
ನವ ದೆಹಲಿ – ಅಮೇರಿಕಾದ ಯುದ್ಧ ವಿಮಾನಗಳು ಚಾಬಹಾರ ಮುಕ್ತ ವ್ಯಾಪಾರ ವಲಯದ ಸಮೀಪವಿರುವ ಪರ್ವತ ಪ್ರದೇಶದ ಸೈನಿಕ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ. ಚಾಬಹಾರ ಮುಕ್ತ ವ್ಯಾಪಾರ ವಲಯವು ಇರಾನಿನ ಆಗ್ನೇಯ ಭಾಗದ ‘ಸಿಸ್ತಾನ್ ಮತ್ತು ಬಲುಚಿಸ್ತಾನ್’ ಪ್ರಾಂತ್ಯದಲ್ಲಿ, ಪಾಕಿಸ್ತಾನದ ಗಡಿಯ ಸಮೀಪದಲ್ಲಿದೆ.

ಚಾಬಹಾರ ಬಂದರಿನ ಭೂರಾಜಕೀಯ ಹಾಗೂ ಭೂವ್ಯಾಪಾರದ ಮಹತ್ವ!
೧. ‘ಚಾಬಹಾರ ಮುಕ್ತ ವ್ಯಾಪಾರ ವಲಯ’ವು ಮಧ್ಯ ಏಷ್ಯಾವನ್ನು ಹಿಂದೂ ಮಹಾಸಾಗರದೊಂದಿಗೆ ಜೋಡಿಸುತ್ತದೆ.
೨. ಚಾಬಹಾರ ಮುಕ್ತ ವ್ಯಾಪಾರ ವಲಯವನ್ನು ೧೯೯೨ ರಲ್ಲಿ ಸ್ಥಾಪಿಸಲಾಯಿತು.
೩. ಈ ವಲಯವು ‘ಓಮನ್ ಕೊಲ್ಲಿ’ಯ ಕರಾವಳಿಯಲ್ಲಿದೆ. ಬಂದರಿನಿಂದಾಗಿ ಇರಾನ್ ಗೆ ಹಿಂದೂ ಮಹಾಸಾಗರವನ್ನು ಪ್ರವೇಶಿಸಲು ‘ಹೋರ್ಮುಜ್ ಜಲಸಂಧಿ’ಯ ಮಾರ್ಗವನ್ನು ಅವಲಂಬಿಸುವ ಅವಶ್ಯಕತೆಯಿರುವುದಿಲ್ಲ.
Tensions rise as US attacks near Iran’s Chabahar Port – a strategic lifeline for India 🇮🇳⚓️
Why Chabahar is a game-changer:
🔹 Trade Hub: Connects Central Asia to the Indian Ocean. 🌊🔹 Strategic Bypass: Avoids the crowded Strait of Hormuz.
🔹 India’s Gateway: Vital for trade… https://t.co/vKt0aeHcju pic.twitter.com/r8i1kOFYwO
— Sanatan Prabhat (@SanatanPrabhat) March 16, 2026
ಭಾರತಕ್ಕೆ ಅತ್ಯಂತ ಮಹತ್ವದ್ದು!
೧. ೨೦೨೧ ರಲ್ಲಿ ಭಾರತವು ಚಾಬಹಾರ ಮುಕ್ತ ವ್ಯಾಪಾರ ವಲಯದಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಶತಕೋಟಿ ಡಾಲರ್ ಹೂಡಿಕೆ ಮಾಡುವ ಭರವಸೆ ನೀಡಿತು.
೨. ಈ ಬಂದರು ಪ್ರಾದೇಶಿಕ ಮೂಲಸೌಕರ್ಯ ಅಭಿವೃದ್ಧಿಗೆ ಅತ್ಯಂತ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.
೩. ಚಾಬಹಾರ ಬಂದರಿನಿಂದಾಗಿ ಭಾರತಕ್ಕೆ ಅಫ್ಘಾನಿಸ್ತಾನ, ಮಧ್ಯ ಏಷ್ಯಾ ಮತ್ತು ಯುರೋಪ್ ಗೆ ಸುಲಭ ಪ್ರವೇಶ ಸಿಗುತ್ತದೆ.
೪. ೨೦೨೪ ರಲ್ಲಿ ಭಾರತವು ಇರಾನ್ ಜೊತೆಗೆ ೧೦ ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಇದರನ್ವಯ ಭಾರತದ ಮಾಲಿಕತ್ವದ ‘ಇಂಡಿಯಾ ಪೋರ್ಟ್ಸ್ ಗ್ಲೋಬಲ್ ಲಿಮಿಟೆಡ್’ ಸಂಸ್ಥೆಯು ಚಾಬಹಾರನಲ್ಲಿ ೩೭ ಕೋಟಿ ಡಾಲರ್ (ಸುಮಾರು ಮೂರೂವರೆ ಸಾವಿರ ಕೋಟಿ ರೂಪಾಯಿ) ಹೂಡಿಕೆ ಮಾಡುವ ಭರವಸೆ ನೀಡಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ