‘ವಾಟ್ಸಪ್’ಗೆ ಕೇಂದ್ರ ಸರಕಾರದ ಆದೇಶ

ನವ ದೆಹಲಿ – ದೇಶಾದ್ಯಂತ ಕಳೆದ ಕೆಲವು ವರ್ಷಗಳಿಂದ ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ದೊಡ್ಡ ಪ್ರಮಾಣದ ಆರ್ಥಿಕ ವಂಚನೆಯ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಗೃಹ ಸಚಿವಾಲಯದ ಅಡಿಯಲ್ಲಿ ಬರುವ ‘ಇಂಡಿಯನ್ ಸೈಬರ್ ಕ್ರೈಮ್ ಕಾರ್ಡಿನೇಷನ್ ಸೆಂಟರ್’ ಕೇಂದ್ರ ಸರಕಾರಕ್ಕೆ ವರದಿಯೊಂದನ್ನು ಸಲ್ಲಿಸಿದೆ. ಈ ವರದಿಯ ಆಧಾರದ ಮೇಲೆ ಸರಕಾರವು ‘ವಾಟ್ಸಪ್’ಗೆ ನೇರ ಆದೇಶ ನೀಡಿದೆ. ಈ ವಂಚನೆಗಳಲ್ಲಿ ಬಳಸಲಾಗುವ ಮೊಬೈಲ್ ಫೋನ್ ಗಳನ್ನು ‘ವಾಟ್ಸಪ್’ನಿಂದ ಶಾಶ್ವತವಾಗಿ ‘ಬ್ಲಾಕ್’ ಮಾಡಲಾಗುತ್ತದೆ.
🚨 Big Move to Crush ‘Digital Arrest’ Scams
The Central Government has issued fresh directions to WhatsApp to tackle rising cyber frauds 👇
🔹 Fraudsters use new SIMs on the same device
🔹 Now, the entire handset used in scams may be banned
🛑 A strong step to break the cycle… pic.twitter.com/IJkPAKawt8
— Sanatan Prabhat (@SanatanPrabhat) March 21, 2026
ಸೈಬರ್ ಅಪರಾಧಿಗಳು ಪದೇ ಪದೇ ಹೊಸ ‘ಸಿಮ್ ಕಾರ್ಡ್’ ಬಳಸಿ ಅಥವಾ ನಕಲಿ ಖಾತೆ ಸೃಷ್ಟಿಸಿ ಜನರನ್ನು ವಂಚಿಸುತ್ತಾರೆ. ‘ವಾಟ್ಸಪ್’ನಿಂದ ಯಾವುದಾದರೊಂದು ಸಂಖ್ಯೆಯನ್ನು ಬಂದ್ ಮಾಡಿದರೂ, ಅದೇ ಮೊಬೈಲ್ ನಲ್ಲಿ ಹೊಸ ‘ಸಿಮ್ ಕಾರ್ಡ್’ ಮೂಲಕ ಇನ್ನೊಂದು ಖಾತೆಯನ್ನು ತೆರೆಯಲಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರವಾಗಿ ಸರಕಾರವು ಈಗ ನೇರವಾಗಿ ‘ಡಿವೈಸ್’ (ಉಪಕರಣ) ಮೇಲೆಯೇ ನಿಷೇಧ ಹೇರಲು ನಿರ್ಧರಿಸಿದೆ. ಇದರಿಂದ ಆ ಉಪಕರಣದ ಮೂಲಕ ಕನಿಷ್ಠ ವಾಟ್ಸಪ್ ನಿಂದಲಾದರೂ ಜನರನ್ನು ವಂಚಿಸಲು ಸಾಧ್ಯವಾಗುವುದಿಲ್ಲ. (ಸರಕಾರವು ಆ ಸಂಬಂಧಿತ ಮೊಬೈಲ್ ನಲ್ಲಿ ಎಲ್ಲ ‘ಆಪ್’ಗಳು ಹೇಗೆ ನಿಷ್ಕ್ರಿಯಗೊಳ್ಳುತ್ತವೆ ಎಂಬುದನ್ನು ನೋಡಿ ಆಯಾ ‘ಆಪ್’ ಗಳ ತಯಾರಕರಿಗೂ ಇಂತಹ ಆದೇಶ ನೀಡಬೇಕು. ಇಲ್ಲದಿದ್ದರೆ ನಾಳೆ ಇದೇ ಅಪರಾಧಿಗಳು ಅದೇ ಮೊಬೈಲ್ ನಿಂದ ‘ಟೆಲಿಗ್ರಾಮ್’, ‘ವೈಬರ್’ ಮುಂತಾದ ಆಪ್ ಗಳನ್ನು ಬಳಸಿ ಜನರನ್ನು ವಂಚಿಸಲು ಹಿಂದೆಮುಂದೆ ನೋಡುವುದಿಲ್ಲ! – ಸಂಪಾದಕರು)
‘ಡಿಜಿಟಲ್ ಅರೆಸ್ಟ್’ ಎಂದರೆ ಏನು?‘ಡಿಜಿಟಲ್ ಅರೆಸ್ಟ್’ ಎನ್ನುವುದು ವಂಚನೆಯ ಒಂದು ಆಧುನಿಕ ರೂಪವಾಗಿದೆ. ಸಂತ್ರಸ್ತ ವ್ಯಕ್ತಿಗೆ ಸೈಬರ್ ಅಪರಾಧಿಗಳ ತಂಡವು ತಾವು ಪೊಲೀಸ್, ಜಾರಿ ನಿರ್ದೇಶನಾಲಯ (ಇ.ಡಿ.), ಸಿಬಿಐ, ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಅಥವಾ ಸೇನಾ ಅಧಿಕಾರಿಗಳೆಂದು ಸುಳ್ಳು ಹೇಳುತ್ತಾರೆ. ಆ ವ್ಯಕ್ತಿಯು ದೇಶವಿರೋಧಿ ಕೃತ್ಯ ಎಸಗಿದ್ದಾನೆ, ಉದಾಹರಣೆಗೆ ಅಕ್ರಮ ವಸ್ತುಗಳು – ಮಾದಕ ದ್ರವ್ಯ ಅಥವಾ ನಕಲಿ ಪಾಸ್‌ಪೋರ್ಟ್ ಇಟ್ಟುಕೊಂಡಿದ್ದಾನೆ, ಭಯೋತ್ಪಾದಕರೊಂದಿಗೆ ಆರ್ಥಿಕ ವ್ಯವಹಾರ ಮಾಡಿದ್ದಾನೆ ಎಂದು ನಂಬಿಸಿ, ಆತನನ್ನು ವಿಡಿಯೋ ಕಾಲ್ ಮೂಲಕ ಸ್ವಂತ ಮನೆಯಲ್ಲೇ ಬಂಧಿಯಾಗಿರುವಂತೆ ಬೆದರಿಸಲಾಗುತ್ತದೆ ಮತ್ತು ನಿರ್ದಿಷ್ಟ ಅವಧಿಯಲ್ಲಿ ನಿರ್ದಿಷ್ಟ ಹಣವನ್ನು ಆನ್‌ಲೈನ್ ಮೂಲಕ ಕಳುಹಿಸಲು ಒತ್ತಾಯಿಸಲಾಗುತ್ತದೆ. |
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !