ಹಲಾಲ್ ಮಾಂಸ ಮಾರಾಟ ಮಾಡಲು ನಿರಾಕರಿಸಿದಾಗ ಪಾಕಿಸ್ತಾನಿ ಮುಸಲ್ಮಾನರಿಂದ ಸಿಖ್ ವ್ಯಕ್ತಿಯ ರೆಸ್ಟೋರೆಂಟ್ ಮೇಲೆ ದಾಳಿ Pakistan Muslims Attack Sikh Restaurant Owner

  • ಲಂಡನ್ (ಬ್ರಿಟನ್) ನಲ್ಲಿನ ಘಟನೆ

  • ಪೊಲೀಸರಿಂದ ಮುಸಲ್ಮಾನರನ್ನು ಬಂಧಿಸುವ ಬದಲು ಮಾಲೀಕನನ್ನೇ ಬಂಧಿಸಿದರು

ಲಂಡನ (ಬ್ರಿಟನ್) – ಇಲ್ಲಿನ ಹ್ಯಾಮರ್‌ ಸ್ಮಿತ್ ಪ್ರದೇಶದಲ್ಲಿ ಹರ್ಮನ ಕಪೂರ್ ಅವರ ‘ರಂಗರೇಜ್’ ಎಂಬ ಹೋಟೆಲ್‌ ನಲ್ಲಿ ಅವರು ಹಲಾಲ್ ಮಾಂಸ ಮಾರಾಟ ಮಾಡದಿರುವ ನಿರ್ಧಾರವನ್ನು ತೆಗೆದುಕೊಂಡಿದ್ದರಿಂದ ಇಲ್ಲಿನ ೧೦೦ ಕ್ಕೂ ಹೆಚ್ಚು ಪಾಕಿಸ್ತಾನಿ ಮುಸಲ್ಮಾನರ ಗುಂಪು ದಾಳಿ ಮಾಡಿದೆ. ವಿಶೇಷವೆಂದರೆ ಲಂಡನ್ ಪೊಲೀಸರು ಈ ಪ್ರಕರಣದಲ್ಲಿ ಹರ್ಮನ ಕಪೂರ್ ಅವರನ್ನೇ ಬಂಧಿಸಿದ್ದಾರೆ.

ಹಲಾಲ್ ಮಾಂಸ ಮಾರಾಟ ಮಾಡಲು ಒತ್ತಡ!

ಬಿಡುಗಡೆಯ ನಂತರ ಹರ್ಮನ ಕಪೂರ್ ಅವರು ಮಾತನಾಡುತ್ತಾ,

೧. ಮಾರ್ಚ್ ೧೪ ರಂದು ಅವರು ರೆಸ್ಟೋರೆಂಟ್‌ನಲ್ಲಿ ಒಂದು ಫಲಕವನ್ನು ಹಾಕಿ ‘ರೆಸ್ಟೋರೆಂಟ್‌ ನಲ್ಲಿ ಹಲಾಲ್ ಮಾಂಸ ಸಿಗುವುದಿಲ್ಲ’ ಎಂದು ಬರೆದರು. ಇದರಿಂದ ವಿವಾದ ಉಂಟಾಯಿತು. ಫಲಕ ಹಾಕಿದ ನಂತರ ರೆಸ್ಟೋರೆಂಟ್ ಬಳಿ ಪಾಕಿಸ್ತಾನಿ ಜನರ ಗುಂಪು ಜಮಾಯಿಸಿತು. ಅಲ್ಲಿ ಧ್ವಂಸ ಮಾಡಲು ಪ್ರಯತ್ನಿಸಲಾಯಿತು. ನನ್ನ ಮೇಲೆಯೂ ದಾಳಿ ಮಾಡಲಾಯಿತು. ಇದರ ನಂತರ ನನ್ನ ಬಳಿಯಿದ್ದ ಕಿರಪಾಣ (ಧಾರ್ಮಿಕ ಶಸ್ತ್ರ) ದಿಂದ ನನ್ನನ್ನು ನಾನು ರಕ್ಷಿಸಿಕೊಂಡೆ. ಈ ಸಮಯದಲ್ಲಿ ಮುಸಲ್ಮಾನರು ನನ್ನ ಮನೆಯ ಮೇಲೆಯೂ ದಾಳಿ ಮಾಡಿದರು.

೨. ಈ ಸಮಯದಲ್ಲಿ ಪೊಲೀಸರೂ ಸಹ ಮುಸಲ್ಮಾನರನ್ನು ಬೆಂಬಲಿಸಿದರು. ಆರೋಪಿಗಳನ್ನು ಬಂಧಿಸುವ ಬದಲು ನನ್ನನ್ನೇ ಬಂಧಿಸಿದರು; ಆದರೆ ವಿಚಾರಣೆಯ ನಂತರ ಬಿಡುಗಡೆ ಮಾಡಿದರು. ದಾಳಿ ಮಾಡಿದ ಮುಸಲ್ಮಾನರಿಗೆ ಶಸ್ತ್ರ ತೋರಿಸಿದ್ದೇ ಬಂಧನಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದರು. ಲಂಡನ್‌ ನಲ್ಲಿ ಶಸ್ತ್ರ ತೋರಿಸುವುದು ಕಾನೂನುಬಾಹಿರ ಅಪರಾಧ ಎಂದು ಪೊಲೀಸರು ಹೇಳಿದರು.

೩. ಸಿಖ್ ಗುರುಗಳು ಆತ್ಮರಕ್ಷಣೆಗಾಗಿ ಕಿರಪಾಣವನ್ನು ಜೊತೆಯಲ್ಲಿಟ್ಟುಕೊಳ್ಳಲು ಹೇಳಿದ್ದಾರೆ. ನಾನು ನನ್ನ ಕುಟುಂಬವನ್ನು ದಾಳಿಕೋರರರಿಂದ ರಕ್ಷಿಸಿದ್ದೇನೆ. ಯಾರ ಮೇಲೆಯೂ ದಾಳಿ ಮಾಡಿಲ್ಲ. ೨೦೨೩ ರಿಂದ ಖಲಿಸ್ತಾನಿಗಳು ಮತ್ತು ಮುಸಲ್ಮಾನರು ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ. ಪೊಲೀಸರು ನನ್ನನ್ನು ಬಂಧಿಸಿದರು; ಏಕೆಂದರೆ ನನ್ನ ಹೆಸರು ಖಾನ್ ಅಲ್ಲ. ನನ್ನನ್ನು ಹಲಾಲ್ ಮಾಂಸ ಮಾರಾಟ ಮಾಡಲು ಒತ್ತಾಯಿಸಲಾಗುತ್ತಿದೆ. ನನ್ನ ವ್ಯವಹಾರವನ್ನು ಉಳಿಸಲು ನಾನು ಪ್ರಪಂಚದಾದ್ಯಂತದ ಸಿಖ್ ರಿಂದ ಸಹಾಯ ಕೇಳಬೇಕಾಗಿದೆ. ಮತ್ತೊಂದೆಡೆ ವಿರೋಧಿಸುವ ಮುಸಲ್ಮಾನರು, ಕಪೂರ್ ಅವರು ದಾಳಿ ಮಾಡಲು ನಮ್ಮನ್ನು ಪ್ರಚೋದಿಸಿದರು, ದ್ವೇಷಪೂರಿತ ಭಾಷಣ ಮಾಡಿದರು, ಮುಸಲ್ಮಾನರನ್ನು ಟೀಕಿಸಿದರು ಮತ್ತು ಕಿರಪಾಣ ತೋರಿಸಿ ಬೆದರಿಕೆ ಹಾಕಿದರು ಎಂದು ಹೇಳಿದ್ದಾರೆ.

ರೆಸ್ಟೋರೆಂಟ್ ಮುಚ್ಚುವ ಘೋಷಣೆ

ಮಾರ್ಚ್ ೧೪ ರಂದು ಮುಸಲ್ಮಾನರ ದಾಳಿಯಿಂದಾಗಿ ಮತ್ತು ಬಂಧನದ ನಂತರ ಹರ್ಮನ್ ಕಪೂರ್ ಅವರು ಮಾರ್ಚ್ ೧೫ ರಂದು ತಮ್ಮ ರೆಸ್ಟೋರೆಂಟ್ ಮುಚ್ಚುವ ಘೋಷಣೆ ಮಾಡಿದರು. ಇದರ ನಂತರ ಬ್ರಿಟನ್‌ ನಲ್ಲಿ, ‘ಒಬ್ಬ ಉದ್ಯಮಿಗೆ ತನ್ನ ರೆಸ್ಟೋರೆಂಟ್‌ ನ ಮೆನುವನ್ನು ಆಯ್ಕೆ ಮಾಡುವ ಅಧಿಕಾರವೂ ಇಲ್ಲವೇ?’, ಎಂದು ಚರ್ಚೆ ಮಾಡಲು ಆರಂಭಿಸಿದರು. ಈ ಅಂಶವು ಈಗ ಬ್ರಿಟನ್‌ ನಲ್ಲಿ ಒಂದು ದೊಡ್ಡ ಪ್ರಶ್ನೆಯಾಗಿ ಮಾರ್ಪಟ್ಟಿದೆ. ಪೊಲೀಸರು ಗುಂಪನ್ನು ಬಿಟ್ಟು ಮಾಲೀಕನನ್ನು ಏಕೆ ಬಂಧಿಸಿದರು ಎಂದು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳುತ್ತಿದ್ದಾರೆ.

೨೦೧೦ ರಲ್ಲಿ ಆರಂಭವಾಗಿದ್ದ ‘ರಂಗರೇಜ್’ ರೆಸ್ಟೋರೆಂಟ್

ಹರಮನ್ ಕಪೂರ್ ಅವರು ಅಫ್ಘಾನಿಸ್ತಾನದಿಂದ ಬಂದು ೨೦೧೦ ರಲ್ಲಿ ರಂಗರೇಜ್ ರೆಸ್ಟೋರೆಂಟ್ ಆರಂಭಿಸಿದರು. ಮೊದಲ ದಿನದಿಂದಲೇ ಹಲಾಲ್ ಮಾಂಸ ಮಾರಾಟ ಮಾಡದಿರಲು ಅವರು ನಿರ್ಧರಿಸಿದ್ದರು. ಹರ್ಮನ್ ಅವರು ತಮ್ಮ ರೆಸ್ಟೋರೆಂಟ್‌ನಲ್ಲಿ ಮಾಂಸ ಸಿಗುತ್ತದೆ; ಆದರೆ ಅದು ‘ಝಟಕಾ’ ಪದ್ಧತಿಯದ್ದಾಗಿರುತ್ತದೆ ಎಂದು ತಿಳಿಸಿದರು. ಸಿಖ್ ಧರ್ಮೀಯರಾಗಿರುವುದರಿಂದ ಅವರು ಎಂದಿಗೂ ಹಲಾಲ್ ಮಾಂಸ ಮಾರಾಟ ಮಾಡಲಿಲ್ಲ. ೨೦೨೩ ರಲ್ಲಿ ಹಲಾಲ್ ಮಾಂಸ ಮಾರಾಟ ಮಾಡದಿರುವ ಫಲಕ ಹಾಕಿದಾಗ ಸಣ್ಣ ವಿವಾದಗಳು ಆರಂಭವಾದವು. ನಂತರ ರೆಸ್ಟೋರೆಂಟ್ ಮೇಲೆ ಮೊಟ್ಟೆಗಳನ್ನು ಎಸೆಯಲಾಯಿತು. ತಾವು ಯಾವಾಗಲೂ ಖಲಿಸ್ತಾನ್ ಅನ್ನು ವಿರೋಧಿಸಿದ್ದರಿಂದ ಹೀಗಾಯಿತು ಎಂಬುದು ಕಪೂರ್ ಅವರ ವಾದವಾಗಿದೆ.

ಹಲಾಲ್ ಮತ್ತು ಝಟಕಾ ಮಾಂಸದ ನಡುವಿನ ವ್ಯತ್ಯಾಸ

ಹಲಾಲ್ ಮಾಂಸ ಎಂದರೆ ಪ್ರಾಣಿಗಳ ಮುಖವನ್ನು ಮಕ್ಕಾದ ದಿಕ್ಕಿಗೆ ಮಾಡಿ ಅವುಗಳ ಕುತ್ತಿಗೆಯ ನರವನ್ನು ಕತ್ತರಿಸಲಾಗುತ್ತದೆ ಮತ್ತು ಅವುಗಳು ಒದ್ದಾಡಿ ಸಾಯುವಂತೆ ಬಿಡಲಾಗುತ್ತದೆ. ಅದರಲ್ಲಿ ಪ್ರಾಣಿಗಳ ರಕ್ತವು ದೊಡ್ಡ ಪ್ರಮಾಣದಲ್ಲಿ ಹರಿಯುತ್ತದೆ. ಇದಕ್ಕೆ ವಿರುದ್ಧವಾಗಿ ಹಿಂದೂ ಅಥವಾ ಸಿಖ್ ಧರ್ಮಗಳಲ್ಲಿ ‘ಝಟಕಾ’ ಪದ್ಧತಿಯಲ್ಲಿ ಪ್ರಾಣಿಗಳನ್ನು ಕೊಲ್ಲಲಾಗುತ್ತದೆ. ಅದರಲ್ಲಿ ಪ್ರಾಣಿಗಳ ಕುತ್ತಿಗೆಯನ್ನು ಒಂದೇ ಏಟಿನಲ್ಲಿ ಕತ್ತರಿಸುವುದರಿಂದ ಅವುಗಳಿಗೆ ಅತ್ಯಲ್ಪ ಪ್ರಮಾಣದಲ್ಲಿ ತೊಂದರೆಯಾಗುತ್ತದೆ.

ಸಂಪಾದಕೀಯ ನಿಲುವು

ಬ್ರಿಟನ್ ಈಗ ಇಸ್ಲಾಮಿಕ್ ದೇಶವಾಗಿ ಬದಲಾಗುತ್ತಿದೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ! ಇಸ್ಲಾಮಿಕ್ ದೇಶಗಳಿಂದ ಅನ್ಯ ಧರ್ಮೀಯರು ಹೇಗೆ ಪಲಾಯನ ಮಾಡಬೇಕಾಗುತ್ತದೆಯೋ, ಹಾಗೆಯೇ ಈಗ ಬ್ರಿಟನ್‌ ನಲ್ಲಿಯೂ ಆಗಲಿದೆ ಎಂಬುದನ್ನು ಅನ್ಯ ಧರ್ಮೀಯರು ಅರಿತುಕೊಳ್ಳಬೇಕು!