|

ಮುಂಬಯಿ – ತ್ರ್ಯಂಬಕೇಶ್ವರ-ನಾಸಿಕ್‌ನಲ್ಲಿ ಸಿಂಹಸ್ಥ ಕುಂಭಮೇಳದ ಆಯೋಜನೆಯು 2027 ರಲ್ಲಿ ನಡೆಯಲಿದ್ದು, ಈ ಕುಂಭಮೇಳಕ್ಕೆ ದೇಶ-ವಿದೇಶಗಳಿಂದ ಕೋಟ್ಯಂತರ ಭಕ್ತರು ಬರಲಿದ್ದಾರೆ. ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತನು ಭಾರತದ, ಅದರಲ್ಲೂ ಮುಖ್ಯವಾಗಿ ಮಹಾರಾಷ್ಟ್ರದ ಪ್ರತಿಬಿಂಬವನ್ನು ತನ್ನೊಂದಿಗೆ ಕೊಂಡೊಯ್ಯುತ್ತಾನೆ. ಆದ್ದರಿಂದ ಯಶಸ್ವಿ ಆಯೋಜನೆಯ ಮೂಲಕ ಈ ಕುಂಭಮೇಳವು ಜಗತ್ತಿಗೆ ಆಕರ್ಷಣೀಯವಾಗಿರಬೇಕು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಿರ್ದೇಶನ ನೀಡಿದರು.

ಕುಂಭಮೇಳಕ್ಕಾಗಿ 22 ಸಾವಿರದ 181 ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ವಿಧಾನಭವನದಲ್ಲಿ ನಡೆದ ‘ಕುಂಭಮೇಳ ಉನ್ನತ ಮಟ್ಟದ ಸಮಿತಿ’ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಕುಂಭಮೇಳದ ಕೆಲಸಗಳಲ್ಲಿ ಯಾರಾದರೂ ಕೆಟ್ಟ ಉದ್ದೇಶದಿಂದ ಅಥವಾ ಕೆಲಸ ವಿಳಂಬ ಮಾಡುವ ಉದ್ದೇಶದಿಂದ ಅಡ್ಡಿಪಡಿಸಿದರೆ, ಅಂತಹವರನ್ನು ಕ್ಷಮಿಸುವುದಿಲ್ಲ. ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಮುಖ್ಯಮಂತ್ರಿಗಳು ನೀಡಿದರು.
ಮುಖ್ಯಮಂತ್ರಿಗಳು,
1. ಕುಂಭಮೇಳದ ಕೆಲಸಗಳಿಗೆ ಅಗತ್ಯವಿರುವ ಭೂಮಿಯ ಭೂಸ್ವಾಧೀನಕ್ಕೆ ರೈತರಿಗೆ ಸೂಕ್ತ ಪರಿಹಾರ ನೀಡಬೇಕು.
2. ಸ್ವಚ್ಛತೆ ಬಹಳ ಮುಖ್ಯವಾಗಿದ್ದು, ಈ ಕಾಮಗಾರಿಗಳಲ್ಲಿ ನಿರ್ಮಿಸಲಾಗುವ ಶೌಚಾಲಯಗಳು ಗುಣಮಟ್ಟದಿಂದ ಕೂಡಿರಬೇಕು.
3. ನಾಸಿಕ್‌ಗೆ ಬರುವ ಭಕ್ತರು ಶಿರಡಿ ಮತ್ತು ಶನಿಶಿಂಗ್ಣಾಪುರಕ್ಕೂ ಭೇಟಿ ನೀಡುತ್ತಾರೆ. ಆದ್ದರಿಂದ ಶಿರಡಿ ಮತ್ತು ನಾಸಿಕ್ ರಸ್ತೆಯ ಕೆಲಸವನ್ನು ಮಾಡಬೇಕು.
4. ಭಕ್ತರಿಗೆ ಸಂವಹನದಲ್ಲಿ ಯಾವುದೇ ತೊಂದರೆಯಾಗಬಾರದು; ಆದ್ದರಿಂದ ಮೊಬೈಲ್ ನೆಟ್‌ವರ್ಕ್ ವ್ಯವಸ್ಥೆಯು ಬಲವಾಗಿರಬೇಕು. ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು.
5. ತ್ರ್ಯಂಬಕೇಶ್ವರದ ಕುಶಾವರ್ತ ಮತ್ತು ನಾಸಿಕ್‌ನ ಗೋದಾವರಿ ನದಿಯ ನೀರು ಕುಂಭಮೇಳದ ಸಮಯದಲ್ಲಿ ಶುದ್ಧವಾಗಿರಲು ಸಂಬಂಧಪಟ್ಟ ಇಲಾಖೆಗಳು ವಿಶೇಷ ಕಾಳಜಿ ವಹಿಸಬೇಕು.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!