|

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಲ್ಲಿನ ಐತಿಹಾಸಿಕ ಇಮಾಂಬಾಡಾದಲ್ಲಿ ಈಗ ಮಹಿಳೆಯರು ಕಡ್ಡಾಯವಾಗಿ ತಲೆ ಮುಚ್ಚಿಕೊಂಡೇ, ಅಂದರೆ ಹಿಜಾಬ್ ಧರಿಸಿಯೇ ಪ್ರವೇಶ ಪಡೆಯಬೇಕಿದೆ. ಇಲ್ಲದಿದ್ದರೆ ಪ್ರವೇಶ ನಿರಾಕರಿಸಲಾಗುವುದು ಎಂದು ಇಮಾಂಬಾಡಾ ಆಡಳಿತ ಮಂಡಳಿಯು ನಿರ್ಧಾರ ಕೈಗೊಂಡಿದೆ. ಇದಕ್ಕಾಗಿ ‘ಇದು ಧಾರ್ಮಿಕ ಸ್ಥಳವಾಗಿದೆ. ಆದ್ದರಿಂದ ಇಲ್ಲಿ ಇಸ್ಲಾಂ ಅನ್ನು ಪಾಲಿಸಲೇಬೇಕು’ ಎಂಬ ತರ್ಕವನ್ನು ಅವರು ನೀಡಿದ್ದಾರೆ. ಇನ್ನೊಂದೆಡೆ ಮುಸಸಲ್ಮಾನ ಮತ್ತು ಹಿಂದೂ ಮಹಿಳೆಯರು ಹೇಳುವುದೇನೆಂದರೆ, ಮಸೀದಿಗೆ ಹೋಗುವಾಗ ತಲೆ ಮುಚ್ಚಿಕೊಳ್ಳುವುದನ್ನು ಅರ್ಥಮಾಡಿಕೊಳ್ಳಬಹುದು; ಆದರೆ ಇಮಾಂಬಾಡಾದಲ್ಲಿ ಮಸೀದಿಯ ಹೊರಗೂ ಅನೇಕ ಸ್ಥಳಗಳಿವೆ, ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಇದು ನಮ್ಮ ‘ಸ್ವಾತಂತ್ರ್ಯದ ಹಕ್ಕುಗಳ’ ಉಲ್ಲಂಘನೆಯಾಗಿದೆ.
೧. ‘ಹುಸೇನಿ ಟೈಗರ್ಸ್’ ಎಂಬ ಯಾವುದೋ ಒಂದು ಮುಸಲ್ಮಾನ ಸಂಘಟನೆಯ ಹಲವು ವರ್ಷಗಳ ಬೇಡಿಕೆಯ ನಂತರ ‘ಹುಸೈನಾಬಾದ್ ಟ್ರಸ್ಟ್’ನ ಕಾರ್ಯದರ್ಶಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ (ಪಶ್ಚಿಮ) ಎಚ್. ಪಿ. ಶಾಹಿ ಅವರು ಇದಕ್ಕೆ ಅನುಮತಿ ನೀಡಿದ್ದಾರೆ.
೨. ಉಪ ಜಿಲ್ಲಾಧಿಕಾರಿಗಳು ಹೇಳುವುದೇನೆಂದರೆ, ದೊಡ್ಡ ಇಮಾಂಬಾಡಾ ಶಿಯಾ ಸಮುದಾಯದ ಧಾರ್ಮಿಕ ಸ್ಥಳವಾಗಿರುವುದರಿಂದ ಅವರ ಬೇಡಿಕೆಯಂತೆ ಮಹಿಳೆಯರಿಗೆ ತಲೆ ಮುಚ್ಚಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
೩. ಇಲ್ಲಿಗೆ ಬರುವ ಪ್ರವಾಸಿಗರಿಗೆ ತಲೆ ಮುಚ್ಚಿಕೊಳ್ಳಲು ದುಪ್ಪಟ್ಟಾ ಲಭ್ಯವಾಗುವಂತೆ ಮಾಡಲಾಗುವುದು.
೪. ಶಿಯಾ ಮೌಲಾನಾ ಕಲ್ಬೆ ಜವ್ವಾದ್ ಅವರು ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಅವರು ಮಾತನಾಡುತ್ತಾ, ಪ್ರತಿಯೊಂದು ಧಾರ್ಮಿಕ ಸ್ಥಳಕ್ಕೂ ತನ್ನದೇ ಆದ ನಿಯಮಗಳಿರುತ್ತವೆ. ಹಿಜಾಬ್ ಇಲ್ಲದೆ ಪ್ರವೇಶ ತಡೆಯುವ ಪೂರ್ಣ ಅಧಿಕಾರ ನಮಗಿದೆ. ಇದು ಧಾರ್ಮಿಕ ಸ್ಥಳವಾಗಿರುವುದರಿಂದ ತಲೆ ಮುಚ್ಚದ ಹೊರತು ಪ್ರವೇಶ ನೀಡಲಾಗುವುದಿಲ್ಲ ಎಂದು ಹೇಳಿದರು.
ಹಿಂದೂ ಯುವತಿಯರಿಗೆ ಆದ ಕಹಿ ಅನುಭವ!
ಇಮಾಂಬಾಡಾ ನೋಡಲು ಹೋದ ಕೆಲವು ಹಿಂದೂ ಹುಡುಗಿಯರಿಗೆ ಅಲ್ಲಿದ್ದ ‘ಡೆತ್ ಟು ಅಮೇರಿಕಾ ಆಂಡ್ ಇಸ್ರೇಲ್’ ಎಂದು ಬರೆದಿದ್ದ ಭಿತ್ತಿಪತ್ರಗಳನ್ನು ಒದೆಯಲು ಹೇಳಲಾಗಿದೆ ಎಂದು ಆರೋಪಿಸಲಾಗಿದೆ. ಅವರಿಗೆ ಹಿಜಾಬ್ ಧರಿಸದ ಹೊರತು ಪ್ರವೇಶ ನೀಡಲಾಗಿಲ್ಲ.
ಅನೇಕ ಮಹಿಳಾ ಸಂಘಟನೆಗಳು ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಇಮಾಂಬಾಡಾ ಕೇವಲ ಧಾರ್ಮಿಕ ಸ್ಥಳ ಮಾತ್ರವಲ್ಲ ಪ್ರವಾಸಿ ತಾಣವೂ ಆಗಿದೆ. ಇಲ್ಲಿ ಮಸೀದಿಯ ಹೊರತಾಗಿ ನೋಡುವಂತಹ ಅನೇಕ ಸಂಗತಿಗಳಿವೆ ಎಂದು ಹೇಳಿವೆ.
ಕಾರ್ಯಕರ್ತೆ ರೇಣು ಮಿಶ್ರಾ ಅವರು ಮಾತನಾಡುತ್ತಾ, ರಾಜ್ಯ ಸರಕಾರ ಅಥವಾ ಉಚ್ಚ ನ್ಯಾಯಾಲಯವು ಹಸ್ತಕ್ಷೇಪ ಮಾಡಿ ಈ ನಿರ್ಧಾರವನ್ನು ತಡೆಯಬೇಕು. ಇಂತಹ ನಿರ್ಧಾರಗಳು ಮಹಿಳೆಯರನ್ನು ಮಧ್ಯಕಾಲೀನ ಯುಗಕ್ಕೆ ಕೊಂಡೊಯ್ಯುವಂತಿದ್ದು, ಸಂವಿಧಾನವು ಇದಕ್ಕೆ ಅನುಮತಿ ನೀಡುವುದಿಲ್ಲ ಎಂದು ಹೇಳಿದರು.
ಸಂಪಾದಕೀಯ ನಿಲುವು
|
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!