ನಾನು ಶೀಘ್ರದಲ್ಲೇ ಮತ್ತೆ ಭಾರತಕ್ಕೆ ಬರುತ್ತೇನೆ ! – ಅಮೆರಿಕದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್

ಅಮೆರಿಕದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಭಾರತೀಯರಿಗೆ ಸಂದೇಶ

ಪ್ರಧಾನ ಮಂತ್ರಿ ಮೋದಿ ಮತ್ತು ಅಮೆರಿಕದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್

ನವದೆಹಲಿ – ಅಮೆರಿಕದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಸಹವರ್ತಿ ಲಾರಾ ಲೂಮರ್ ಅವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಪ್ರಧಾನ ಮಂತ್ರಿ ಮೋದಿಯವರಿಗಾಗಿ ಟ್ರಂಪ್ ವಿಶೇಷ ಸಂದೇಶ ಕಳುಹಿಸಿದ್ದಾರೆ ಎಂದು ತಿಳಿಸಿದರು. ಲಾರಾ ಲೂಮರ್ ಅವರು ಮಾಹಿತಿ ನೀಡುತ್ತಾ, “ನಾನು ಈಗಷ್ಟೇ ಟ್ರಂಪ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದೆ. ಆಗ ಅವರು, ‘ನನ್ನದೊಂದು ಭಾರತಕ್ಕೆ ಸಂದೇಶವಿದೆ. ನಾನು ಭಾರತವನ್ನು ಪ್ರೀತಿಸುತ್ತೇನೆ, ಮೋದಿಯವರನ್ನು ಪ್ರೀತಿಸುತ್ತೇನೆ. ನನಗೆ ಭಾರತೀಯರೆಂದರೆ ತುಂಬಾ ಇಷ್ಟ. ಪ್ರಧಾನ ಮಂತ್ರಿ ಮೋದಿ ಒಬ್ಬ ಅತ್ಯುತ್ತಮ ನಾಯಕ ಮತ್ತು ನನ್ನ ಆತ್ಮೀಯ ಸ್ನೇಹಿತರು. ನಾನು ಶೀಘ್ರದಲ್ಲೇ ಮತ್ತೆ ಭಾರತಕ್ಕೆ ಬರುತ್ತೇನೆ ಎಂದು ದಯವಿಟ್ಟು ಅಲ್ಲಿನ ಜನರಿಗೆ ತಿಳಿಸಿ’ ಎಂದು ಹೇಳಿದರು.

ಭಾರತ ಮತ್ತು ಅಮೆರಿಕ ನಡುವೆ ಖನಿಜ ಒಪ್ಪಂದ

ಭಾರತದಲ್ಲಿನ ಅಮೆರಿಕ ರಾಯಭಾರಿ ಸರ್ಜಿಯೋ ಗೋರ್ ಅವರು ಮಾತನಾಡಿ, “ನಮ್ಮ ಎರಡು ದೇಶಗಳ ನಡುವಿನ ಸಹಕಾರದ ಪ್ರಮುಖ ಕ್ಷೇತ್ರಗಳಲ್ಲಿ ಖನಿಜ ಸಂಪತ್ತು ಕೂಡ ಒಂದು. ಈ ಖನಿಜಕ್ಕಾಗಿ ವಿಶ್ವಾಸಾರ್ಹ ಪೂರೈಕೆಯ ಸರಪಳಿ, ಆರ್ಥಿಕ ಬೆಳವಣಿಗೆ ಮತ್ತು ರಾಷ್ಟ್ರೀಯ ಭದ್ರತೆಗಾಗಿ ಅತ್ಯಗತ್ಯವಾಗಿದೆ. ಭಾರತ ಮತ್ತು ಅಮೆರಿಕ ಇಂದು ಒಂದು ಪ್ರಮುಖ ಖನಿಜ ಒಪ್ಪಂದವನ್ನು ಅಂತಿಮಗೊಳಿಸುವ ಹಂತಕ್ಕೆ ಬಂದಿವೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. ಈ ಒಪ್ಪಂದವು ಸುಧಾರಿತ ಉತ್ಪಾದನೆ, ಇಂಧನ ವ್ಯವಸ್ಥೆ ಮತ್ತು ತಂತ್ರಜ್ಞಾನಕ್ಕೆ ಅಗತ್ಯವಾದ ಪೂರೈಕೆ ಸರಪಳಿಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಮುಂದಿನ ಕೆಲವು ತಿಂಗಳಲ್ಲಿ ಈ ಒಪ್ಪಂದದ ಅಧಿಕೃತ ಘೋಷಣೆಯಾಗುವ ನಿರೀಕ್ಷೆಯಿದೆ,” ಎಂದು ಹೇಳಿದರು.