ಸಂಭಲ್ (ಉತ್ತರ ಪ್ರದೇಶ): ಇರಾನ್ ಬೆಂಬಲಿತ ಮುಸ್ಲಿಮರಿಗೆ ಪೊಲೀಸ್ ಅಧಿಕಾರಿ ಎಚ್ಚರಿಕೆ!

ಸಂಭಲ್ (ಉತ್ತರ ಪ್ರದೇಶ) – “ವಿಶ್ವದ ಎರಡು ದೇಶಗಳ ನಡುವೆ ಯುದ್ಧ ನಡೆಯುತ್ತಿದೆ, ಆದರೆ ಭಾರತದಲ್ಲಿ ಕೆಲವರಿಗೆ ಅನಗತ್ಯವಾಗಿ ತುರಿಕೆ ಶುರುವಾಗಿದೆ. ಯಾರಿಗಾದರೂ ಬೇರೆ ದೇಶದ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ, ಅವರು ವಿಮಾನದ ಮೂಲಕ ಅಲ್ಲಿಗೆ ಹೋಗಿ ಬೆಂಬಲ ನೀಡಲಿ. ಭಾರತದಲ್ಲಿ ಅಂತರಾಷ್ಟ್ರೀಯ ವಿಷಯಗಳ ಕುರಿತು ಗದ್ದಲ ಮತ್ತು ಘೋಷಣೆ ಕೂಗುವುದನ್ನು ಸಹಿಸುವುದಿಲ್ಲ. ಮಸೀದಿಗಳ ಹೊರಗೆ ನಮಾಜ್ ಮಾಡಲು ಅವಕಾಶ ನೀಡುವುದಿಲ್ಲ. ಯಾರಾದರೂ ರಸ್ತೆಯಲ್ಲಿ ನಮಾಜ್ ಮಾಡುವುದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಸಂಭಲ್ ವಿಭಾಗೀಯ ಪೊಲೀಸ್ ಅಧಿಕಾರಿ ಕುಲದೀಪ್ ಕುಮಾರ್ ಅವರು ಇತ್ತೀಚೆಗೆ ಈದ್ ಮತ್ತು ಶುಕ್ರವಾರದ ನಮಾಜ್‌ಗಿಂತ ಮೊದಲು ಆಯೋಜಿಸಲಾಗಿದ್ದ ಶಾಂತಿ ಸಮಿತಿ ಸಭೆಯಲ್ಲಿ ಸ್ಥಳೀಯ ಮುಸ್ಲಿಮರಿಗೆ ಎಚ್ಚರಿಕೆ ನೀಡಿದರು.
‘ಈ ದೇಶ ಯಾರಪ್ಪನದ್ದಲ್ಲ!’ – ಸಂಸದ ಓವೈಸಿ ಟೀಕೆ
ಕುಲದೀಪ್ ಕುಮಾರ್ ಅವರ ಹೇಳಿಕೆಯನ್ನು ಸಂಸದ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ. ಸಭೆಯೊಂದರಲ್ಲಿ ಮಾತನಾಡಿದ ಅವರು, “ನಾವು ಎಲ್ಲಿಗೆ ಹೋಗಬೇಕು ಎಂದು ಹೇಳಲು ಈ ದೇಶ ಯಾರಪ್ಪನ ಸ್ವತ್ತಲ್ಲ. ದೇಶವು ಸಂವಿಧಾನದ ಪ್ರಕಾರ ನಡೆಯಬೇಕೋ ಅಥವಾ ಯಾರೋ ಹೇಳಿದಂತೆ ನಡೆಯಬೇಕೋ?” ಎಂದು ಓವೈಸಿ ಪ್ರಶ್ನಿಸಿದ್ದಾರೆ. (‘ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಮುಸ್ಲಿಮರದ್ದು’ ಎಂದು ಅಂದಿನ ಕಾಂಗ್ರೆಸ್ ಸರಕಾರದ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಹೇಳಿಕೆ ನೀಡಿದಾಗ ಓವೈಸಿ ಅವರು ಯಾಕೆ ಇಂತಹ ಟೀಕೆ ಮಾಡಿರಲಿಲ್ಲ? ಭಾರತದ ವಿಭಜನೆಯು ಧರ್ಮದ ಆಧಾರದ ಮೇಲೆ ನಡೆದು, ಹಿಂದೂಗಳಿಗೆ ಭಾರತ ಮತ್ತು ಮುಸ್ಲಿಮರಿಗೆ ಪಾಕಿಸ್ತಾನವನ್ನು ನೀಡಲಾಗಿತ್ತು. ಆದ್ದರಿಂದ ಈಗಲೂ ಯಾರಾದರೂ ‘ಮುಸ್ಲಿಮರಿಗೆ ಪಾಕಿಸ್ತಾನವನ್ನು ನೀಡಿದ್ದರಿಂದ ಅವರು ಅಲ್ಲಿಗೆ ಹೋಗಬೇಕು’ ಎಂದು ಹೇಳುತ್ತಿದ್ದರೆ, ಅದು ತಪ್ಪಾಗುವುದಿಲ್ಲ! – ಸಂಪಾದಕರು).
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ