ಸಾವಿರಕ್ಕೂ ಹೆಚ್ಚು ಮಂದಿರ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ದೇವಸ್ಥಾನಗಳ ಸರಕಾರೀಕರಣ ಮತ್ತು ಸುರಕ್ಷತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ!

ಸಾತಾರಾ, ಮಾರ್ಚ್ 17 (ವಾರ್ತೆ) – ಲಕ್ಷಾಂತರ ವರ್ಷಗಳಿಂದ ಹಿಂದೂ ಧರ್ಮದ ಆಧಾರಸ್ತಂಭಗಳಾಗಿರುವ ದೇವಸ್ಥಾನಗಳು ‘ಸೆಕ್ಯುಲರ್’ವಾದದ ಹೆಸರಿನಲ್ಲಿ ವಿವಿಧ ಆಘಾತಗಳನ್ನು ಎದುರಿಸುತ್ತಿವೆ. ದೇವಸ್ಥಾನಗಳ ಸರಕಾರೀಕರಣ, ಭ್ರಷ್ಟಾಚಾರ, ಮಂದಿರಗಳ ಭೂಮಿಯ ಅತಿಕ್ರಮಣ, ತಿರುಪತಿ ಬಾಲಾಜಿಯಂತಹ ದೇವಸ್ಥಾನಗಳ ಪ್ರಸಾದದಲ್ಲಿ ಕಲಬೆರಕೆ ಹಾಗೂ ಮಂದಿರಗಳ ಭೂಮಿಯ ಮೇಲೆ ‘ವಕ್ಫ್’ ಮಂಡಳಿಯ ಹೆಚ್ಚುತ್ತಿರುವ ಅತಿಕ್ರಮಣ—ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ‘ಮಂದಿರ ಮಹಾಸಂಘ’ವು ಕಾರ್ಯನಿರ್ವಹಿಸುತ್ತಿದೆ. ಈ ಸಮಸ್ಯೆಗಳ ಕುರಿತು ವ್ಯಾಪಕವಾಗಿ ಚರ್ಚಿಸಲು, ದೇವಸ್ಥಾನಗಳನ್ನು ಸಂಘಟಿಸಲು ಮತ್ತು ದೇವಸ್ಥಾನಗಳ ಸಮಸ್ಯೆಗಳನ್ನು ಸರಕಾರದ ಮುಂದಿಡಲು ಮುಂದಾಳತ್ವ ವಹಿಸುವ ಉದ್ದೇಶದಿಂದ ಮಹಾರಾಷ್ಟ್ರ ಮಂದಿರ ಮಹಾಸಂಘ, ಮುಂಬಯಿನ ‘ಶ್ರೀ ಜೀವದಾನಿದೇವಿ ಸಂಸ್ಥಾನ’, ‘ಶ್ರೀ ಜ್ಯೋತಿರ್ಲಿಂಗ ಭೀಮಾಶಂಕರ ದೇವಸ್ಥಾನ’ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 22 ರಂದು ಸಾತಾರಾದ ಕೋರೆಗಾಂವ್ ರಸ್ತೆಯಲ್ಲಿರುವ ‘ಸ್ವರಾಜ್ ಮಂಗಳ ಕಾರ್ಯಾಲಯ’ದಲ್ಲಿ ನಾಲ್ಕನೇ ‘ಮಹಾರಾಷ್ಟ್ರ ಮಂದಿರ ನ್ಯಾಸ ಪರಿಷತ್’ ಅನ್ನು ಆಯೋಜಿಸಲಾಗಿದೆ.
🚩 Over 1,000 temple representatives are set to participate in the 4th 'Maharashtra Mandir Nyas Parishad' in Satara, Maharashtra.
🗓️ Date: March 22nd
The Mandir Parishad is striving to unite and organise our sacred spaces." – Poojya Nilkanth Shivacharya Dhareshwar Swami Maharaj… pic.twitter.com/p4TeCRD9tF
— Sanatan Prabhat (@SanatanPrabhat) March 17, 2026
ಈ ಪರಿಷತ್ತಿನಲ್ಲಿ ಮಹಾರಾಷ್ಟ್ರದಾದ್ಯಂತದ ಸಾವಿರಕ್ಕೂ ಹೆಚ್ಚು ಆಮಂತ್ರಿತ ದೇವಸ್ಥಾನಗಳ ವಿಶ್ವಸ್ತರು, ಪ್ರತಿನಿಧಿಗಳು, ಪುರೋಹಿತರು, ದೇವಸ್ಥಾನಗಳ ರಕ್ಷಣೆಗಾಗಿ ಹೋರಾಡುತ್ತಿರುವ ನ್ಯಾಯವಾದಿಗಳು ಮತ್ತು ಅಭ್ಯಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ‘ಮಂದಿರ ಮಹಾಸಂಘ’ದ ಮಹಾರಾಷ್ಟ್ರ ರಾಜ್ಯ ಸಂಘಟಕ ಶ್ರೀ. ಸಂಜಯ ಜೋಶಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ಪತ್ರಿಕಾಗೋಷ್ಠಿಯಲ್ಲಿ ಪೂಜ್ಯ ನೀಲಕಂಠ ಶಿವಾಚಾರ್ಯ ಧಾರೇಶ್ವರ ಮಹಾರಾಜರು, ನ್ಯಾಯವಾದಿ ಜನಾರ್ದನ ಕರ್ಪೆ, ಮಹಾರಾಷ್ಟ್ರ ಮಂದಿರ ಮಹಾಸಂಘದ ಸಾತಾರಾ ಜಿಲ್ಲಾ ಸಂಯೋಜಕ ಶ್ರೀ. ಶಿವಾಜಿರಾವ್ ತುಪೆ, ಭುಯಿಂಜನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ವಿಶ್ವಸ್ತ ಶ್ರೀ.ಗಜಾನನ ಭೋಸಲೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಹೇಮಂತ್ ಸೋನಾವಣೆ ಉಪಸ್ಥಿತರಿದ್ದರು.
ದೇವಸ್ಥಾನಗಳ ಸಂಘಟನೆಗಾಗಿ ‘ಮಂದಿರ ಮಹಾಸಂಘ’ದ ಪ್ರಯತ್ನ! – ಪೂಜ್ಯ ನೀಲಕಂಠ ಶಿವಾಚಾರ್ಯ ಧಾರೇಶ್ವರ ಸ್ವಾಮಿ ಮಹಾರಾಜ್
ಪ್ರಸ್ತುತ ದೇವಸ್ಥಾನಗಳ ಬಗ್ಗೆ ಹೆಚ್ಚಿನ ನಿರ್ಲಕ್ಷ್ಯ ವಹಿಸಲಾಗುತ್ತಿದೆ, ಅವುಗಳ ರಕ್ಷಣೆ ಮತ್ತು ಸಂವರ್ಧನೆ ಅತ್ಯಗತ್ಯವಾಗಿದೆ. ಧರ್ಮ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ! ಇಂದು ಅನೇಕ ದೇವಸ್ಥಾನಗಳು ಸರಕಾರೀಕರಣಗೊಂಡಿವೆ ಮತ್ತು ಅವುಗಳಲ್ಲಿ ಹಲವಾರು ಹಗರಣಗಳು ಹೊರಬರುತ್ತಿವೆ. ಅನೇಕ ಕಡೆಗಳಲ್ಲಿ ಇದೇ ಪರಿಸ್ಥಿತಿಯಿದೆ. ಈ ಸ್ಥಿತಿಯನ್ನು ಬದಲಾಯಿಸಲು ದೇವಸ್ಥಾನಗಳ ಸಂಘಟನೆ ಮುಖ್ಯವಾಗಿದೆ. ಇದಕ್ಕಾಗಿ ‘ಮಂದಿರ ಮಹಾಸಂಘ’ ನಿರಂತರವಾಗಿ ಶ್ರಮಿಸುತ್ತಿದೆ.
ದೇವಸ್ಥಾನಗಳ ವಿವಿಧ ಸಮಸ್ಯೆಗಳಿಗಾಗಿ ‘ಮಂದಿರ ಮಹಾಸಂಘ’ದ ಸತತ ಹೋರಾಟ! – ಶಿವಾಜಿರಾವ್ ತುಪೆ
ಮಂದಿರ ಮಹಾಸಂಘವು 17,೦೦೦ಕ್ಕೂ ಹೆಚ್ಚು ವಿಶ್ವಸ್ತರು, ಪುರೋಹಿತರು, ಧಾರ್ಮಿಕ ಸಂಸ್ಥೆಗಳು ಮತ್ತು ಭಕ್ತರ ಸಂಘಟನೆಯನ್ನು ಹೊಂದಿದೆ. ಮಹಾರಾಷ್ಟ್ರ, ಗೋವಾ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ 2,400ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯನ್ನು (Dress Code) ಜಾರಿಗೆ ತರಲಾಗಿದೆ. ಮಂದಿರ ಮಹಾಸಂಘವು ಮಹಾರಾಷ್ಟ್ರದ ದೇವಸ್ಥಾನಗಳ ನೂರಾರು ಎಕರೆ ಭೂಮಿಯನ್ನು ಭೂಗಳ್ಳರಿಂದ ರಕ್ಷಿಸಿದೆ. ಕರ್ನಾಟಕದಲ್ಲಿ ಮಂದಿರ ಮಹಾಸಂಘದ ವಿರೋಧದ ಫಲವಾಗಿ, ದೇವಸ್ಥಾನಗಳಿಂದ ಹಣವನ್ನು ವಸೂಲಿ ಮಾಡುವ ‘ಮಂದಿರ ಮತ್ತು ಧರ್ಮದಾಯ ಸಂಸ್ಥೆಗಳ ತೆರಿಗೆ ಸುಧಾರಣಾ ಮಸೂದೆ 2024’ ಅಂಗೀಕಾರಗೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲದೆ, ಕರ್ನಾಟಕದಲ್ಲಿ ಕಣ್ಮರೆಯಾಗಿದ್ದ 4,170 ದೇವಸ್ಥಾನಗಳ ಪುನರ್ ಅಸ್ತಿತ್ವಕ್ಕಾಗಿ ಚಳವಳಿಯನ್ನು ನಡೆಸಿದೆ. ಹೀಗೆ ದೇವಾಲಯಗಳ ವಿವಿಧ ಸಮಸ್ಯೆಗಳಿಗಾಗಿ ಮಂದಿರ ಮಹಾಸಂಘವು ಸತತವಾಗಿ ಹೋರಾಡುತ್ತಿದೆ.
ಪರಿಷತ್ತಿನಲ್ಲಿ ಅನೇಕ ಸಂತರು ಮತ್ತು ಗಣ್ಯರ ಉಪಸ್ಥಿತಿ! – ಹೇಮಂತ್ ಸೋನಾವಣೆ
ಈ ಪರಿಷತ್ತಿನಲ್ಲಿ ರಾಜ್ಯದ ತೋಟಗಾರಿಕಾ ಸಚಿವ ಭರತ್‌ಶೇಠ್ ಗೋಗಾವಲೆ, ಜೈನ ಮಂದಿರದ ಶ್ರೀ. ಗಿರೀಶ್ ಶಹಾ, ದೇವಸ್ಥಾನಗಳ ಕುರಿತು ಸಂಶೋಧನೆ ನಡೆಸುತ್ತಿರುವ ಲೇಖಕ ಶ್ರೀ. ಸಂದೀಪ್ ಸಿಂಗ್, ಆಳಂದಿಯ ‘ಜ್ಞಾನೇಶ್ವರ ಮಹಾರಾಜ್ ಸಂಸ್ಥಾನ’ದ ಮುಖ್ಯ ವಿಶ್ವಸ್ತ ಯೋಗಿ ನಿರಂಜನನಾಥ ಮಹಾರಾಜ್, ದೇಹೂ-ಆಳಂದಿ ದೇವಸ್ಥಾನಗಳ ವಿಶ್ವಸ್ತರು, 11 ಮಾರುತಿ ದೇವಾಲಯಗಳ ವಿಶ್ವಸ್ತರು, ‘ಮಂದಿರ ಮಹಾಸಂಘ’ದ ರಾಷ್ಟ್ರೀಯ ಸಂಘಟಕ ಶ್ರೀ. ಸುನಿಲ್ ಘನವಟ್ ಸೇರಿದಂತೆ ‘ಶ್ರೀ ಅಷ್ಟವಿನಾಯಕ ಮಂದಿರ’ಗಳ ವಿಶ್ವಸ್ತರು, ಮಹಾರಾಷ್ಟ್ರದ ಜ್ಯೋತಿರ್ಲಿಂಗ ದೇವಸ್ಥಾನಗಳ ವಿಶ್ವಸ್ತರು, ಸನಾತನ ಸಂಸ್ಥೆಯ ಸದ್ಗುರು ಸ್ವಾತಿ ಖಾಡ್ಯೆ, ವಿವಿಧ ಸಂತ ಪೀಠಗಳ ಪ್ರತಿನಿಧಿಗಳು ಹಾಗೂ ಇತರ ದೇವಸ್ಥಾನಗಳ ವಿಶ್ವಸ್ತರು ಭಾಗವಹಿಸಲಿದ್ದಾರೆ.
ದೇವಸ್ಥಾನಗಳ ಸುರಕ್ಷತೆ ಸೇರಿದಂತೆ ಅನೇಕ ಪ್ರಮುಖ ವಿಷಯಗಳ ಕುರಿತು ಚರ್ಚೆ!ಈ ಮಂದಿರ ಪರಿಷತ್ತಿನಲ್ಲಿ ಗಣ್ಯರ ಮಾರ್ಗದರ್ಶನ ಮತ್ತು ದೇವಸ್ಥಾನಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಸಂವಾದಗಳು ನಡೆಯಲಿವೆ. ದೇವಸ್ಥಾನಗಳ ಸುರಕ್ಷತೆ, ‘ದೇವಸ್ಥಾನಗಳನ್ನು ಸನಾತನ ಧರ್ಮ ಪ್ರಚಾರದ ಕೇಂದ್ರಗಳನ್ನಾಗಿ ಮಾಡುವುದು’, ‘ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸುವುದು’, ‘ವಕ್ಫ್ ಕಾಯ್ದೆ’ಯ ಮೂಲಕ ದೇವಸ್ಥಾನಗಳ ಭೂಮಿಯ ಅತಿಕ್ರಮಣ ತಡೆಯುವುದು, ದೇವಸ್ಥಾನ ಮತ್ತು ತೀರ್ಥಕ್ಷೇತ್ರಗಳ ಪರಿಸರದಲ್ಲಿ ಮದ್ಯ-ಮಾಂಸ ನಿಷೇಧಿಸುವುದು ಹಾಗೂ ನಿರ್ಲಕ್ಷಿತ ದೇವಸ್ಥಾನಗಳ ಜೀರ್ಣೋದ್ಧಾರ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಈ ಪರಿಷತ್ತು ಕೇವಲ ಆಹ್ವಾನಿತರಿಗಾಗಿ ಮಾತ್ರವಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವವರು 7020383264 ಈ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬೇಕೆಂದು ‘ಮಂದಿರ ಮಹಾಸಂಘ’ ಮನವಿ ಮಾಡಿದೆ. |
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ