಫಾತಿಹ್ ಬಿರೋಲ್ ಅವರು ಇರಾನ್ ಯುದ್ಧವು ಜಾಗತಿಕ ಆರ್ಥಿಕತೆಗೆ ದೊಡ್ಡ ಅಪಾಯ ಎಂದು ಕರೆದಿದ್ದಾರೆ. ಪ್ರಸ್ತುತ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ ಅವರು, ಒಂದೇ ಸಮಯದಲ್ಲಿ ಹಲವಾರು ತೈಲ ಮತ್ತು ಅನಿಲ ಬಿಕ್ಕಟ್ಟುಗಳು ಉದ್ಭವಿಸಿದಂತಿದೆ ಎಂದಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ವಿಶ್ವದ ಯಾವುದೇ ದೇಶವು ಇದರಿಂದ ಪಾರಾಗಲು ಸಾಧ್ಯವಿಲ್ಲ. ಈ ಸಂಘರ್ಷದಲ್ಲಿ ಅನೇಕ ತೈಲ ಮತ್ತು ಅನಿಲ ಯೋಜನೆಗಳ ಮೇಲೆ ದಾಳಿಗಳು ನಡೆದಿದ್ದು, ಇದು ಪೂರೈಕೆಯ ಮೇಲೆ ಪರಿಣಾಮ ಬೀರಿದೆ.
ಇರಾನ್‌ನ ಹಲವು ನಗರಗಳಲ್ಲಿ ಅಮೆರಿಕ ವಿರೋಧಿ ಪ್ರತಿಭಟನೆ
‘ಫಾರ್ಸ್’ ಸುದ್ದಿ ಸಂಸ್ಥೆಯ ಪ್ರಕಾರ, ಇರಾನ್‌ನ ಅನೇಕ ನಗರಗಳಲ್ಲಿ ಜನರು ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಬೀದಿಗಿಳಿದಿದ್ದಾರೆ. ಮಾರ್ಚ್ 22 ರಂದು ಕೆರ್ಮನ್ ನಗರದಲ್ಲಿ ಜನರು ದೇಶದ ನೂತನ ಸರ್ವೋಚ್ಚ ಧಾರ್ಮಿಕ ನಾಯಕ ಮೊಜ್ತಬಾ ಖಮೇನಿ ಅವರ ಭಾವಚಿತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ದಕ್ಷಿಣ ಖೊರಾಸನ್, ಉರ್ಮಿಯಾ ಮತ್ತು ಅರ್ದಾಬಿಲ್ ನಗರಗಳಲ್ಲೂ ಇಂತಹದ್ದೇ ಪ್ರತಿಭಟನೆಗಳನ್ನು ಆಯೋಜಿಸಲಾಗಿತ್ತು.
ಇರಾನ್ ಯುದ್ಧಕ್ಕೆ ಟ್ರಂಪ್ ಅವರೇ ಹೊಣೆ ! – ಸಿಐಎ ಮಾಜಿ ನಿರ್ದೇಶಕ

ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಮತ್ತು ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (ಸಿಐಎ) ಮಾಜಿ ನಿರ್ದೇಶಕ ಲಿಯಾನ್ ಪ್ಯಾನೆಟ್ಟಾ ಅವರು ಹೀಗೆ ಹೇಳಿದ್ದಾರೆ:
1.ಮಧ್ಯಪ್ರಾಚ್ಯದ ಬಿಕ್ಕಟ್ಟು ಪ್ರಮುಖವಾಗಿ ಟ್ರಂಪ್ ಅವರು ಸ್ವತಃ ಸೃಷ್ಟಿಸಿಕೊಂಡಿದ್ದಾಗಿದೆ. ಈ ಅಪಾಯವು ಅನಿರೀಕ್ಷಿತವಾದುದೇನೂ ಆಗಿರಲಿಲ್ಲ.
2.ಇರಾನ್ ‘ಹಾರ್ಮುಜ್ ಜಲಸಂಧಿ’ಯನ್ನು ಬಂದ್ ಮಾಡುವ ಮೂಲಕ ಜಾಗತಿಕ ತೈಲ ಪೂರೈಕೆಗೆ ಅಡ್ಡಿಪಡಿಸಬಹುದೆಂಬ ಕಲ್ಪನೆ ಅಮೆರಿಕದ ಭದ್ರತಾ ಅಧಿಕಾರಿಗಳಿಗೆ ಕಳೆದ ಹಲವು ವರ್ಷಗಳಿಂದ ಇತ್ತು. ಇದು ಎಲ್ಲರಿಗೂ ತಿಳಿದಿರುವ ಅಪಾಯವಾಗಿತ್ತು; ಆದರೆ ಈ ಹಿಂದೆ ಪದೇ-ಪದೇ ಎಚ್ಚರಿಕೆ ನೀಡಿದ್ದರೂ, ಪ್ರಸ್ತುತ ನಡೆಯುತ್ತಿರುವ ಸಂಘರ್ಷದಲ್ಲಿ ಇದನ್ನು ನಿರ್ಲಕ್ಷಿಸಲಾಗಿದೆ ಎಂದು ಕಂಡುಬರುತ್ತಿದೆ.
3.‘ನೀವು ಇರಾನ್ ವಿರುದ್ಧ ಯುದ್ಧ ಮಾಡುವುದಾದರೆ, ಹಾರ್ಮುಜ್ ಜಲಸಂಧಿಯು ಅತ್ಯಂತ ದೊಡ್ಡ ದುರ್ಬಲ ಅಂಶಗಳಲ್ಲಿ ಒಂದಾಗಿದೆ’ ಎಂಬುದನ್ನು ಅರ್ಥಮಾಡಿಕೊಳ್ಳುವುದು ಯಾವುದೇ ರಹಸ್ಯದ ವಿಷಯವಲ್ಲ.
4.ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ ಸಿದ್ಧತೆಯ ಕೊರತೆ ಎದ್ದು ಕಾಣುತ್ತಿದೆ. ಒಂದು ವೇಳೆ ಆಡಳಿತವು ಇರಾನ್‌ನ ಪ್ರತಿದಾಳಿಯನ್ನು ಕಡಿಮೆ ಅಂದಾಜಿಸಿರಬಹುದು ಅಥವಾ ‘ಸಂಘರ್ಷವು ಬೇಗನೆ ಕೊನೆಗೊಳ್ಳುತ್ತದೆ’ ಎಂದು ಭಾವಿಸಿರಬಹುದು. ಅವರು ಇದಕ್ಕೆ ಸಿದ್ಧರಾಗಿರಲಿಲ್ಲ ಮತ್ತು ಈಗ ಅದರ ಬೆಲೆ ಕಟ್ಟುತ್ತಿದ್ದಾರೆ. ಈ ಯುದ್ಧದ ಪರಿಣಾಮಗಳು ಕೇವಲ ಆ ಪ್ರದೇಶಕ್ಕೆ ಸೀಮಿತವಾಗಿರದೆ ಇಡೀ ಜಾಗತಿಕ ಮಾರುಕಟ್ಟೆಗಳ ಮೇಲೆ ಕಂಡುಬರುತ್ತಿವೆ.
5.. ಈ ಕಾರ್ಯಾಚರಣೆಯಲ್ಲಿ ಅಮೆರಿಕ ನಿರೀಕ್ಷಿಸಿದಂತೆ ಇರಾನ್ ದುರ್ಬಲಗೊಳ್ಳಲಿಲ್ಲ. ಬದಲಾಗಿ, ಇರಾನ್‌ನ ನಾಯಕತ್ವವು ಮತ್ತಷ್ಟು ಬಲಗೊಂಡಿದೆ ಮತ್ತು ಈಗ ಮೊಜ್ತಬಾ ಖಮೇನಿ ಅವರಂತಹ ಹೆಚ್ಚು ಮೂಲಭೂತವಾದಿ ಮುಖವು ಅಧಿಕಾರಕ್ಕೆ ಬಂದಿದೆ.
6. ಯಾವುದೇ ಆಯ್ಕೆಯನ್ನು ಆರಿಸಿಕೊಂಡರೂ, ಅದು ಗಂಭೀರ ಪರಿಣಾಮಗಳಿಂದ ಮುಕ್ತವಾಗಿರುವುದಿಲ್ಲ. ಇದರಿಂದ ಹಿಂದೆ ಸರಿಯುವುದು ವೈಫಲ್ಯವೆಂದು ಪರಿಗಣಿಸಲ್ಪಟ್ಟರೆ, ಮತ್ತೊಂದೆಡೆ ಯುದ್ಧವನ್ನು ವಿಸ್ತರಿಸುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವ ಅಪಾಯವನ್ನು ಹೊಂದಿದೆ.
7.ನೀವು ಯುದ್ಧದ ಯೋಜನೆಯನ್ನು ರೂಪಿಸುತ್ತಿದ್ದರೆ, ನಿಮ್ಮ ಮಿತ್ರರಾಷ್ಟ್ರಗಳೊಂದಿಗೆ ಚರ್ಚಿಸುವುದು ಕೆಟ್ಟ ವಿಷಯವೇನಲ್ಲ.
ಶೇ. ೫೯% ರಷ್ಟು ಅಮೆರಿಕನ್ ನಾಗರಿಕರು ಆಕ್ರಮಣದ ವಿರುದ್ಧ
ಇರಾನ್ ವಿರುದ್ಧದ ಯುದ್ಧವು ಈಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಇದರಿಂದಾಗಿ ಅಮೆರಿಕದಲ್ಲಿ ಟ್ರಂಪ್ ಅವರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಇಂಧನ ಬೆಲೆ ಏರಿಕೆ ಮತ್ತು ‘ಯುದ್ಧ ಯಾವಾಗ ಕೊನೆಗೊಳ್ಳುತ್ತದೆ?’ ಎಂಬ ಅನಿಶ್ಚಿತತೆಯಿಂದಾಗಿ, ಅನೇಕ ಅಮೆರಿಕನ್ನರು ಈ ವಿಷಯದಲ್ಲಿ ಟ್ರಂಪ್ ಅವರಿಗೆ ನೀಡಿದ ಬೆಂಬಲದ ಬಗ್ಗೆ ಮರುಚಿಂತನೆ ನಡೆಸುತ್ತಿದ್ದಾರೆ. ‘ರಾಯಿಟರ್ಸ್’ ಸುದ್ದಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಶೇ. ೫೯% ರಷ್ಟು ಅಮೆರಿಕನ್ ನಾಗರಿಕರು ಇರಾನ್ ಮೇಲಿನ ಅಮೆರಿಕದ ಆಕ್ರಮಣವನ್ನು ವಿರೋಧಿಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation