‘ಇರಾನ್ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ, ಅಲ್ಲಿಗೇ ಹೊರಟು ಹೋಗಿ’ ಎಂದು ಶಿಯಾ ಮೌಲಾನಾಗಳನ್ನು ತರಾಟೆಗೆ ತೆಗೆದುಕೊಂಡ ಅಸೀಮ್ ಮುನೀರ್
(ಮೌಲಾನಾ ಎಂದರೆ ಇಸ್ಲಾಂ ಧರ್ಮದ ಅಭ್ಯಾಸಿ)

ಇಸ್ಲಾಮಾಬಾದ್ – ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿನ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದ್ದು, ಶಿಯಾ ನಾಯಕರು ಪಾಕಿಸ್ತಾನದ ಸೈನ್ಯದಳದ ಮುಖ್ಯಸ್ಥ ಅಸೀಮ್ ಮುನೀರ್ ವಿರುದ್ಧ ರಣಕಹಳೆ ಊದಿದ್ದಾರೆ. ಮಾರ್ಚ್ ೧೯ ರಂದು ನಡೆದ ಉನ್ನತ ಮಟ್ಟದ ಇಫ್ತಾರ್ ಸಮಾರಂಭದಲ್ಲಿ ಸೈನ್ಯದಳದ ಮುಖ್ಯಸ್ಥರು ಶಿಯಾ ಮೌಲಾನಾಗಳನ್ನು ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ‘ನಿಮಗೆ ಇರಾನ್ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ, ಅಲ್ಲಿಗೇ ಹೊರಟು ಹೋಗಿ’ ಎಂದು ಮುನೀರ್ ಹೇಳಿದ್ದಾರೆ ಎಂದು ಪಾಕಿಸ್ತಾನದ ಶಿಯಾ ಧರ್ಮಗುರು ಮಹಮ್ಮದ್ ಶಿಫಾ ನಜಫಿ ತಿಳಿಸಿದ್ದಾರೆ.
೧. ಈ ಕುರಿತಾದ ಒಂದು ವರದಿಯ ಪ್ರಕಾರ, ಇಫ್ತಾರ್ ಸಮಾರಂಭದಲ್ಲಿ ಸೈನ್ಯದಳದ ಮುಖ್ಯಸ್ಥ ಅಸೀಮ್ ಮುನೀರ್ ಅವರು ದೇಶದ ಪ್ರಮುಖ ಶಿಯಾ ಉಲೇಮಾಗಳನ್ನು (ಧರ್ಮಜ್ಞಾನಿಗಳನ್ನು) ಎಲ್ಲರ ಎದುರು ಕಠಿಣ ಶಬ್ದಗಳಿಂದ ತರಾಟೆಗೆ ತೆಗೆದುಕೊಂಡಿದ್ದಾರೆ.
೨. ಈ ಘಟನೆಯ ನಂತರ ಪಾಕಿಸ್ತಾನದ ಶಿಯಾ ಸಮುದಾಯವು ತಮಗೆ ತೀವ್ರ ಅವಮಾನವಾಗಿದೆ ಎಂಬ ಭಾವನೆಯನ್ನು ವ್ಯಕ್ತಪಡಿಸಿದೆ. ಮೌಲಾನಾ ಹಸನೈನ್ ಅಬ್ಬಾಸ್ ಗರ್ದೇಜಿ ಅವರು ಜನರಲ್ ಅಸೀಮ್ ಮುನೀರ್ ಅವರ ಮಾತಿನ ಧಾಟಿ ಮತ್ತು ಟೀಕೆಗಳು ಅತ್ಯಂತ ಅವಮಾನಕಾರಿಯಾಗಿದ್ದವು ಎಂದು ಹೇಳಿದರು.
೩. ಕಾರ್ಯಕ್ರಮದಿಂದ ಹೊರಬಂದ ಶಿಯಾ ನಾಯಕರು, ಅಸೀಮ್ ಮುನೀರ್ ಅವರು ಎಲ್ಲರ ಮುಂದೆ ನಮ್ಮನ್ನು ಅವಮಾನಿಸುತ್ತಿದ್ದರು ಮತ್ತು ಪದೇ ಪದೇ ನಮ್ಮನ್ನು ‘ಇರಾನ್ ನ ನಿಷ್ಠಾವಂತರು’ ಎಂದು ಸಂಬೋಧಿಸುತ್ತಿದ್ದರು ಎಂದು ಹೇಳಿದರು.
೪. ಅಸೀಮ್ ಮುನೀರ್ ಅವರು ಶಿಯಾ ಮುಸಲ್ಮಾನರನ್ನು ಪಾಕಿಸ್ತಾನ ವಿರೋಧಿಗಳೆಂದು ಬಿಂಬಿಸಿ, ದೇಶಕ್ಕೆ ನಂಬಿಕೆ ದ್ರೋಹ ಮಾಡುತ್ತಿದ್ದಾರೆಂದು ಅವರು ಆರೋಪಿಸಿದರು.
೫. ಅಸೀಮ್ ಮುನೀರ್ ಅವರ ಈ ವರ್ತನೆಯು ಪಾಕಿಸ್ತಾನದ ನಿರ್ಮಾಣದಲ್ಲಿ ಶಿಯಾ ಸಮುದಾಯಕ್ಕಿರುವ ಪಾಲನ್ನು ಸಂಪೂರ್ಣವಾಗಿ ನಿರಾಕರಿಸುತ್ತದೆ ಎಂದು ಮೌಲಾನಾ ಹಸನೈನ್ ಹೇಳಿದರು.
೬. ಪಾಕಿಸ್ತಾನದ ಸಂಸ್ಥಾಪಕ ಮಹಮ್ಮದ್ ಅಲಿ ಜಿನ್ನಾ ಶಿಯಾ ಸಮುದಾಯಕ್ಕೆ ಸೇರಿದವರಾಗಿದ್ದರು. ಅಲ್ಲದೆ ಮಕ್ಕಾ, ಮದೀನಾ, ಇರಾಕ್ ಮತ್ತು ಇರಾನ್ ನಲ್ಲಿರುವ ಪವಿತ್ರ ಸ್ಥಳಗಳೊಂದಿಗೆ ಶಿಯಾಗಳಿಗೆ ಶತಮಾನಗಳಿಂದ ಇರುವ ಧಾರ್ಮಿಕ ಸಂಬಂಧವನ್ನು ಪಾಕಿಸ್ತಾನದ ಸೇನೆಯು ನಿರ್ಲಕ್ಷಿಸುತ್ತಿದೆ ಎಂದೂ ಅವರು ಆರೋಪಿಸಿದರು.
ಸಂಪಾದಕೀಯ ನಿಲುವುಸುನ್ನಿ ಬಹುಸಂಖ್ಯಾತ ಪಾಕಿಸ್ತಾನದಲ್ಲಿ ಶಿಯಾ ಮುಸಲ್ಮಾನರ ಸ್ಥಿತಿ ಶೋಚನೀಯ. ಜಗತ್ತಿನಾದ್ಯಂತ ಮತಾಂಧ ಮುಸಲ್ಮಾನರು ತಮ್ಮ ತಮ್ಮಲ್ಲೇ ಹೋರಾಡಿ ರಕ್ತ ಹರಿಸುತ್ತಾರೆ ಎಂಬುದು ವಾಸ್ತವ. ಮುಸಲ್ಮಾನರ ಪಂಗಡಗಳಲ್ಲೇ ಇಷ್ಟೊಂದು ದ್ವೇಷವಿರುವಾಗ, ಹಿಂದೂಗಳಿಗೆ ‘ನಿಮ್ಮ ಧರ್ಮದಲ್ಲಿ ಜಾತಿ ವ್ಯವಸ್ಥೆ ಇದೆ’ ಎಂದು ಹೇಳಿ ಸುಧಾರಣಾವಾದಿಗಳು ಹೀಯಾಳಿಸುವುದು ಆಕ್ರೋಶ ಉಂಟುಮಾಡುವಂಥದ್ದು. |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!