
ಟೋಕಿಯೊ (ಜಪಾನ್) – ಇರಾನ್-ಇಸ್ರೇಲ್ ಮತ್ತು ಅಮೆರಿಕ ನಡುವೆ ಯುದ್ಧದ ಕಾರ್ಮೋಡ ಕವಿದಿರುವ ಬೆನ್ನಲ್ಲೇ, ಇದೀಗ ಪೂರ್ವ ಏಷ್ಯಾದಲ್ಲೂ ಉದ್ವಿಗ್ನತೆ ನಿರ್ಮಾಣವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಉತ್ತರ ಕೊರಿಯಾವು ತನ್ನ ಪೂರ್ವ ಕರಾವಳಿಯ ಸಮುದ್ರಕ್ಕೆ (ಜಪಾನ್ ಸಮುದ್ರ) ಬರೋಬ್ಬರಿ 10 ಬ್ಯಾಲಿಸ್ಟಿಕ್ (ಖಂಡಾಂತರ) ಕ್ಷಿಪಣಿಗಳನ್ನು ಉಡಾವಣೆ ಮಾಡಿದೆ. ಉತ್ತರ ಕೊರಿಯಾದ ಈ ಕ್ರಮದ ನಂತರ ಜಪಾನ್ ತಕ್ಷಣವೇ ಎಚ್ಚರಿಕೆ ನೀಡಿದೆ. ಜಪಾನ್ ಪ್ರಧಾನ ಮಂತ್ರಿ ಕಾರ್ಯಾಲಯವು ‘ಎಕ್ಸ್’ ನಲ್ಲಿ ಮಾಹಿತಿ ನೀಡುತ್ತಾ, ಪ್ರಸ್ತುತ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ತಿಳಿಸಿದೆ. ಜಪಾನ್ ಪ್ರಧಾನಿ ಸನಾಎ ತಕೈಚಿ ಅವರು ಕ್ಷಿಪಣಿ ಉಡಾವಣೆ ಮಾಡಲಾದ ಮಾರ್ಗದಲ್ಲಿ ತಕ್ಷಣವೇ ತುರ್ತು ವ್ಯವಸ್ಥೆಯನ್ನು ಸಕ್ರಿಯಗೊಳಿಸಿದ್ದಾರೆ.
೧. ಉತ್ತರ ಕೊರಿಯಾದ ಈ ಹೊಸ ಕ್ರಮದಿಂದ ಈ ಪ್ರದೇಶದಲ್ಲಿ ಭದ್ರತೆಯ ಪ್ರಶ್ನೆ ನಿರ್ಮಾಣವಾಗಿದ್ದು, ಉದ್ವಿಗ್ನತೆ ಹೆಚ್ಚಾಗಿದೆ.
೨. ಉತ್ತರ ಕೊರಿಯಾದ ಕ್ಷಿಪಣಿ ಉಡಾವಣೆಯ ಬೆನ್ನಲ್ಲೇ ಜಪಾನಿನ ಕರಾವಳಿ ರಕ್ಷಣಾ ಪಡೆಯು ತಕ್ಷಣವೇ ಪ್ರತಿಕ್ರಿಯಿಸಿದ್ದು, ಸಮುದ್ರದಲ್ಲಿ ಸಂಚರಿಸುವ ನೌಕೆಗಳಿಗೆ ಎಚ್ಚರಿಕೆ ನೀಡಿದೆ.
೩. ಫೆಬ್ರವರಿ ೨೦೨೬ ರ ಸಾರ್ವತ್ರಿಕ ಚುನಾವಣೆಯಲ್ಲಿ ಐತಿಹಾಸಿಕ ಜಯ ದಾಖಲಿಸಿದ ನಂತರ, ತಾಕಾಯಚಿ ಅವರು ‘ಪ್ರಾದೇಶಿಕ ಭದ್ರತೆ ಮತ್ತು ಜಪಾನಿನ ಭೂಭಾಗದ ರಕ್ಷಣೆ ಎಂಬ ವಿಷಯಗಳ ಕಡೆಗೆ ನಾವು ಗಮನ ಹರಿಸುತ್ತೇವೆ’ ಎಂದು ಹೇಳಿದ್ದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation